Electricity Update: ಫ್ರೀ ಕರೆಂಟ್ ಖುಷಿಯಲ್ಲಿರುವವರಿಗೆ ಹೊಸ ವರ್ಷದ ಬೇಸರದ ಸುದ್ದಿ, ವಿದ್ಯುತ್ ದರ ಇಷ್ಟು ಹೆಚ್ಚಳ

ಹೊಸ ವರ್ಷದ ಮೊದಲ ವಾರದಲ್ಲೇ ವಿದ್ಯುತ್ ಬೆಲೆ ಏರಿಕೆ, ಮತ್ತೆ ಬೆಲೆ ಏರಿಕೆಯ ಬಿಸಿ

Electricity Bill Hike 2024: ರಾಜ್ಯದಲ್ಲಿ ಕಾಂಗ್ರೆಸ್ (Congress) ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ Gruha Jyothi ಯೋಜನೆ ಜುಲೈ ನಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿದೆ. ಈ ಯೋಜನೆಯಡಿ 200 ಯುನಿಟ್ ಕ್ಕಿಂತ ಕಡಿಮೆ ವಿದ್ಯುತ್ ಬಳಸುವ ಪ್ರತಿ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ.

ತಿಂಗಳ ಸರಾಸರಿ ಲೆಕ್ಕಾಚಾರದ ಮೇಲೆ ಅರ್ಹ ಫಲಾನುಭವಿಗಳು ಉಚಿತ ವಿದ್ಯುತ್ ಅನ್ನು ಪಡೆಯುತ್ತಿದ್ದಾರೆ. ರಾಜ್ಯದ ಜನತೆಗೆ ಉಚಿತ ವಿದ್ಯುತ್ ನ ಖುಷಿಯಲ್ಲಿದ್ದಾರೆ ಎನ್ನಬಹುದು. ಸದ್ಯ ರಾಜ್ಯ ಸರ್ಕಾರ ಉಚಿತ ವಿದ್ಯುತ್ ಖುಷಿಯಲ್ಲಿದ್ದವರಿಗೆ ಹೊಸ ವರ್ಷದ ಮೊದಲ ವಾರದಲ್ಲಿ ಶಾಕಿಂಗ್ ಸುದ್ದಿಯನ್ನು ನೀಡಿದೆ.

Electricity Bill Hike
Image Credit: Whatshot

ಹೊಸ ವರ್ಷದ ಮೊದಲ ವಾರದಲ್ಲೇ ಬೆಲೆ ಏರಿಕೆಯ ಬಿಸಿ
ಗೃಹಜ್ಯೋತಿ ಯೋಜನೆಯಡಿಯಲ್ಲಿ ಜನ ಸಾಮಾನ್ಯರಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಪ್ರಸ್ತುತ ಈ ಯೋಜನೆಯು ವಿದ್ಯುತ್ ಬಿಲ್ ಕಟ್ಟುವವರ ಮೇಲೆ ಪರಿಣಾಮ ಬೀರುತ್ತಿದೆ ಎನ್ನಬಹುದು.

ರಾಜ್ಯದಲ್ಲಿ ಪ್ರತಿ ಯುನಿಟ್ ಗೆ ವಿದ್ಯುತ್ ಶುಲ್ಕವನ್ನು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಚಿಟನೆ ನಡೆಸುತ್ತಿದೆ. ಈ ವಿದ್ಯುತ್ ದರದ ಏರಿಕೆ ಗೃಹ ಜ್ಯೋತಿ ಫಲಾನುಭವಿಗಳಿಗೆ ಯಾವುದೇ ತೊಂದರೆ ನೀಡುವುದಿಲ್ಲ. ಆದರೆ ಯಾರು ಗೃಹ ಜ್ಯೋತಿ ಯೋಜನೆಗೆ ಅರ್ಹಾರಲ್ಲವೋ ಅವರು ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸಬೇಕಾಗಿದೆ. ಹಣದುಬ್ಬರದ ಜೊತೆಗೆ ಇನ್ನಷ್ಟು ಆರ್ಥಿಕ ಹೊರೆ ಹೆಚ್ಚಾಗಲಿದೆ.

Electricity Bill Hike 2024
Image Credit: Original Source

ವಿದ್ಯುತ್ ಶುಲ್ಕ 60 ಪೈಸೆ ಹೆಚ್ಚಳ
ಸದ್ಯ ಪ್ರತಿ ಯುನಿಟ್ ಗೆ 50 ರಿಂದ 60 ಪೈಸೆ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಎಸ್ಕಾಂಗಳಿಂದ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದರೆ ಏಪ್ರಿಲ್ 1 2024 ರಿಂದ ವಿದ್ಯುತ್ ಶಿಲ್ಕ ಹೆಚ್ಚಳವಾಗಲಿದೆ. ಬೆಸ್ಕಾಂ ಸೇರಿದಂತೆ ರಾಜ್ಯದ ಇನ್ನಿತರ ಸರಬರಾಜು ಕಂಪನಿಗಳು ಪ್ರತಿ ಯುನಿಟ್ ಗೆ 50 ರಿಂದ 60 ಪೈಸೆ ಹೆಚ್ಚಳ ಮಾಡಲು ನಿರ್ಧರಿಸಿದೆ.

Join Nadunudi News WhatsApp Group

Join Nadunudi News WhatsApp Group