Battery Swap: ನಡುರಸ್ತೆಯಲ್ಲಿ ಚಾರ್ಜ್ ಖಾಲಿಯಾದರೆ ಭಯಪಡುವ ಅಗತ್ಯ ಇಲ್ಲ, ಈಗ ಬಂದಿದೆ ಹೊಸ ಯೋಜನೆ.

ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಪ್ರಯಾಣ ಮಾಡುವಾಗ ಚಾರ್ಜ್ ಖಾಲಿಯಾದರೆ ಏನು ಮಾಡಬೇಕು ಎನ್ನುವ ಬಗ್ಗೆ ಮಾಹಿತಿ ತಿಳಿಯಿರಿ.

Electric Scooter Battery Swap: ದಿನನಿತ್ಯ ಪೆಟ್ರೋಲ್ ಹಾಗು ಡೀಸೆಲ್ ಏರಿಕೆಯಿಂದ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುತ್ತಾರೆ. ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಬೈಕ್ ಖರೀದಿಸಿದರೆ ಅದಕ್ಕೆ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು ಅದು ನಿಮ್ಮನ್ನು ತುಂಬಾ ದೂರ ಪ್ರಯಾಣಿಸುವಂತೆ ಮಾಡುತ್ತದೆ.

ರಸ್ತೆ ಮದ್ಯೆ ಹೋಗುವಾಗ ಬೈಕಿನಲ್ಲಿದ್ದ ಪೆಟ್ರೋಲ್ ಖಾಲಿಯಾದರೆ ಪೆಟ್ರೋಲ್ ಬಂಕ್ ತನಕ ಹೋಗಿ ಪೆಟ್ರೋಲ್ ಹಾಕಿಸಿ ಮತ್ತೆ ಪ್ರಯಾಣ ಮಾಡಬಹುದು. ಆದರೆ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಚಾರ್ಜ್ ಖಾಲಿಯಾದರೆ ಏನು ಮಾಡಬೇಕು. 

electric scooter latest news
Image Credit: Gqindia

ರಸ್ತೆ ಮದ್ಯೆ ಚಾರ್ಜ್ ಖಾಲಿಯಾದರೆ ಏನು ಮಾಡಬೇಕು
ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಗಳು ಭಾರತದಲ್ಲಿ ಎಲ್ಲಾ ಕಡೆ ಚಾರ್ಜಿಂಗ್ ಸ್ಟೇಷನ್ ಗಳನ್ನೂ ಹೊಂದಿಲ್ಲ. ಆದ್ದರಿಂದ ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾರ್ಜರ್ ಇರುವ ಸ್ಥಳಕ್ಕೆ ತೆಗೆದುಕೊಂಡು ಹೋದರೆ ಮಾತ್ರ ನೀವು ಚಾರ್ಜ್ ಮಾಡಿ ಬಚಾವ್ ಆಗಬಹುದು.ಇದೊಂದು ಕಾರಣದಿಂದ ಸಾಕಷ್ಟು ಜನರು ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ.

ಇನ್ನು ಎಲೆಕ್ಟ್ರಿಕ್ ವಾಹನದ ಚಾರ್ಜ್ ಖಾಲಿಯಾದರೆ ಮತ್ತೆ ಅದರಲ್ಲಿ ಪ್ರಯಾಣ ಮಾಡಲು ಅದಕ್ಕೆ ಚಾರ್ಜ್ ಮಾಡಬೇಕು. ಎಲೆಕ್ಟ್ರಿಕ್ ವಾಹನ ಚಾರ್ಜ್ ಆಗಲು ತುಂಬಾ ಸಮಯ ಬೇಕಾಗುತ್ತದೆ. ಒಂದು ವೇಳೆ ಪ್ರಯಾಣದ ವೇಳೆ ಚಾರ್ಜ್ ಖಾಲಿಯಾದರೆ ನೀವು ಅದರಲ್ಲಿ ಮತ್ತೆ ಪ್ರಯಾಣ ಮಾಡಲು ಚಾರ್ಜ್ ಆದ ನಂತರ ಮಾಡಬೇಕಾಗುತ್ತದೆ. ನೀವು ಆ ಕೂಡಲೇ ಪ್ರಯಾಣ ಮಾಡಲು ಸಣ್ಣ ಉಪಾಯ ಇದೆ. ಇದು ಏನು ಎನ್ನುವುದನ್ನು ತಿಳಿಯೋಣ.

With battery swapping technology, the battery can now be replaced if the charge runs out
Image Credit: gogoro

ರಸ್ತೆ ಮದ್ಯೆ ಚಾರ್ಜ್ ಖಾಲಿಯಾದರೆ ಹೀಗೆ ಮಾಡಿ
ಇತ್ತೀಚಿಗೆ ಹಲವು ಕಡೆ ಎಲೆಕ್ಟ್ರಿಕ್ ಕಂಪನಿಗಳು ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನ ಹೊಂದಿರುವ ಸ್ಕೂಟರ್ ಗಳನ್ನೂ ಪರಿಚಯಿಸಿದ್ದಾರೆ. ಈ ಸ್ಕೂಟರ್ ತುಂಬಾ ಉಪಯುಕ್ತವಾದ ಟೆಕ್ನೋಲೊಜಿ ಆಗಿದೆ. ಈ ಸ್ಕೂಟರ್ ನ ಜೊತೆಗೆ ಎರಡು ಬ್ಯಾಟರಿಗಳನ್ನು ತೆಗೆದುಕೊಂಡು ಹೋಗಬಹುದು.

Join Nadunudi News WhatsApp Group

ಬ್ಯಾಟರಿ ಖಾಲಿಯಾಗಿ ವಾಹನ ನಿಂತರೆ ಚಾರ್ಜಿಂಗ್ ಸ್ಟೇಷನ್ ಗಳಿಗೆ ತೆರಳಿ ಮತ್ತೊಂದು ಬ್ಯಾಟರಿ ತಂದು ವಾಹನಕ್ಕೆ ಅಳವಡಿಸಿ ಪ್ರಯಾಣ ಮುಂದುವರೆಸಬಹುದು. ಹಾಗಾಗಿ ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್ ಬದಲಾಯಿಸಬಹುದಾದ ಚಾರ್ಜಿಂಗ್ ಹೊಂದಿದ್ದರೆ ನೀವು ಮನೆಗೆ ಹೋಗುವ ಅವಶ್ಯಕತೆ ಇಲ್ಲ.

Join Nadunudi News WhatsApp Group