ದೀಪಿಕಾ ಪಡುಕೋಣೆ ರಣವೀರ್ ಅನ್ನು ಮದುವೆಯಾಗಲು ಅಸಲಿ ಕಾರಣ ಏನು ಗೊತ್ತಾ, ನಿಜಕ್ಕೂ ಆಗಿದ್ದೇನು ನೋಡಿ.

ನಟಿ ದೀಪಿಕಾ ಪಡುಕೋಣೆ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡದ ಐಶ್ವರ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ದೀಪಿಕಾ ಪಡುಕೋಣೆ ಈಗ ದೇಶದ ಟಾಪ್ ನಟಿ ಎಂದು ಹೇಳಬಹುದು. ಸದ್ಯ ಹಿಂದಿ ಚಿತ್ರರಂಗದಲ್ಲಿ ತನ್ನದೇ ಆದ ಹೆಸರನ್ನ ಮಾಡಿರುವ ನಟಿ ದೀಪಿಕಾ ಪಡುಕೋಣೆ ಅವರು ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ ಎಂದು ಹೇಳಬಹುದು. ಕಳೆದ ವಾರ ನಟಿ ದೀಪಿಕಾ ಪಡುಕೋಣೆ ಅವರ ಆರೋಗ್ಯದಲ್ಲಿ ಬಹಳ ಏರುಪೇರು ಆಗಿ ಅವರು ಆಸ್ಪತ್ರೆಯನ್ನ ಸೇರಿದ್ದು ಎಲ್ಲರಿಗೂ ತಿಳಿದೇ ಇದೆ. ನಟಿ ದೀಪಿಕಾ ಪಡುಕೋಣೆ ಅವರ ಹೃದಯದ ಬಡಿತದಲ್ಲಿ ಬಹಳ ಹೆಕ್ಕಲ್ಲ ಆದಕಾರಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಈಗ ಚೇತರಿಸಿಕೊಂಡಿದ್ದಾರೆ.

ಇನ್ನು ಇದರ ನಡುವೆ ಈಗ ಸಾಮಾಜಿಕ ಜಾಲತಾಣದಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಖ್ಯಾತ ನಟ ರಣವೀರ್ ಅವರನ್ನ ಮದುವೆಯಾಗಲು ಕಾರಣ ಏನು ಅನ್ನುವ ಸುದ್ದಿ ಸಕತ್ ವೈರಲ್ ಆಗಿದೆ. ಹೌದು ನಾಲ್ಕು ವರ್ಷದ ಹಿಂದೆ ನಟಿ ದೀಪಿಕಾ ಪಡುಕೋಣೆ ಅವರು ಖ್ಯಾತ ನಟ ರಣವೀರ್ ಜೊತೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದರು, ಆದರೆ ಈಗ ದೀಪಿಕಾ ಪಡುಕೋಣೆ ಅವರು ರಣವೀರ್ ಅವರನ್ನ ಮದುವೆಯಾಗಲು ಅಸಲಿ ಕಾರಣ ಏನು ಅನ್ನುವುದು ಬಹಿರಂಗವಾಗಿದೆ. ಹಾಗಾದರೆ ದೀಪಿಕಾ ಪಡುಕೋಣೆ ಅವರು ರಣವೀರ್ ಅನ್ನು ಮದುವೆಯಾಗಿದ್ದು ಯಾಕೆ ಅನ್ನುವುದನ್ನ ತಿಳಿಯೋಣ ಬನ್ನಿ.

Deepika and ranveer sing

ಹೌದು ನಾನೇಕೆ ರಣವೀರ್ ಜೊತೆ ಮದುವೆಯಾಗಿದ್ದು ಯಾಕೆ ಅನ್ನುವುದರ ಬಗ್ಗೆ ನಟಿ ದೀಪಿಕಾ ಪಡುಕೋಣೆ ಅವರು ಖಾಸಗಿ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ನಾವು ಒಬ್ಬರನ್ನ ಒಬ್ಬರು ತುಂಬಾ ಗೌರವಿಸುತ್ತೇವೆ ಮತ್ತು ನಾವಿಬರ್ರು ಒಳ್ಳೆಯ ಗಂಡ ಹೆಂಡತಿ ಅನ್ನುವುದಕ್ಕಿಂತ ಒಳ್ಳೆಯ ಸ್ನೇಹಿತರು ಎಂದು ಹೇಳಬಹುದು. ಒಬ್ಬರ ಕೆಲಸಕ್ಕೆ ಒಬ್ಬರು ಸಾಥ್ ಕೊಡುತ್ತೇವೆ ಈ ಕಾರಣಗಳಿಂದ ನಾವು ಮದುವೆಯಾಗಿದ್ದು ಎಂದು ಹೇಳಿದ್ದಾರೆ ನಟಿ ದೀಪಿಕಾ ಪಡುಕೋಣೆ. ರಾಮ್‌ಲೀಲಾ, ಬಾಜಿರಾವ್ ಮಸ್ತಾನಿ, ಪದ್ಮಾವತ್ ಸಿನೆಮಾಗಳಲ್ಲಿ ನಟಿ ದೀಪಿಕಾ ಮತ್ತು ರಣವೀರ್ ಒಟ್ಟಿಗೆ ನಟಿಸಿದ್ದರು ಮತ್ತು ಆ ಚಿತ್ರಗಳು ಸೂಪರ್ ಹಿಟ್ ಕೂಡ ಆಗಿತ್ತು.

ಈ ಚಿತ್ರಗಳಿಂದ ನಾವು ಒಬ್ಬರನ್ನ ಒಬ್ಬರು ಬಹಳ ಅರ್ಥ ಮಾಡಿಕೊಂಡೆವು ಎಂದು ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ. ಇದಾದ ನಂತರ ನಮ್ಮ ಮದ್ಯೆ ಭಾಂದವ್ಯ ಬಹಳ ಚನ್ನಾಗಿ ಬೆಳೆಯಿತು ಮತ್ತು ನನ್ನ ಬೆಸ್ಟ್ ಫ್ರೆಂಡ್ ನಮ್ಮ ಜೀವನದಲ್ಲಿ ನನ್ನ ಬಾಳಸಂಗಾತಿಯಾಗಿ ಬಂದ ಎಂದು ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ. ಇನ್ನು ಅಷ್ಟೇ ಅಲ್ಲದೆ ನಮ್ಮಿಬ್ಬರ ಜೋಡಿಯನ್ನ ಅಭಿಮಾನಿಗಳು ಕೂಡ ಮೆಚ್ಚಿಕೊಂಡರು ಎಂದು ಸಂದರ್ಶನದಲ್ಲಿ ಹೇಳಿದರು ದೀಪಿಕಾ. ಸ್ನೇಹಿತರೆ ರಣವೀರ್ ಮತ್ತು ದೀಪಿಕಾ ಪಡುಕೋಣೆ ಜೋಡಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Deepika and ranveer sing

Join Nadunudi News WhatsApp Group