Yuva Nidhi Application: ಯುವ ನಿಧಿ ಯೋಜನೆಯ ಇನ್ನೊಂದು ಬಿಗ್ ಅಪ್ಡೇಟ್, ಡಿ 21 ಕ್ಕೆ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ

ಯುವ ನಿಧಿ ಯೋಜನೆಯ ಇನ್ನೊಂದು ಬಿಗ್ ಅಪ್ಡೇಟ್ ಬಿಡುಗಡೆ

Documents Required for Karnataka Yuva Nidhi Scheme: ರಾಜ್ಯದಲ್ಲಿ ಈಗ ಎಲ್ಲಾ ಯುವಕ ಯುವತಿಯರ ಗಮನ ಯುವನಿಧಿ ಯೋಜನೆಯತ್ತ. ಯಾಕೆಂದರೆ ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೂ ಬರುವ ಮುನ್ನ ನೀಡಿದ 5 ಗ್ಯಾರೆಂಟಿ ಯೋಜನೆಗಳ ಪೈಕಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 4 ಯೋಜನೆಗಳು ಜಾರಿಗೆ ಬಂದು ಹಲವಾರು ತಿಂಗಳುಗಳೇ ಕಳೆದಿದೆ.

ಆದ್ರೆ ನಿರುದ್ಯೋಗಿ ಗಳಿಗೆ ಸಂಬಂಧಿಸಿದ ಯೋಜನೆ ಯುವನಿಧಿ ಯೋಜನೆ ಮಾತ್ರ ಇನ್ನು ಜಾರಿಗೆ ಬಂದಿಲ್ಲ ಹಾಗಾಗಿ ಈಗ ಯುವನಿಧಿ ಯೋಜನೆಯ ಕಡೆ ಎಲ್ಲಾರ ಗಮನ ಎನ್ನಬಹುದು. ಹಾಗೆಯೇ ಈಗ ಯುವನಿಧಿ ಯೋಜನೆಯ ಕುರಿತು ಸರಕಾರ ಒಂದು ಮಾಹಿತಿಯನ್ನು ಹೊರಡಿಸಿದ್ದು ಸದ್ಯದಲ್ಲೇ ಈ ಯೋಜನೆಗೆ ಚಾಲನೆ ನೀಡಲಾಗುತ್ತದೆ.

Yuva Nidhi Scheme 2023
Image Credit: Onlineseekhe

ಹೊಸ ವರ್ಷದಲ್ಲಿ ಯುವನಿಧಿ ಯೋಜನೆ ಪ್ರಾರಂಭ

ರಾಜ್ಯ ಸರಕಾರದ ಆದೇಶದಂತೆ, 2023 ರಲ್ಲಿ ಪದವಿ ಮತ್ತು ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿ, ಆರು ತಿಂಗಳಾದ್ರೂ ಉದ್ಯೋಗ ಸಿಗದೆ ಪರದಾಡುತ್ತಿರುವ ಯುವಕ-ಯುವತಿಯರಿಗೆ ಯುವನಿಧಿ ಯೋಜನೆಯಿಂದ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದು, ಈ ಯೋಜನೆಯನ್ನು ಜನವರಿಯಲ್ಲಿ ಪ್ರಾರಂಭ ಮಾಡಲಾಗುವುದು ಎನ್ನಲಾಗಿದೆ.

ಅದಕ್ಕೂ ಮೊದಲು ಈ ತಿಂಗಳ ಅಂತ್ಯಕ್ಕೆ ನೋಂದಣಿ ಪ್ರಕ್ರಿಯೆ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ. ಪದವಿ ಅಥವಾ ಡಿಪ್ಲೋಮಾ ಉತ್ತೀರ್ಣರಾಗಿ ಆರು ತಿಂಗಳಾದ್ರೂ ಕೆಲಸ ಸಿಗದವರು ಯೋಜನೆಯ ಲಾಭ ಪಡೆಯಲು ಅರ್ಹರಾಗಿರಲಿದ್ದಾರೆ. ಜೊತೆಗೆ ಉನ್ನತ ಶಿಕ್ಷಣ ಪಡೆಯಲು ಸೇರ್ಪಡೆಯಾಗಿರಬಾರದಾಗಿದೆ. ಸದ್ಯ ಉದ್ಯೋಗ ದೊರಕದವರು ಎರಡು ವರ್ಷಗಳ ವರೆಗೆ ಯೋಜನೆಯ ಫಲಾನುಭವಿಗಳಾಗಿರಲಿದ್ದಾರೆ.

Join Nadunudi News WhatsApp Group

Documents Required for Karnataka Yuva Nidhi Scheme
Image Credit: Karnataka News Today

ಯುವನಿಧಿ ಯೋಜನೆಗೆ ಅರ್ಜಿ ಹಾಕಲು ಬೇಕಾಗಿರುವ ದಾಖಲೆಗಳು
ಯುವನಿಧಿ ಯೋಜನೆಗೆ ಅರ್ಜಿ ಹಾಕುವ ಅಭ್ಯರ್ಥಿಯ ಆಧಾರ್ ಕಾರ್ಡ್,10ನೇ ತರಗತಿ ಅಂಕಪಟ್ಟಿ, ದ್ವಿತೀಯ ಪಿಯುಸಿ ಅಂಕಪಟ್ಟಿ, ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ, ಡಿಪ್ಲೊಮಾ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ, ಮೊಬೈಲ್ ನಂಬರ್, ಬ್ಯಾಂಕ್ ಖಾತೆ ವಿವರಗಳು ಸೆಲ್ಫ್ ಡಿಕ್ಲೆರೇಷನ್ ಪ್ರತಿ ಈ ಎಲ್ಲಾ ದಾಖಲೆಗಳು ಯುವನಿಧಿ ಯೋಜನೆಗೆ ಅರ್ಜಿ ಹಾಕಲು ಕಡ್ಡಾಯವಾಗಿರುತ್ತದೆ.

ಯುವನಿಧಿ ಯೋಜನೆಯ ಕುರಿತು ಮಾಹಿತಿ
2022-2023ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ಇದಕ್ಕಿಂತ ಹಿಂದೆ ಪದವಿ ಅಥವಾ ಡಿಪ್ಲೋಮಾ ಮುಗಿಸಿದವರಿಗೆ ಭತ್ಯೆ ಸಿಗಲ್ಲ ಎಂದು ವರದಿಯಾಗಿದೆ. ಪದವಿ ವಿದ್ಯಾರ್ಥಿಗಳಿಗೆ ಮಾಸಿಕ 3 ಸಾವಿರ ರೂ. ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿದವರಿಗೆ ಮಾಸಿಕ 1,500 ರೂ. ಸಹಾಯಧನ ನೀಡಲಾಗುತ್ತದೆ. ಒಂದು ವೇಳೆ ಎರಡು ವರ್ಷದೊಳಗೆ ಉದ್ಯೋಗ ದೊರೆತರೆ ಅವರನ್ನು ಯೋಜನೆಯ ಫಲಾನುಭವಿ ಪಟ್ಟಿಯಿಂದ ಹೊರಗಿಡಲಾಗುತ್ತದೆ.

Join Nadunudi News WhatsApp Group