FASTag KYC: ಕಾರ್ ಇದ್ದವರು ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ, ಫೆ. 1 ರಿಂದ ದೇಶದಲ್ಲಿ ಜಾರಿಗೆ ಬರಲಿದೆ ಹೊಸ ರೂಲ್ಸ್

ಇಂತಹ ವಾಹನಗಳ Fastag ಜನವರಿ 1 ರಿಂದ ನಿಷ್ಕ್ರಿಯ

FASTag KYC Deadline: ದೇಶದಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳು ಬದಲಾಗುತ್ತಿವೆ. ವಾಹನ ಸವಾರರು ಬದಲಾಗುತ್ತಿರುವ ಪ್ರತಿ ನಿಯಮಗಳ ಬಗ್ಗೆ ಮಾಹಿತಿ ತಿಳಿಯುವುದು ಅಗತ್ಯವಾಗಿದೆ.

ಸದ್ಯ NHAI ನಿಂದ FASTag ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಯಾಗಿದೆ. ಫಾಸ್ಟ್ ಟ್ಯಾಗ್ ಬಳಸುವ ಪ್ರತಿಯೊಬ್ಬರೂ ಕೂಡ ಈ ನಿಯಮವನ್ನು ಅನುಸರಿಸುವುದು ಅಗತ್ಯವಾಗಿದೆ. ನಿಗದಿತ ಸಮಯದೊಳಗೆ ನೀವು ಈ ಕೆಲಸವನ್ನು ಪೂರ್ಣಗೊಳಿಸಿಲ್ಲವಾದರೆ ನಿಮ್ಮ Fastag ನಿಷ್ಕ್ರಿಯವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ.

FASTag KYC Deadline
Image Credit: Online38media

ಕಾರ್ ಇದ್ದವರು ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ
ಟೋಲ್ ಪಾವತಿಸಲು ಫಾಸ್ಟ್ಯಾಗ್ ಬಳಸುವ ಜನರಿಗೆ ಮಹತ್ವದ ಮಾಹಿತಿಯೊಬದು ಹೊರಬಿದ್ದಿದೆ. ಪಾಸ್ಟ್ ಟ್ಯಾಗ್ ಗೆ KYC ಪೂರ್ಣಗೊಳಿಸಲು ಜನವರಿ 31 2024 ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗೆ KYC ಮಾಡುವುದು ಕಡ್ಡಾಯವಾಗಿದೆ. ನಿಗದಿತ ದಿನಾಂಕದೊಳಗೆ KYC ಪೂರ್ಣಗೊಳಿಸದ ಫಾಸ್ಟ್ ಟ್ಯಾಗ್ ಅನ್ನು ಜನವರಿ 31 ರ ನಂತರ ನಿಷ್ಕ್ರಿಯಗೊಳಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಪ್ರಾಧಿಕಾರ ಸೂಚನೆ ನೀಡಿದೆ.

ಫೆ. 1 ರಿಂದ ದೇಶದಲ್ಲಿ ಜಾರಿಗೆ ಬರಲಿದೆ ಹೊಸ ರೂಲ್ಸ್
ಫಾಸ್ಟ್ ಟ್ಯಾಗ್ ಬಳಕೆದಾರರು ಒಂದು ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್ ಅನ್ನು ಅನುಸರಿಸಬೇಕು ಮತ್ತು ಈ ಹಿಂದೆ ನೀಡಲಾದ ಎಲ್ಲ ಫಾಸ್ಟ್ ಟ್ಯಾಗ್ ಗಳನ್ನೂ ಆಯಾ ಬ್ಯಾಂಕ್ ಗಳ ಮೂಲಕ ತ್ಯಜಿಸಬೇಕು.

Fastag KYC Mandatory
Image Credit: Jagran

ಒಂದು ವಾಹನ ಒಂದು ಫಾಸ್ಟ್‌ ಟ್ಯಾಗ್ ಅಭಿಯಾನದಡಿಯಲ್ಲಿ ಫಾಸ್ಟ್ಯಾಗ್‌ ನ ಉತ್ತಮ ಅನುಭವವನ್ನು ಉತ್ತೇಜಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ತಿಳಿಸಿದೆ. ಜನವರಿ 31 2024 ರೊಳಗೆ ನಿಮ್ಮ ಫಾಸ್ಟ್ ಟ್ಯಾಗ್ KYC ಪೂರ್ಣಗೊಳ್ಳದಿದ್ದರೆ ಫೆ. 1 ರಿಂದ ನಿಮ್ಮ ಫಾಸ್ಟ್ ಟ್ಯಾಗ್ ನಿಷ್ಕ್ರಿಯವಾಗುವುದಂತೂ ಖಂಡಿತ. ವಾಹನ ಸವಾರರು ಕೇಂದ್ರದ ಈ ನಿಯಮ ಪಾಲಿಸಲು ಇನ್ನು ಕೇವಲ ಎರಡು ದಿನ ಬಾಕಿ ಇದೆ ಎನ್ನುವುದು ನಿಮಗೆ ತಿಳಿದಿರಲಿ.

Join Nadunudi News WhatsApp Group

Join Nadunudi News WhatsApp Group