Red And White Onion: ಕೆಂಪು ಈರುಳ್ಳಿ ಮತ್ತು ಬಿಳಿ ಈರುಳ್ಳಿಗಳಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ, ವೈದ್ಯರ ಸಲಹೆ

ನಿಮ್ಮ ಮನೆಯಲ್ಲಿ ನೀವು ಕೆಂಪು ಈರುಳ್ಳಿ ಬಳಸುತ್ತೀರಾ ಅಥವಾ ಬಿಳಿ ಈರುಳ್ಳಿ ಬಳಸುತ್ತೀರಾ ಹಾಗಿದ್ದಲ್ಲಿ ಇಲ್ಲಿದೆ ಈ ಎರಡು ಈರುಳ್ಳಿಗಳ ಬಗ್ಗೆ ಸಂಪೂರ್ಣ ಮಾಹಿತಿ

Difference Between Red Onion And White Onion: ಪ್ರತಿದಿನ ಹೆಚ್ಚಾಗಿ ಎಲ್ಲಾರ ಮನೆಯಲ್ಲೂ ಅಡುಗೆಗೆ ಈರುಳ್ಳಿಯನ್ನು ಬಳಸುತ್ತಾರೆ. ಈರುಳ್ಳಿಯನ್ನು ನಾವು ಉತ್ತಮ ತರಕಾರಿ ಎಂದು ಭಾವಿಸಿದ್ದೇವೆ . ಹೆಚ್ಚಾಗಿ ಎಲ್ಲಾ ಅಡುಗೆಯಲ್ಲೂ ಈರುಳ್ಳಿ ಬಹುಮುಖ್ಯ ಆಗಿರುತ್ತದೆ.

ನಮಗೆ ಎರಡು ರೀತಿಯ ಈರುಳ್ಳಿ ಲಭ್ಯವಿದೆ, ಬಿಳಿ ಈರುಳ್ಳಿ ಮತ್ತು ಕೆಂಪು ಈರುಳ್ಳಿ. ಇವುಗಳಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದರ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಈ ಎರಡು ರೀತಿಯ ಈರುಳ್ಳಿಗಳು ನಮ್ಮ ಆರೋಗ್ಯ ಕಾಪಾಡುವಲ್ಲಿ ಎಷ್ಟು ಪ್ರಯೋಜನಕಾರಿ ಆಗಿದೆ ಹಾಗು ಇದರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು ತಿಳಿಯಿರಿ.

Red Onion And White Onion
Image Credit: Slurrp

ಈರುಳ್ಳಿಯಲ್ಲಿ ಯಾವ ಈರುಳ್ಳಿ ಆರೋಗ್ಯಕ್ಕೆ ಉತ್ತಮ

ಈರುಳ್ಳಿಯಲ್ಲಿ ಒಳ್ಳೆಯ ಈರುಳ್ಳಿ ಹಾಗು ಕೆಟ್ಟ ಈರುಳ್ಳಿ ಅಂತೆಲ್ಲಾ ಇರುವುದಿಲ್ಲ. ಆದರೆ ಬಿಳಿ ಈರುಳ್ಳಿಯಲ್ಲಿ ಇರುವ ಅಂಶ ಕೆಂಪು ಈರುಳ್ಳಿಯಲ್ಲಿ ಇರುವುದಿಲ್ಲ, ಕೆಂಪು ಈರುಳ್ಳಿಯಲ್ಲಿ ಇರುವ ಸತ್ವ ಬಿಳಿ ಈರುಳ್ಳಿಯಲ್ಲಿ ಇರುವುದಿಲ್ಲ. 100 ಗ್ರಾಂ ಕೆಂಪು ಈರುಳ್ಳಿಯಲ್ಲಿ 12 ಗ್ರಾಂ ಫೈಬರ್ ಇದ್ದರೆ, ಅದೇ ಬಿಳಿ ಈರುಳ್ಳಿಯಲ್ಲಿ 10 ಗ್ರಾಂ ಫೈಬರ್ ಇರುತ್ತದೆ. Red And White Onion ಎರಡರಲ್ಲೂ ಕ್ಯಾಲೊರಿಗಳು ಕಡಿಮೆ. 100 ಗ್ರಾಂ ಹಸಿ ಕೆಂಪು ಈರುಳ್ಳಿಯಲ್ಲಿ 37 ಕ್ಯಾಲೊರಿಗಳಿದ್ದರೆ, ಬಿಳಿ ಈರುಳ್ಳಿಯಲ್ಲಿ 42 ಕ್ಯಾಲೊರಿಗಳಿವೆ. ವಿಟಮಿನ್ ಸಿ ಎರಡರಲ್ಲೂ ಬಹುತೇಕ ಒಂದೇ ಆಗಿರುತ್ತದೆ.

Difference Between Red Onion And White Onion
Image Credit: Cookist

ಕೆಂಪು ಈರುಳ್ಳಿ ಹಾಗು ಬಿಳಿ ಈರುಳ್ಳಿ ನಡುವಿನ ವ್ಯತ್ಯಾಸಗಳು ಹೀಗಿದೆ

Join Nadunudi News WhatsApp Group

ಕೆಂಪು ಈರುಳ್ಳಿಯಲ್ಲಿ ಕಬ್ಬಿಣಾಂಶ ಹಾಗು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಬಿಳಿ ಈರುಳ್ಳಿಯಲ್ಲಿ ಕ್ಯಾಲ್ಸಿಯಂ ಇರುವುದಿಲ್ಲ. ಈರುಳ್ಳಿ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿದ್ದರೆ, ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣಲಕ್ಷಣಗಳ ವಿಷಯಕ್ಕೆ ಬಂದಾಗ ಕೆಂಪು ಈರುಳ್ಳಿ ಇನ್ನೂ ಉತ್ತಮವಾಗಿದೆ. ಬಿಳಿ ಈರುಳ್ಳಿಗಿಂತ ಕೆಂಪು ಈರುಳ್ಳಿ ಮಾನವ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ಗಾಢ ಬಣ್ಣದ ಈರುಳ್ಳಿಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣಗಳು ಹೆಚ್ಚು ಎಂದು ತಿಳಿದುಬಂದಿದೆ. ಕೆಂಪು ಈರುಳ್ಳಿಗೆ ಹೋಲಿಸಿದರೆ ಬಿಳಿ ಈರುಳ್ಳಿ ಹೆಚ್ಚು ಪ್ರತಿಜೀವಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಒಟ್ಟಾರೆಯಾಗಿ ಈ ಎರಡು ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು ಎನ್ನಬಹುದು .

Join Nadunudi News WhatsApp Group