ಬಾಲಣ್ಣನ NBK 107 ನಲ್ಲಿ ವಿಲನ್ ಪಾತ್ರ ಮಾಡಲು ದುನಿಯಾ ವಿಜಯ್ ಪಡೆದ ಸಂಭಾವನೆ ಎಷ್ಟು ಗೊತ್ತಾ, ಎಷ್ಟು ನೋಡಿ.

ಕನ್ನಡ ಚಿತ್ರರಂಗ ಖ್ಯಾತ ನಟ ದುನಿಯಾ ವಿಜಯ್ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಗಳಿಸಿಕೊಂಡ ನಟರಲ್ಲಿ ನಟ ದುನಿಯಾ ವಿಜಯ್ ಕೂಡ ಒಬ್ಬರು. ದುನಿಯಾ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಬಂದ ದುನಿಯಾ ವಿಜಯ್ ಅವರ ಜೀವನ ದುನಿಯಾ ಚಿತ್ರದ ನಂತರ ಪೂರ್ತಿ ಬದಲಾಯಿತು ಎಂದು ಹೇಳಬಹುದು. ಆರಂಭದಲ್ಲಿ ವಿಲನ್ ಪಾತ್ರವನ್ನ ಮಾಡುತ್ತಿದ್ದ ನಟ ದುನಿಯಾ ವಿಜಯ್ ಅವರು ನಂತರ ನಾಯಕನಾಗಿ ನಟನೆಯನ್ನ ಮಾಡಿ ತಮ್ಮ ನಟನೆಯ ಮೂಲಕ ಅಭಿಮಾನಿಗಳು ತನ್ನತ್ತ ತಿರುಗಿ ನೋಡುವಂತೆ ಮಾಡಿದರು.

ಇನ್ನು ಇದರ ನಡುವೆ ನಟ ದುನಿಯಾ ವಿಜಯ್ ಅವರ ಸಲಗ ಚಿತ್ರ ಬರಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಬೇರೆಬೇರೆ ರಾಜ್ಯದಲ್ಲಿ ಯಶಸ್ವಿ ಪ್ರದರ್ಶನವನ್ನ ಕಂಡು ಅದೆಷ್ಟೋ ಚಿತ್ರರಂಗ ದುನಿಯಾ ವಿಜಯ್ ಅವರ ಕಡೆ ತಿರುಗು ನೋಡುವಂತೆ ಮಾಡಿತು. ಇನ್ನು ದೇಶದ ಖ್ಯಾತ ನಟರಾದ ನಂದಮೂರಿ ಬಾಲಕೃಷ್ಣ ಅವರ ಜೊತೆ ಈಗ ನಟ ದುನಿಯಾ ವಿಜಯ್ ಅವರು ವಿಲನ್ ಪಾತ್ರದಲ್ಲಿ ನಟನೆಯನ್ನ ಮಾಡುತ್ತಿದ್ದು ಚಿತ್ರದ ಪೋಸ್ಟರ್ ನೋಡಿದ ಜನರು ದುನಿಯಾ ವಿಜಯ್ ಅವ್ರ್ ಲುಕ್ ಗೆ ಫಿದಾ ಆಗಿದ್ದಾರೆ.

Duniya vijay in NBK 107

ಇನ್ನು ಇದರ ನಡುವೆ ನಟ ಬಾಲಕೃಷ್ಣ ಅವರ ಜೊತೆ NBK 107 ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟನೆಯನ್ನ ಮಾಡಲು ನಟ ದುನಿಯಾ ವಿಜಯ್ ಪಡೆದ ಸಂಭಾವನೆ ಎಷ್ಟು ಅನ್ನುವ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಗಾದರೆ ನಂದಮೂರಿ ಬಾಲಕೃಷ್ಣ ಅವರ ಜೊತೆ NBK 107 ನಟನೆಯನ್ನ ಮಾಡಲು ನಟ ದುನಿಯಾ ವಿಜಯ್ ಪಡೆದ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. NBK 107 ಚಿತ್ರ ಬೇರೆಬೇರೆ ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು ಈ ಚಿತ್ರ ಭರ್ಜರಿ ಕಲೆಕ್ಷನ್ ಮಾಡುವುದರಲ್ಲಿ ಎರಡು ಮಾಯಾತಿಲ್ಲ.

ಇನ್ನು ನಟ ವಿಜಯ್ ಅವರು ಸಾಮಾನ್ಯವಾಗಿ ನಾಯಕ ನಟನಾಗಿ ನಟನೆಯನ್ನ ಮಾಡಲು ಸುಮಾರು 2.5 ಕೋಟಿ ರೂಪಾಯಿ ಸಂಭಾವನೆಯನ್ನ ಪಡೆದುಕೊಳ್ಳುತ್ತಾರೆ. ಇನ್ನು NBK 107 ಚಿತ್ರ ಬಾಲಕೃಷ್ಣ ಅವರ ಬಹುನಿರೀಕ್ಷಿತ ಚಿತ್ರವಾಗಿದ್ದು ಈ ಚಿತ್ರದಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ನಟ ದುನಿಯಾ ವಿಜಯ್ ಅವರು ಕಾಣಿಸಿಕೊಳ್ಳಲಿದ್ದಾರೆ. ಮೂಲಗಳಿಂದ ತಿಳಿದುವಂದಿರುವ ಮಾಹಿತಿಯ ಪ್ರಕಾರ ನಟ ದುನಿಯಾ ವಿಜಯ್ ಅವರು ಕೊಂಚ ಹೆಚ್ಚಿನ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group

Duniya vijay in NBK 107

ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ನಂದಮೂರಿ ಬಾಲಕೃಷ್ಣ ಅವರ ಜೊತೆ NBK 107 ಚಿತ್ರದಲ್ಲಿ ವಿಲನ್ ಪಾತ್ರವನ್ನ ಮಾಡಲು ನಟ ದುನಿಯಾ ವಿಜಯ್ ಅವರು 4 ಕೋಟಿ ರೂಪಾಯಿ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಅಂದಾಜು ಸಂಭಾವನೆಯಾಗಿದ್ದು ನಿಖರ ಸಂಭಾವನೆ ಎಷ್ಟು ಅನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ. ಸ್ನೇಹಿತರೆ ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ದುನಿಯಾ ವಿಜಯ್ ಅವರ ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group