Driving Licence: RTO ಕಚೇರಿಗೆ ಹೋಗದೆ ಮನೆಯಲ್ಲಿಯೇ ಡ್ರೈವಿಂಗ್ ಲೈಸನ್ಸ್ ಮಾಡಿಸುವುದು ಹೇಗೆ…? ಇಲ್ಲಿದೆ ಡೀಟೇಲ್ಸ್

ಇನ್ನುಮುಂದೆ Driving Licence ಅನ್ನು ಪಡೆಯಲು RTO ಗೆ ಭೇಟಿ ನೀಡಬೇಕಿಲ್ಲ

Driving Licence Online Apply Process: ಭಾರತದಲ್ಲಿ ವಾಹನ ಸವಾರರಿಗೆ Driving Licence ಮುಖ್ಯ ಪುರಾವೆಯಾಗಿದೆ. ವಾಹನ ಚಲಾಯಿಸುವ ಪ್ರತಿಯೊಬ್ಬರೂ ಕೂಡ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದುವುದು ಅಗತ್ಯ. ಭಾರತದ್ಲಲಿ 18 ವರ್ಷ ಮೇಲ್ಪಟ್ಟವರಿಗೆ Driving Licence ಅನ್ನು ನೀಡಲಾಗುತ್ತದೆ.

18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿಯು ಚಾಲನಾ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬಹುದು. ಸದ್ಯ ಸಾರಿಗೆ ಇಲಾಖೆ ಚಾಲನಾ ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ನೀವು ಯಾವುದೇ ಕಷ್ಟವಲ್ಲದೆ ಸುಲಭವಾಗಿ ಚಾಲನಾ ಪರವಾನಗಿಯನ್ನು ಪಡೆಯಬಹುದು.

Driving Licence Latest Update
Image Credit: Zee News

ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಚಿಂತಿಸುವ ಅಗತ್ಯವಿಲ್ಲ
ಡ್ರೈವಿಂಗ್ ಲೈಸನ್ಸ್ ಗಾಗಿ RTO ಆಫೀಸ್ ಗೆ ಆಗಾಗ ಅಲೆದಾಡಬೇಕಾಗಿತ್ತು. ಆದರೆ ನೀವು ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳಲು ಕಷ್ಟಪಡಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಕಾನೂನುಗಳು ಮತ್ತು ಕಲಿಕಾ ಪರವಾನಗಿಗಳ ಭಯದಿಂದಾಗಿ ಕೇಂದ್ರ ಸಾರಿಗೆ ಸಚಿವಾಲಯವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನುಮುಂದೆ ನೀವು Driving Licence ಅನ್ನು ಪಡೆಯಲು RTO ಗೆ ಭೇಟಿ ನೀಡಬೇಕೆಂದಿಲ್ಲ.

RTO ಕಚೇರಿಗೆ ಹೋಗದೆ ಮನೆಯಲ್ಲಿಯೇ ಡ್ರೈವಿಂಗ್ ಲೈಸನ್ಸ್ ಮಾಡಿಸುವುದು ಹೇಗೆ…?
•ನೀವು ರಸ್ತೆ ಸಾರಿಗೆ ಇಲಾಖೆಯ https://parivahan.gov.in/parivahan/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮನೆಯಲ್ಲಿಯೇ ಕುಳಿತು ಅರ್ಜಿಯನ್ನು ಸಲ್ಲಿಸಬಹುದು.

•ನೀವು ನಿಮ್ಮ ಮೊಬೈಲ್‌ ನಿಂದ ಆನ್‌ ಲೈನ್‌ ನಲ್ಲಿ ಅಥವಾ ಯಾವುದೇ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

•ನೀವು ಮಾನ್ಯತೆ ಪಡೆದ ಡ್ರೈವಿಂಗ್ ತರಬೇತಿ ಶಾಲೆಯಲ್ಲಿ ನೋಂದಾಯಿಸಿಕೊಳ್ಳಬೇಕು.

•ತರಭೇತಿ ಶಾಲೆಯಲಿ ನೀವು ತರಬೇತಿ ಮತ್ತು ಪರೀಕ್ಷೆಯನ್ನು ನೀಡಬೇಕಾಗುತ್ತದೆ, ನಂತರ ಶಾಲೆಯು ನಿಮಗೆ ಕಲಿಕೆಯ ಚಾಲನಾ ಪರವಾನಗಿ ಪ್ರಮಾಣಪತ್ರವನ್ನು ನೀಡುತ್ತದೆ.

Driving Licence Apply Online Process
Image Credit: Navbharattimes

•ಈ ಪ್ರಮಾಣಪತ್ರದ ಮೂಲಕ ನೀವು 6 ತಿಂಗಳೊಳಗೆ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು, ಇದಕ್ಕಾಗಿ ನೀವು ಆರ್‌ಟಿಒ ಕಚೇರಿಗೆ ಹೋಗಬೇಕಾಗಿಲ್ಲ.

•ಕಲಿಕೆಯ ಚಾಲನಾ ಪರವಾನಗಿ ಪ್ರಮಾಣಪತ್ರವು 6 ತಿಂಗಳವರೆಗೆ ಮಾನ್ಯವಾಗಿರುತ್ತದೆ, 6 ತಿಂಗಳೊಳಗೆ ನೀವು ಅದರ ಮೂಲಕ ನಿಮ್ಮ ಚಾಲನಾ ಪರವಾನಗಿಯನ್ನು ಮಾಡಬಹುದು.

•ಇನ್ನು ಚಾಲನಾ ಪರವಾನಗಿ ಪಡೆಯಲು ನೀವು 300 ರಿಂದ 500 ರೂ. ಗಳ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ರಾಜ್ಯದಿಂದ ರಾಜ್ಯಕ್ಕೆ ಶುಲ್ಕಗಳು ಬದಲಾಗುತ್ತವೆ.

•ಈ ದಾಖಲೆ ಇದ್ದರೆ ಮಾತ್ರ ಅರ್ಜಿ ಸಲ್ಲಿಕೆ ಸಾಧ್ಯ
*ಆಧಾರ್ ಕಾರ್ಡ್
*ಪಾಸ್ಪೋರ್ಟ್ ಸೈಜ್ ಫೋಟೋ
*8ನೇ ಅಥವಾ 10ನೇ ಅಂಕಗಳು
*ಪ್ಯಾನ್ ಕಾರ್ಡ್
*ಮತದಾರರ ಗುರುತಿನ ಚೀಟಿ
*ಪಡಿತರ ಚೀಟಿ
*ಮೊಬೈಲ್ ನಂ

Join Nadunudi News WhatsApp Group