FASTag KYC: Fastag ಬಳಸುವವರಿಗೆ ತಕ್ಷಣ ಈ ಕೆಲಸ ಮಾಡಿ, ಇಲ್ಲದವಾದರೆ ಕಟ್ಟಬೇಕು ದಂಡ.

ಜನವರಿ 31 ರ ನಂತರ ಇಂತವರ ಫಾಸ್ಟ್ ಟ್ಯಾಗ್ ನಿಷ್ಕ್ರಿಯ, ಕೇಂದ್ರದ ಎಚ್ಚರಿಕೆ

FASTag KYC latest Update: ಸಧ್ಯ ದೇಶದಲ್ಲಿ ಎಲ್ಲೆಡೆ ಟೋಲ್ ಸಂಗ್ರಹಣೆಗಾಗಿ FASTag ಅನ್ನು ಬಳಸಲಾಗುತ್ತಿದೆ. ಈ ಫಾಸ್ಟ್ ಟ್ಯಾಗ್ ನ ಮೂಲಕ ಅತ್ಯಂತ ಸರಳ ವಿಧಾನದ ಮೂಲಕ ಟೋಲ್ ಸಂಗ್ರಹಣೆ ನಡೆಸಲಾಗುತ್ತಿದೆ.

ಸದ್ಯ NHAI ನಿಂದ ಫಾಸ್ಟ್ ಟ್ಯಾಗ್ ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಯಾಗಿದೆ. ಫಾಸ್ಟ್ ಟ್ಯಾಗ್ ಬಳಸುವ ಪ್ರತಿಯೊಬ್ಬರೂ ಕೂಡ ಈ ನಿಯಮವನ್ನು ಅನುಸರಿಸುವುದು ಅಗತ್ಯವಾಗಿದೆ. ನಿಗದಿತ ಸಮಯದೊಳಗೆ ನೀವು ಈ ಕೆಲಸವನ್ನು ಪೂರ್ಣಗೊಳಿಸಿಲ್ಲವಾದರೆ ನಿಮ್ಮ Fastag ನಿಷ್ಕ್ರಿಯವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ.

FASTag Latest Update
Image Credit: Timesnowhindi

Fastag ಬಳಸುವವರಿಗೆ ತಕ್ಷಣ ಈ ಕೆಲಸ ಮಾಡಿ
ಟೋಲ್ ಪಾವತಿಸಲು ಫಾಸ್ಟ್ಯಾಗ್ ಬಳಸುವ ಜನರಿಗೆ ಮಹತ್ವದ ಮಾಹಿತಿಯೊಬದು ಹೊರಬಿದ್ದಿದೆ. ಪಾಸ್ಟ್ ಟ್ಯಾಗ್ ಗೆ KYC ಪೂರ್ಣಗೊಳಿಸಲು ಜನವರಿ 31 2024 ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗೆ KYC ಮಾಡುವುದು ಕಡ್ಡಾಯವಾಗಿದೆ. ನಿಗದಿತ ದಿನಾಂಕದೊಳಗೆ KYC ಪೂರ್ಣಗೊಳಿಸದ ಫಾಸ್ಟ್ ಟ್ಯಾಗ್ ಅನ್ನು ಜನವರಿ 31 ರ ನಂತರ ನಿಷ್ಕ್ರಿಯಗೊಳಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಪ್ರಾಧಿಕಾರ ಸೂಚನೆ ನೀಡಿದೆ.

ಜನವರಿ 31 ರ ನಂತರ ಇಂತವರ ಫಾಸ್ಟ್ ಟ್ಯಾಗ್ ನಿಷ್ಕ್ರಿಯ
ಫಾಸ್ಟ್ ಟ್ಯಾಗ್ ಬಳಕೆದಾರರು ಒಂದು ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್ ಅನ್ನು ಅನುಸರಿಸಬೇಕು ಮತ್ತು ಈ ಹಿಂದೆ ನೀಡಲಾದ ಎಲ್ಲ ಫಾಸ್ಟ್ ಟ್ಯಾಗ್ ಗಳನ್ನೂ ಆಯಾ ಬ್ಯಾಂಕ್ ಗಳ ಮೂಲಕ ತ್ಯಜಿಸಬೇಕು. ಒಂದು ವಾಹನ ಒಂದು ಫಾಸ್ಟ್‌ ಟ್ಯಾಗ್ ಅಭಿಯಾನದಡಿಯಲ್ಲಿ ಫಾಸ್ಟ್ಯಾಗ್‌ ನ ಉತ್ತಮ ಅನುಭವವನ್ನು ಉತ್ತೇಜಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ತಿಳಿಸಿದೆ.

FASTag KYC latest Update
Image Credit: PTC News

ರಸ್ತೆ ಸಾರಿಗೆ ಸಚಿವಾಲಯದ ಪಿಐಬಿಯ ಎಡಿಜಿ ಜೆಪಿ ಮಟ್ಟು ಸಿಂಗ್, ಹಳೆಯ ಫಾಸ್ಟ್ಯಾಗ್‌ ಗಳು ಕೆವೈಸಿ ವ್ಯಾಪ್ತಿಗೆ ಬರುತ್ತವೆ ಎಂದು ಹೇಳುತ್ತಾರೆ. ಏಕೆಂದರೆ ಕಳೆದ ಕೆಲವು ವರ್ಷಗಳಿಂದ ತೆಗೆದುಕೊಳ್ಳಲಾದ ಫಾಸ್ಟ್‌ ಟ್ಯಾಗ್‌ ಗಳು ಆಧಾರ್‌ ಗೆ ಲಿಂಕ್ ಆಗಿವೆ ಮತ್ತು ಅವುಗಳ KYC ಕೂಡ ಮಾಡಲಾಗಿದೆ. ಹಳೆಯ ಫಾಸ್ಟ್ಯಾಗ್‌ ನಲ್ಲಿ ಈ ರೀತಿಯ ಸಮಸ್ಯೆ ಎದುರಾಗಿದ್ದು, ಅದನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಅಭ್ತಹ ಫಾಸ್ಟ್ ಟ್ಯಾಗ್ ಹೊಂದಿರುವವರು ತಮ್ಮ ಬ್ಯಾಂಕ್ ಗೆ ಭೇಟಿ ನೀಡಿ KYC ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

Join Nadunudi News WhatsApp Group

Join Nadunudi News WhatsApp Group