Employees Salary: ಸರ್ಕಾರೀ ನೌಕರರಿಗೆ ಭರ್ಜರಿ ಗುಡ್ ನ್ಯೂಸ್, ಸಂಬಳದ ಜೊತೆ DA ಯಲ್ಲಿ 50 % ಹೆಚ್ಚಳ

ಕೇಂದ್ರ ಸರ್ಕಾರೀ ನೌಕರರ ತುಟ್ಟಿಭತ್ಯೆ ಶೇ. 50 ರಷ್ಟು ಹೆಚ್ಚಳ.

Employees Salary 50% Hike: ಸದ್ಯ ಕೇಂದ್ರ ಸರಕಾರ ಸರ್ಕಾರೀ ನೌಕರರ 7 ನೇ ವೇತನ ಹೆಚ್ಚಳದ ಬಗ್ಗೆ ಹೆಚ್ಚಿನ ಚರ್ಚೆ ನಡೆಸುತ್ತಿದೆ. ಈಗಾಗಲೇ ಸಾಕಷ್ಟು ಬಾರಿ ನೌಕರರ DA ಹೆಚ್ಚಳದ ಬಗ್ಗೆ ಅಪ್ಡೇಟ್ ಹೊರಬಿದ್ದಿದೆ. ಈಗಾಗಲೇ ಶೇ, 50 ರಷ್ಟು ತುಟ್ಟಿಭತ್ಯೆ ಘೋಷಿಸಿವುದಾಗಿ ಸರ್ಕಾರ ಹೇಳಿಕೆ ನೀಡಿತ್ತು. ನೌಕರರ ವೇತನ ಹೆಚ್ಚಳವಾದರೆ ಈ ಬಾರಿ ಸಂಬಳದಲ್ಲಿ ಬಾರಿ ಏರಿಕೆಯಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರೀ ನೌಕರರು ತಮ್ಮ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ ಎನ್ನಬಹುದು.

Employees Salary 50% Hike
Image Credit: The Week

ಕೇಂದ್ರ ಸರ್ಕಾರೀ ನೌಕರರ ತುಟ್ಟಿಭತ್ಯೆ ಶೇ. 50 ರಷ್ಟು ಹೆಚ್ಚಳ
ಕಾರ್ಮಿಕ ಸಚಿವಾಲಯದ ವಿಭಾಗವಾದ ಕಾರ್ಮಿಕ ಬ್ಯೂರೋ ಪ್ರಕಟಿಸಿರುವ ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ (CPI-IW) ಸಂಖ್ಯೆಗಳ ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ 50% ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ. ಡಿಎ ಕೇಂದ್ರ ಸರ್ಕಾರಿ ನೌಕರರ ವೇತನದ ಒಂದು ಅಂಶವಾಗಿದೆ. ಇದು ಹಣದುಬ್ಬರದ ಪರಿಣಾಮಗಳನ್ನು ತಗ್ಗಿಸುವ ಗುರಿಯನ್ನು ಹೊಂದಿದೆ.

ಪ್ರಸ್ತುತ, DA 50% ತಲುಪಿದರೆ ಕೆಲವು ಇತರ ಭತ್ಯೆಗಳು ಮತ್ತು ಸಂಬಳದ ಅಂಶಗಳು ಸಹ ಹೆಚ್ಚಾಗುತ್ತವೆ. ಇದು ನೌಕರರ ಸಂಬಳದಲ್ಲಿ ಗಮನಾರ್ಹ ಜಿಗಿತಕ್ಕೆ ಕಾರಣವಾಗುತ್ತದೆ. 7 ನೇ ಕೇಂದ್ರ ವೇತನ ಆಯೋಗವು DA 50% ತಲುಪಿದರೆ ಅದು ನಿಮ್ಮ ಸಂಬಳದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ಮಾಹಿತಿ ನೀಡಿದೆ. HRA, ಮಕ್ಕಳ ಶಿಕ್ಷಣ ಭತ್ಯೆ, ದೈನಂದಿನ ಭತ್ಯೆ, ಇತರ ಭತ್ಯೆಗಳು ಡಿಎ 50% ತಲುಪಿದಾಗ ಹೆಚ್ಚಾಗುವುದು ಸಹಜ. ಇದೀಗ ನಾವು ನೌಕರರ DA 50 ಕ್ಕೆ ತಲುಪಿದರೆ ಯಾವ ಭತ್ಯೆ ಹೆಚ್ಚಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ಹೇಳಲಿದ್ದೇವೆ.

Govt Employees DA Hike Update
Image Credit: Maharashtranama

ಡಿಎ 50 ಪ್ರತಿಶತ ತಲುಪಿದಾಗ ಈ ಎಲ್ಲ ಭತ್ಯೆಗಳು ಹೆಚ್ಚಾಗಲಿದೆ
•ಮನೆ ಬಾಡಿಗೆ ಭತ್ಯೆ
•ಮಕ್ಕಳ ಶಿಕ್ಷಣ ಭತ್ಯೆ
•ಮಕ್ಕಳ ಆರೈಕೆಗಾಗಿ ವಿಶೇಷ ಭತ್ಯೆ
•ಹಾಸ್ಟೆಲ್ ಸಬ್ಸಿಡಿ
•ವರ್ಗಾವಣೆಯ ಮೇಲಿನ ಟಿಎ
•ಗ್ರಾಚ್ಯುಟಿ ಮಿತಿ
•ಉಡುಗೆ ಭತ್ಯೆ
•ಸ್ವಂತ ಸಾರಿಗೆಗಾಗಿ ಮೈಲೇಜ್ ಭತ್ಯೆ
•ದೈನಂದಿನ ಭತ್ಯೆ

Join Nadunudi News WhatsApp Group

Join Nadunudi News WhatsApp Group