BBK 10: ಉಲ್ಟಾ ಆಯಿತು ಡ್ರೋನ್ ಪ್ರತಾಪ್ ಲೆಕ್ಕಾಚಾರ, ಟಾಸ್ಕ್ ನಲ್ಲಿ ದೊಡ್ಡ ಎಡವಟ್ಟು ಮಾಡಿಕೊಂಡ ಪ್ರತಾಪ್.

ಬಿಗ್ ಮಿಸ್ಟೇಕ್ ಮಾಡಿಕೊಂಡ ಟೀಮ್ ಕ್ಯಾಪ್ಟನ್ ಡ್ರೋನ್ ಪ್ರತಾಪ್.

Drone Prathap and Karthik: ಸದ್ಯ Bigg Boss Kannada Season 10 ಆರಂಭವಾಗಿ 52 ದಿನ ಕಳೆದಿದೆ. ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಭರ್ಜರಿಯಾಗಿಯೇ ನಡೆಯುತ್ತಿದೆ. ವಾರಪೂರ್ತಿ ಬಿಗ್ ಬಾಸ್ ಮನೆಯಲ್ಲಿ ಕಾದಾಟ ನಡೆಯುತ್ತಲೇ ಇದೆ. ಈ ವಾರವಂತೂ ಬಾರಿ ರೋಚಕ ತಿರುವಿನೊಂದಿಗೆ ಬಿಗ್ ಬಾಸ್ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ.

ಈ ವಾರ ಪ್ರತಾಪ್ ಹಾಗೂ ಮೈಕಲ್ ಕ್ಯಾಪ್ಟನ್ಸಿ ಯಲ್ಲಿ ಬಹಳ ಅದ್ಭುತವಾಗಿ ಟಾಸ್ಕ್ ಗಳು ನೆರವೇರುತ್ತಿದೆ. ಇನ್ನು ಈ ವಾರ ಕ್ಯಾಪ್ಟನ್ ಆಗಲು ಇಡೀ ಮನೆ ಮಂದಿ ಕಾದಾಡುತ್ತಿದ್ದಾರೆ. ಸದ್ಯ ಬಿಗ್ ಬಾಸ್ ನಲ್ಲಿ ಹೊಸ ಟ್ವಿಸ್ಟ್ ಎದುರಾಗಿದೆ. ಟೀಮ್ ಕ್ಯಾಪ್ಟನ್ ಆದ ಡ್ರೋನ್ ಪ್ರತಾಪ್ ಬಿಗ್ ಮಿಸ್ಟೇಕ್ ಮಾಡಿಕೊಂಡು ತಂಡದ ಸೋಲಿಗೆ ಕಾರಣರಾದ್ರ..? ಎನ್ನುವುದು ಸದ್ಯದ ಚರ್ಚೆ ಆಗಿದೆ.

drone prathap mistake in bigg boss
Image Credit: Vistaranews

ಉಲ್ಟಾ ಆಯಿತು ಡ್ರೋನ್ ಪ್ರತಾಪ್ ಲೆಕ್ಕಾಚಾರ
ಬಿಗ್ ಬಾಸ್ ಈ ವಾರ ಮನೆಯಲ್ಲಿ ಎರಡು ತಂಡಗಳನ್ನು ಮಾಡಲು ಆದೇಶಿಸಿ ಟಾಸ್ಕ್ ಅನ್ನು ನೀಡಲು ನಿರ್ಧರಿಸಿದ್ದಾರೆ. ಇನ್ನು ಬಿಗ್ ಬಾಸ್ ಹೇಳಿದಂತೆ ಪ್ರತಾಪ್ ಹಾಗೂ ಮೈಕಲ್ ಕ್ಯಾಪ್ಟನ್ಸಿಯಲ್ಲಿ ಎರಡು ತಂಡ ರೆಡಿಯಾಗಿತ್ತು. ಇನ್ನು ಪ್ರತಾಪ್ ತಂಡದಲ್ಲಿ ಒಂದು ಆಟಗಾರ ಹೆಚ್ಚಿದ್ದ ಕಾರಣ ಬಿಗ್ ಬಾಸ್ ಪ್ರತಾಪ್ ತಂಡದಲ್ಲಿ ಒಬ್ಬರನ್ನು ಹೊರಗಿಡಲು ಹೇಳಿದ್ದಾರೆ. ಈ ವೇಳೆ ಪ್ರತಾಪ್ ಮಾಡಿರುವ ನಿರ್ಧಾರ ಎಲ್ಲರನ್ನು ಗೊಂದಲಕ್ಕೀಡುಮಾಡಿದೆ.

ಪ್ರತಾಪ್ ತಂಡದಿಂದ ಕಾರ್ತಿಕ್ ಅವರನ್ನು ಹೊರಗೆ ಇಡಲು ನಿರ್ಧರಿಸಿದರು. ಇನ್ನು ತಂಡದಿಂದ ಹೊರಬಂದ ಕಾರಣ ಕಾರ್ತಿಕ್ ವಾರ ಕಾಪ್ಟನ್ಸಿ ಟಾಸ್ಕ್ ಅರ್ಹತೆಯನ್ನು ಕೂಡ ಕಳೆದುಕೊಂಡರು. ಇನ್ನು ಕಾರ್ತಿಕ ಅವರನ್ನು ತಂಡದಿಂದ ಹೊರಗೆ ಇಟ್ಟು ಪ್ರತಾಪ್ ದೊಡ್ಡ ಎಡವಟ್ಟು ಮಾಡಿದ್ದಾರೆ ಎನ್ನುವುದು ಸದ್ಯದ ಚರ್ಚೆ ಆಗಿದೆ. ಏಕೆಂದರೆ ಮೈಕಲ್ ತಂಡದಲ್ಲಿ ಫಿಸಿಕಲ್ ಆಗಿ ಎಲ್ಲರು ಸ್ಟ್ರಾಂಗ್ ಇರುವ ಕಾರಣ ಆ ತಂಡಕ್ಕೆ ಠಕ್ಕರ್ ಕೊಡಲು ಕಾರ್ತಿಕ್ ಸರಿಯಾದ ಸ್ಪರ್ದಿ ಆಗಿದ್ದರು ಎನ್ನಬಹುದು. ಆದರೆ ಪ್ರತಾಪ್ ಅವರನ್ನೇ ತಂಡದಿಂದ ಹೊರಗೆ ಇಟ್ಟಿರುವುದು ದೊಡ್ಡ ಎಡವಟ್ಟು ಎನ್ನಬಹುದು.

Drone Prathap Latest News
Image Credit: Jiocinema

ಕಾರ್ತಿಕ್ ಗೆ ಬಿಗ್ ಬಾಸ್ ಕಡೆಯಿಂದ ಸ್ಪೆಷಲ್ ಆಫರ್
ಇನ್ನು ಕಾರ್ತಿಕ್ ಅವರನ್ನು ಪ್ರತಾಪ್ ತಂಡದಿಂದ ಹೊರಗಿಟ್ಟಿದ್ದರು ಕೂಡ ಬಿಗ್ ಬಾಸ್ ಈ ವಾರ ನೀಡಲಾಗುವ ಎಲ್ಲ ಟಾಸ್ಕ್ ನ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ಬ್ದಾರಿಯನ್ನು ಕಾರ್ತಿಕ್ ಗೆ ವಹಿಸಿದ್ದಾರೆ. ಕಾರ್ತಿಕ್ ಟಾಸ್ಕ್ ನ ಉಸ್ತುವಾರಿಯನ್ನು ಬಹಳ ಚೆನ್ನಾಗಿ ಮಾಡುವ ಮೂಲಕ ಬಿಗ್ ಬಾಸ್ ಕಡೆಯಿಂದ ಭೇಷ್ ಎನಿಸಿಕೊಂಡಿದ್ದಾರೆ. ಬಿಗ್ ಬಾಸ್ ಕಡೆಯಿಂದ ಹೊಗಳಿಕೆ ಪಡೆದ ಕಾರ್ತಿಕ್ ಯಾವುದೇ ಟಾಸ್ಕ್ ಆಡದೆ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಅರ್ಹತೆ ಪಡೆದಿದ್ದಾರೆ. ಬಿಗ್ ಬಾಸ್ ಈ ನಿರ್ಧಾರ ಇಡೀ ಮನೆ ಮಂದಿಯನ್ನೇ ಅಚ್ಚರಿಪಡಿಸಿದೆ. ಇನ್ನು ಈ ವಾರ ಕಾರ್ತಿಕ್ ತಂಡದಿಂದ ಹೊರಗುಳಿದಿದ್ದರು ಕ್ಯಾಪ್ಟನ್ ಆಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group

Join Nadunudi News WhatsApp Group