Electricity Bill: ಮನೆಯಲ್ಲಿ ವಿದ್ಯುತ್ ಬಳಸುವ ಎಲ್ಲರಿಗೂ ಗುಡ್ ನ್ಯೂಸ್, ಸಿದ್ದರಾಮಯ್ಯ ಸರ್ಕಾರದ ಇನ್ನೊಂದು ಘೋಷಣೆ

ವಿದ್ಯುತ ದರ ಇಳಿಕೆ ಮಾಡಲು ನಿರ್ಧರಿಸಿದ ರಾಜ್ಯ ಸರ್ಕಾರ

Electricity Bill Down: ಪ್ರಸ್ತುತ ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆ ಜಾರಿಗೆ ಬಂದಾಗಿನಿಂದ ವಿದ್ಯುತ್ ದರದಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ವಿದ್ಯುತ್ ದರದ ವಿಚಾರವಾಗಿ ಜನರಿಗೆ ಯಾವುದೇ ರೀತಿಯ ಸಿಹಿ ಸುದ್ದಿ ಲಭಿಸಿಲ್ಲ. ಸದ್ಯ ರಾಜ್ಯ ಸರ್ಕಾರ ವಿದ್ಯುತ್ ದರದ ವಿಚಾರವಾಗಿ ಜನರಿಗೆ ಸಿಹಿ ಸುದ್ದಿ ನೀಡಿದೆ. ಹಲವು ಸಮಯದ ಬಳಿಕ ವಿದ್ಯುತ್ ದರ ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.

Electricity Bill Latest Update
Image Credit: kannada News Today

ರಾಜ್ಯದ ಜನತೆಗೆ ಗುಡ್ ನ್ಯೂಸ್
ಸದ್ಯ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಮೊದಲ ಬಾರಿಗೆ ವಿದ್ಯುತ್ ದರ ಕಡಿಮೆ ಮಾಡಲು ನಿರ್ಧರಿಸಿದೆ. ಮಾಸಿಕ 100 ಯುನಿಟ್ ಗಳಿಗಿಂತ ಹೆಚ್ಚು ಬಳಕೆ ಮಾಡುವ ಗೃಹ ಬಳೆಕೆದಾರಿಗೆ ಪ್ರತಿ ಯುನಿಟ್ ಗೆ 1 .10 ರೂ. ಕಡಿಮೆ ಮಾಡಲು ಆದೇಶ ಹೊರಡಿಸಲಾಗಿದೆ. ಏಪ್ರಿಲ್ 1 ರಿಂದ ಹೊಸ ದರವು ಅನ್ವಯವಾಗಲಿದೆ. ಮುಂದಿನ ತಿಂಗಳು ಲೋಕಸಭಾ ಚುನಾವಣೆ ಘೋಷಣೆ ಆಗಲಿದ್ದು, ನೀತಿ ಸಂಹಿತೆ ಜಾರಿ ಆಗುವುದರಿಂದ ದರ ಪರಿಷ್ಕರಿಸಲು ಸಾಧ್ಯವಾಗುವುದಿಲ್ಲ ಈ ಕಾರಣಕೆ ಲೋಕಸಭಾ ಚುನಾವಣೆಗೂ ಮುಂಚಿತವಾಗಿದೆ ದರ ಘೋಷಿಸಲು ನಿರ್ಧರಿಸಿದೆ.

Electricity Bill Down
Image Credit: Whatsgoodtodo

100 ಯುನಿಟ್ ಗಿಂತ ಹೆಚ್ಚು ಬಳಸಿದರೆ ಬೆಲೆ ಇಳಿಕೆ
ಈ ಹೊಸ ದರ ಪರಿಷ್ಕರಣೆಯು 100 ಯುನಿಟ್ ಗಿಂತ ಹೆಚ್ಚು ಯುನಿಟ್ ವಿದ್ಯುತ್ ಬಳಸುವವರಿಗೆ ಪ್ರಯೋಜನವಾಗಲಿದೆ. ತಿಂಗಳಿಗೆ 210 ಯುನಿಟ್ ಬಳಕೆ ಮಾಡುವ ಗೃಹ ಬಳಕೆದಾರರಿಗೆ ಅಂದಾಜು 230 ರೂ. ಉಳಿತಾಯ ಆಗಲಿದೆ. ಆದರೆ 100 ಯುನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ.

ಆದರೆ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಲಭ್ಯವಾಗುತ್ತಿರುವುದರಿಂದ 100 ಯುನಿಟ್ ಕಡಿಮೆ ಬಳಕೆದಾರರಿಗೆ ಯಾವುದೇ ಹೊರೆ ಬೀಳುವುದಿಲ್ಲ. ಸದ್ಯ ಹಲವು ಸಮಯದ ಬಳಿಕ ವಿದ್ಯುತ್ ದರ ಇಳಿಕೆಯಾಗಿರುವುದು ಜನಸಾಮಾನ್ಯರಲ್ಲಿ ಖುಷಿ ಮೂಡಿಸಿದೆ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group