Donkey Milk: ಮನೆಯಲ್ಲಿ ಈ ತಳಿಯ ಕತ್ತೆ ಸಾಕಾಣಿಕೆ ಮಾಡಿದರೆ ತಿಂಗಳಿಗೆ 3 ಲಕ್ಷ ಲಾಭ, ಇಂದೇ ಆರಂಭಿಸಿ.

ಮನೆಯಲ್ಲಿ ಈ ತಳಿಯ ಕತ್ತೆ ಸಾಕಾಣಿಕಾ ಮಾಡಿದರೆ ತಿಂಗಳಿಗೆ 3 ಲಕ್ಷ ಲಾಭ

Donkey Farming: ದೇಶದಲ್ಲಿ ಸಾಕಷ್ಟು ಜನರು ಉದ್ಯೋಗ ಇಲ್ಲದೆ ಹಾಗೆಯೆ ಖಾಲಿ ಕುಳಿತಿದ್ದಾರೆ. ವಿದ್ಯಾರ್ಹತೆಗೆ ತಕ್ಕ ಉದ್ಯೋಗವಿಲ್ಲದೆ ಅದೆಷ್ಟೋ ಜನ ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ. ಇನ್ನು ಉದ್ಯೋಗ ಮಾಡಲು ಸಾಕಷ್ಟು ಆಯ್ಕೆಗಳಿರುತ್ತದೆ.

ಆದರೆ ಉದ್ಯೋಗದ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳುವುದು ಅಗತ್ಯ. ಸರ್ಕಾರೀ ಕೆಲಸಕ್ಕಿಂತಲೂ ಹೆಚ್ಚಿನ ಆದಾಯವನ್ನು ಗಳಿಸುವಂತಹ ಅದೆಷ್ಟೋ ಕೆಲಸಗಳಿವೆ. ಅದರಲ್ಲಿ ಕತ್ತೆ (Donkey) ಸಾಕಾಣಿಕೆ ಕೂಡ ಒಂದಾಗಿದೆ. ಗುಜರಾತ್ ಮೂಲದ ವ್ಯಕ್ತಿಯೊಬ್ಬ ಕತ್ತೆ ಸಾಕಾಣಿಕೆ ಮಾಡಿ ಸರ್ಕಾರೀ ಉದ್ಯೋಗಿಗಳಿಗಿಂತಲೂ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದಾರೆ.

Donkey Farming Business in India
Image Credit: Linkedin

ಮನೆಯಲ್ಲಿ ಈ ತಳಿಯ ಕತ್ತೆ ಸಾಕಾಣಿಕಾ ಮಾಡಿದರೆ ತಿಂಗಳಿಗೆ 3 ಲಕ್ಷ ಲಾಭ
ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ವ್ಯವಹಾರಗಳಿಗೂ ಕೂಡ ಬೇಡಿಕೆ ಇರುತ್ತದೆ. ಕತ್ತೆ ಸಾಕಾಣಿಕೆಯಿಂದಲೂ ಲಕ್ಷ ಲಕ್ಷ ಆದಾಯವನ್ನು ಗಳಿಸಬಹುದು. ಗುಜರಾತ್‌ ನ ಧೀರೇನ್ ಸೋಲಂಕಿ ಅವರು ತಮ್ಮ ಅಧ್ಯಯನದ ನಂತರ ಸರ್ಕಾರಿ ಉದ್ಯೋಗಕ್ಕಾಗಿ ಬಹಳ ದಿನಗಳ ತಯಾರಿ ನಡೆಸಿದರು. ಕೆಲವು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದರೂ ಸಮಾಧಾನವಾಗಲಿಲ್ಲ. ಆರ್ಥಿಕವಾಗಿ ತೃಪ್ತರಾಗದ ಕಾರಣ ಉದ್ಯೋಗವಲ್ಲದೆ ಹೊಸ ಆದಾಯದ ಮಾರ್ಗಗಳನ್ನು ಹುಡುಕತೊಡಗಿದರು.

ದಕ್ಷಿಣ ಭಾರತದಲ್ಲಿ ಕತ್ತೆ ಸಾಕಾಣಿಕೆ ಕ್ರಮೇಣ ಜನಪ್ರಿಯವಾಗುತ್ತಿದೆ ಎಂದು ಅವರು ತಿಳಿದುಕೊಂಡರು. ಅಗತ್ಯ ಮಾಹಿತಿ ಸಂಗ್ರಹಿಸಿದರು. ಎಂಟು ತಿಂಗಳ ಹಿಂದೆ ಹುಟ್ಟೂರಿನಲ್ಲಿ 20 ಕತ್ತೆಗಳೊಂದಿಗೆ ಫಾರ್ಮ್ ಆರಂಭಿಸಿದ್ದರು. ಇದಕ್ಕಾಗಿ ಅವರು 22 ಲಕ್ಷ ರೂ. ಖರ್ಚು ಮಾಡಿದ್ದರು. ಈಗ ಅವನ ಬಳಿ 42 ಕತ್ತೆಗಳಿವೆ. ಅವರಿಂದ ಹಾಲು ಸಂಗ್ರಹಿಸಿ ದಕ್ಷಿಣ ಭಾರತದ ಗ್ರಾಹಕರಿಗೆ ಸರಬರಾಜು ಮಾಡಲಾಗುತ್ತದೆ. ಕತ್ತೆ ಹಾಲು ಮಾರಾಟ ಮಾಡುವ ಮೂಲಕ ಧೀರೆನ್ ತಿಂಗಳಿಗೆ 2 ರಿಂದ 3 ಲಕ್ಷ ರೂ. ಆದಾಯ ಗಳಿಸುತ್ತಾರೆ.

Donkey Farming
Image Credit: Newindianexpress

ಒಂದು ಲೀಟರ್ ಕತ್ತೆ ಹಾಲಿನ ಬೆಲೆ ಎಷ್ಟಿದೆ ಗೊತ್ತಾ..?
ಒಂದು ಲೀಟರ್ ಕತ್ತೆ ಹಾಲಿನ ಬೆಲೆ 5,000 ರಿಂದ 7,000 ರೂ.ಗಳ ನಡುವೆ ಇದೆ. ಹಾಲು ತಾಜಾವಾಗಿರಲು ಫ್ರೀಜರ್‌ ಗಳಲ್ಲಿ ಶೇಖರಿಸಿಡುವುದು. ಸೋಂಕುಗಳು, ನಾಯಿಕೆಮ್ಮು, ವೈರಲ್ ಜ್ವರ ಮತ್ತು ಅಸ್ತಮಾಗಳಿಗೆ ಕತ್ತೆ ಹಾಲನ್ನು ಔಷಧಿಯಾಗಿ ಬಳಸಲಾಗುತ್ತದೆ.

Join Nadunudi News WhatsApp Group

ಈ ಹಾಲುಗಳಲ್ಲಿ ಕೊಬ್ಬಿನಂಶ ಕಡಿಮೆ, ಆದರೆ ವಿಟಮಿನ್ ಎ, ಬಿ, ಬಿ1, ಬಿ12, ಸಿ, ಡಿ ಮತ್ತು ಇ ಸಮೃದ್ಧವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಕತ್ತೆ ಹಾಲು ನಿದ್ರಾಹೀನತೆ, ಅಸಿಡಿಟಿ, ಎಸ್ಜಿಮಾ, ಸಿಫಿಲಿಸ್, ಸ್ಕೇಬಿಸ್, ಮುಂತಾದ ಸೋಂಕುಗಳಿಗೆ ಉತ್ತಮ ಔಷಧಿ ಎಂದು ಹೇಳಲಾಗುತ್ತದೆ. ಕತ್ತೆಯ ಹಾಲಿನಿಂದ ಫೇರ್ ನೆಸ್ ಕ್ರೀಮ್, ಶಂಪೂ, ಲಿಪ್ ಬಾಮ್, ಬಾಡಿ ವಾಶ್ ಮುಂತಾದ ಸೌಂದರ್ಯ ವರ್ಧಕಗಳನ್ನು ತಯಾರಿಸಲಾಗುತ್ತದೆ.

Donkey Farming Profits
Image Credit: Curlytales

Join Nadunudi News WhatsApp Group