Diwali Bonus: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, ದೀಪಾವಳಿ ಹಬ್ಬದ ಬೋನಸ್ ಘೋಷಿಸಿದ ಮೋದಿ ಸರ್ಕಾರ.

ನೌಕರರಿಗೆ ದೀಪಾವಳಿ ಹಬ್ಬದ ಬೋನಸ್ ಅನ್ನು ಕೇಂದ್ರ ಹಣಕಾಸು ಸಚಿವಾಲಯ ಘೋಷಿಸಿದೆ.

Diwali Bonus For Govt Employees: ಸದ್ಯ ದೇಶದಲ್ಲಿ ಸರ್ಕಾರೀ ನೌಕರರ ವೇತನ ಹೆಚ್ಚಳದ ಸುದ್ದಿಗಳು ದಿನಕ್ಕೊಂದು ಹೊಸ ಹೊಸ ಸುದ್ದಿ ಹೊರಬೀಳುತ್ತಿದೆ. ಸರ್ಕಾರೀ ನೌಕರರ 7 ನೇ ವೇತನದ ಅಡಿಯಲ್ಲಿ ತುಟ್ಟಿಭತ್ಯೆ ಹೆಚ್ಚಳ ಸರ್ಕಾರೀ ನೌಕರರ ನಿರೀಕ್ಷೆಯಾಗಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರ ನೌಕರರ ತುಟ್ಟಿಭತ್ಯೆ October ನಲ್ಲಿಯೇ ಹೆಚ್ಚಿಯೋಸುವುದಾಗಿ ಘೋಷಿಸಿದೆ. ಹೀಗಾಗಿ ನೌಕರರು ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿಯೇ ಇದ್ದಾರೆ ಎನ್ನಬಹುದು.

Diwali Bonus For Govt Employees
Image Credit: Informalnewz

ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್
ಸದ್ಯ ಕೇಂದ್ರದ ಮೋದಿ ಸರ್ಕಾರ ಕೇಂದ್ರ ನೌಕರರಿಗೆ ಬಿಗ್ ಅಪ್ಡೇಟ್ ನೀಡಿದೆ. ಕೇಂದ್ರ ನೌಕರರಿಗೆ ದೀಪಾವಳಿ ಗಿಫ್ಟ್ ನೀಡಲು ಮೋದಿ ಸರ್ಕಾರ ಬೋನಸ್ ಘೋಷಿಸಿದೆ. Group B ಮತ್ತು Group C ವರ್ಗದ ನೌಕರರು 30 ದಿನಗಳ ವೇತನಕ್ಕೆ ಸಮಾನವಾದ ಹಣವನ್ನು ದೀಪಾವಳಿ ಉಡುಗೊರೆಗಿ ಪಡೆಯಲಿದ್ದಾರೆ. ಕೇಂದ್ರ ಸರ್ಕಾರೀ ನೌಕರರಿಗೆ Non-Productivity Linked Bonus (ತಾತ್ಕಾಲಿಕ ಬೋನಸ್) ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ದೀಪಾವಳಿ ಹಬ್ಬದ ಬೋನಸ್ ಪಡೆಯಲು ಯಾರು ಅರ್ಹರು..?
ಈವರೆಗೆ on-Productivity Linked Bonus ಯೋಜನೆಯ ವ್ಯಾಪ್ತಿಗೆ ಒಳಪಡದ ಕೇಂದ್ರ ಸರ್ಕಾರದ Group B ಮತ್ತು Group C ವರ್ಗದ ಅಡಿಯಲ್ಲಿ ಗಜೆಟೆಡ್ ಅಲ್ಲದ ಉದ್ಯೋಗಿಗಳಿಗೆ ಈ ದೀಪಾವಳಿ ಬೋನಸ್ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಗಜೆಟೆಡ್ ಅಲ್ಲದ ಉದ್ಯೋಗಿಗಳಿಗೆ 2022 -23 ನೇ ಸಾಲಿಗೆ 7000 ರೂ. ಗಳ ಬೋನಸ್ ಅನ್ನು ಕೇಂದ್ರ ಹಣಕಾಸು ಸಚಿವಾಲಯ ಘೋಷಿಸಿದೆ.

Join Nadunudi News WhatsApp Group

ಇನ್ನು 2023 ರ ಮಾರ್ಚ್ 31 ರವರೆಗೆ ಸೇವೆಯಲ್ಲಿದ್ದ ಮತ್ತು 2022 -23 ನೇ ಸಾಲಿನಲ್ಲಿ ಕನಿಷ್ಠ 6 ತಿಂಗಳು ಕೆಲಸ ಮಾಡಿದ ಕೇಂದ್ರ ಸರ್ಕಾರೀ ನೌಕರರು ಈ ಬೋನಸ್ ಅನ್ನು ಪಡೆಯಲು ಅರ್ಹಾರಾಗಿರುತ್ತಾರೆ. ಇನ್ನು ಕೇಂದ್ರ ನೌಕರರ ತುಟ್ಟಿಭತ್ಯೆ ಹೆಚ್ಚಳದ ವಿಚಾರಕ್ಕೆ ಬಂದರೆ, ಸದ್ಯದಲ್ಲೇ DA ಶೇ. 4 ರಷ್ಟು ಹೆಚ್ಚಾಗುವ ಮೂಲಕ ಕೇಂದ್ರ ನೌಕರರ ತುಟ್ಟಿಭತ್ಯೆ ಶೇ. 46 ಕ್ಕೆ ತಲುಪುವ ಸಾಧ್ಯತೆ ಹೆಚ್ಚಿದೆ ಎನ್ನುವ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Join Nadunudi News WhatsApp Group