Gold Forecast: ಐತಿಹಾಸಿಕ ಇಳಿಕೆಯತ್ತ ಮುಖ ಮಾಡಿದ ಚಿನ್ನದ ಬೆಲೆ, ಡಿಸೆಂಬರ್ ನಲ್ಲಿ ಚಿನ್ನದ ಬೆಲೆ ಇಷ್ಟಾಗಲಿದೆಯಂತೆ.

ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಂಡುಬಂದಿದ್ದು ಡಿಸೆಂಬರ್ ನಲ್ಲಿ ಚಿನ್ನದ ಬೆಲೆ ಬಹುತೇಕ ಇಳಿಕೆ ಆಗಲಿದೆ.

December 2023 Gold Price: ಚಿನ್ನದ ಬೆಲೆಯಲ್ಲಿ (Gold Price) ಇತ್ತೀಚಿಗೆ ಹೆಚ್ಚಿನ ಏರಿಕೆ ಕಂಡು ಬರುತ್ತಿದೆ. ಚಿನ್ನ ದಿನಕಳೆಯುತ್ತಿದಂತೆ ದುಬಾರಿಯಾಗುತ್ತಿದೆ. ಚಿನ್ನದ ದರದ ಏರಿಕೆಯಿಂದಾಗಿ ಚಿನ್ನದ ಮಾರಾಟದಲ್ಲಿ ಸ್ವಲ್ಪ ಮಟ್ಟಿನ ಕುಸಿತ ಕಂಡಿದೆ.

ಕಳೆದ ಎರಡು ವಾರಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಆಭರಣ ಖರೀದಿಸಲು ಸೂಕ್ತ ಸಮಯ ದೊರಕಿದೆ. ಇನ್ನು ಡಿಸೆಂಬರ್ ನಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಇಳಿಕೆ ಕಾಣಬಹುದಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆಯ ಇಂದಿನ ವಿವರ
ಒಂದು ಗ್ರಾಂ ಚಿನ್ನದ ಬೆಲೆ ಇಂದು 5,450 ರೂ. ಆಗಿದೆ. ನಿನ್ನೆಗಿಂತ ಇಂದು 20 ರೂ ಕಡಿಮೆಯಾಗಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 43,760 ರೂ. ಇದ್ದು ಇಂದು 43,600 ರೂ. ಆಗಿದೆ.

gold rate in December 2023
Image Credit: Everythingexperiential

ಎಂಟು ಗ್ರಾಂ ಚಿನ್ನದಲ್ಲಿ ಇಂದು 160 ರೂ. ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 54,700 ಇದ್ದು ಇಂದು 54,500 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು 200 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 5,47,000 ಇದ್ದು ಇಂದು 5,45,000 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 2,000 ರೂ. ಇಳಿಕೆಯಾಗಿದೆ.

ಡಿಸೆಂಬರ್ ನಲ್ಲಿ ಚಿನ್ನದ ಬೆಲೆ ಇಷ್ಟಾಗಲಿದೆಯಂತೆ
ಏಪ್ರಿಲ್ 1 ರಿಂದ ಹಣಕಾಸು ವರ್ಷ ಆರಂಭಗೊಂಡಿದೆ. ಈ ವರ್ಷದ ಹಣಕಾಸು ವರ್ಷ ಹಣದುಬ್ಬರದ ಪರಿಸ್ಥಿಯನ್ನು ಇನ್ನಷ್ಟು ಹೆಚ್ಚಿಸಿದೆ. ಆದರೆ ಹಣಕಾಸು ವರ್ಷದ ಆರಂಭಕ್ಕೂ ಮುನ್ನವೇ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿತ್ತು. ಕಳೆದ ವರ್ಷದಲ್ಲಿ 4,600 ರ ಗಡಿಯಲ್ಲಿದ್ದ ಚಿನ್ನದ ಬೆಲೆ ಇದೀಗ ಏಕಾಏಕಿ 5400 ಗಡಿ ತಲುಪಿದೆ.

Join Nadunudi News WhatsApp Group

gold rate in December 2023
Image Credit: Livemint

ಕಳೆದ ವರ್ಷದಲ್ಲಿ ಕೇವಲ ನಾಲ್ಕೇ ತಿಂಗಳಲ್ಲಿ 1,000 ರೂ. ಹೆಚ್ಚಳವಾಗಿದೆ. ಆದರೆ ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಡಿಸೇಂಬರ್ ನಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಕಳೆದ ಎರಡು ವಾರದಿಂದ ಚಿನ್ನದ ಬೆಲೆ ಬಹುತೇಕ ಇಳಿಕೆಯಾಗುತ್ತಿದೆ. ಇನ್ನು ಡಿಸೇಂಬರ್ ನಲ್ಲಿ ಚಿನ್ನದ ಬೆಲೆ 5,000 ರೂ ಆಗಲಿದೆ ಎನ್ನಲಾಗುತ್ತಿದೆ.

ಸದ್ಯ ಅಂತರಾಷ್ಟ್ರೀಯ ಮರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಆಗುತ್ತಿದ್ದು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಇಳಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ. 2023 ರ ಅಂತ್ಯದಲ್ಲಿ ಚಿನ್ನದ ಬೆಲೆ 5,000 ರೂ ಗಡಿಗೆ ಬಂದು ತಲುಪಲಿದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group