FASTag Port: ಫಾಸ್ಟ್ ಟ್ಯಾಗ್ ಅನ್ನು ಇನ್ನೊಂದು ಖಾತೆಗೆ ಪೋರ್ಟ್ ಮಾಡುವುದು ಹೇಗೆ..?

ಫಾಸ್ಟ್ ಟ್ಯಾಗ್ ಅನ್ನು ಇನ್ನೊಂದು ಖಾತೆಗೆ ಪೋರ್ಟ್ ಮಾಡುವುದು ಹೇಗೆ..? ಎನ್ನುವ ಬಗ್ಗೆ ಮಾಹಿತಿ

FASTag Port Process: ದೇಶದಲ್ಲಿ RBI ಈಗಾಗಲೇ Paytm Payment ಅನ್ನು ಸ್ಥಗಿತಗೊಳಿಸಿರುವುದು ಎಲ್ಲರಿಗು ಗೊತ್ತೇ ಇದೆ. ಪೆಟಿಎಂ ಬಳಕೆದಾರರು ಸದ್ಯ ಪೆಟಿಎಂ ಸೇವೆಗಳಿಂದ ವಂಚಿತರಾಗಿದ್ದಾರೆ. ಇನ್ನು RBI ಪೆಟಿಎಂ ವಿರುದ್ಧ ಕ್ರಮ ಕೈಗೊಂಡಾಗಿಂದ ಸಾಕಷ್ಟು ನಿಯಮಗಳು ಬದಲಾಗಿದೆ. ಅದರಲ್ಲೂ ಮುಖ್ಯವಾಗಿ Paytm FASTag ನಲ್ಲಿ ಬಾರಿ ಬದಲಾವಣೆ ಕಂಡುಬಂದಿದೆ. ಪೆಟಿಎಂ ಫಾಸ್ಟ್ ಟ್ಯಾಗ್ ಬಳಕೆದಾರರಿಗೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ ಎನ್ನಬಹುದು.

FASTag Port Process
Image Credit: Drive Spark

ಫಾಸ್ಟ್ ಟ್ಯಾಗ್ ಅನ್ನು Port ಮಾಡಲು ಸಾಧ್ಯವೇ…?
ಇನ್ನು ಪೆಟಿಎಂ ಪೇಮೆಂಟ್ ಮೇಲೆ RBI ನಿರ್ಬಂಧ ಹೇರಿದ ಕಾರಣ, ಜನರು ಫಾಸ್ಟ್ ಟ್ಯಾಗ್ ಅನ್ನು Port ಮಾಡಬಹುದೇ..? ಅಥವಾ ಇಲ್ಲವೇ…? ಎನ್ನುವ ಪ್ರಶ್ನೆ ಜನರಲ್ಲಿ ಮೂಡಿರಬಹುದು. ಪೆಟಿಎಂ ಪೇಮೆಂಟ್ ಬ್ಯಾಂಕಿನ ಫಾಸ್ಟ್ ಟ್ಯಾಗ್ ಸೇವೆಯನ್ನು ಹೊರಗಿಟ್ಟಾಗಿನಿಂದ ಅನೇಕ ಜನರು ಪೋರ್ಟ್ ಮಾಡುತ್ತಿದ್ದಾರೆ. ಇದೀಗ ನಾವು ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಫಾಸ್ಟ್ ಟ್ಯಾಗ್ ಅನ್ನು ಪೋರ್ಟ್ ಮಾಡುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಫಾಸ್ಟ್ ಟ್ಯಾಗ್ ಅನ್ನು ಇನ್ನೊಂದು ಖಾತೆಗೆ ಪೋರ್ಟ್ ಮಾಡುವುದು ಹೇಗೆ..?
ಫಾಸ್ಟ್‌ ಟ್ಯಾಗ್ ಪೋರ್ಟ್ ಪಡೆಯಲು, ನಿಮ್ಮ ಬ್ಯಾಂಕ್‌ ನ ಗ್ರಾಹಕ ಸೇವೆಯನ್ನು ನೀವು ಸಂಪರ್ಕಿಸಬೇಕು. ನೀವು ಹೊಸ ಫಾಸ್ಟ್‌ ಟ್ಯಾಗ್ ಪಡೆಯಲು ಯೋಚಿಸುತ್ತಿದ್ದರೆ, ಬ್ಯಾಂಕ್‌ ನ ಆನ್‌ ಲೈನ್ ಫಾಸ್ಟ್‌ ಟ್ಯಾಗ್ ಆಯ್ಕೆಗೆ ಹೋಗುವ ಮೂಲಕ ನೀವು ಅದಕ್ಕೆ ಅರ್ಜಿ ಸಲ್ಲಿಸಬೇಕು.

ನೀವು ಪೋರ್ಟ್ ಫಾಸ್ಟ್ಯಾಗ್ ಗ್ರಾಹಕ ಸೇವೆಗೆ ಕರೆ ಮಾಡಿದಾಗ, ನೀವು ಕೆಲವು ದಾಖಲೆಗಳು ಮತ್ತು ವಿವರಗಳನ್ನು ಸಹ ಒದಗಿಸಬೇಕಾಗುತ್ತದೆ. ಈ ಎಲ್ಲಾ ಮಾಹಿತಿಯನ್ನು ಒದಗಿಸಿದ ನಂತರ ನೀವು ಸುಲಭವಾಗಿ FastTag ಅನ್ನು ಪೋರ್ಟ್ ಮಾಡಬಹುದು. ಈ ಬ್ಯಾಂಕ್‌ ಗಳಲ್ಲಿ ಫಾಸ್ಟ್ ಟ್ಯಾಗ್ ಸೇವೆ ಲಭ್ಯವಿದೆ. ಫಾಸ್ಟ್ ಟ್ಯಾಗ್ ಸೇವೆ ಲಭ್ಯವಿರುವ ಬ್ಯಾಂಕುಗಳ ಪಟ್ಟಿ ಈ ಕೆಳಗಿನಂತಿದೆ.

How To Port Paytm Fas Tag
Image Credit: Aajtak

ಈ ಬ್ಯಾಂಕ್‌ ಗಳಲ್ಲಿ ಫಾಸ್ಟ್ ಟ್ಯಾಗ್ ಸೇವೆ ಲಭ್ಯವಿದೆ
•ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್

Join Nadunudi News WhatsApp Group

•ಅಲಹಾಬಾದ್ ಬ್ಯಾಂಕ್

•AU ಸ್ಮಾಲ್ ಫೈನಾನ್ಸ್ ಬ್ಯಾಂಕ್

•ಆಕ್ಸಿಸ್ ಬ್ಯಾಂಕ್

•ಬ್ಯಾಂಕ್ ಆಫ್ ಬರೋಡಾ

•ಬ್ಯಾಂಕ್ ಆಫ್ ಮಹಾರಾಷ್ಟ್ರ

•ಕೆನರಾ ಬ್ಯಾಂಕ್

Central Bank Of India
Image Credit: Live Mint

•ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

•ಸಿಟಿ ಯೂನಿಯನ್ ಬ್ಯಾಂಕ್

•ಕಾಸ್ಮೋಸ್ ಬ್ಯಾಂಕ್

•ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್

•ಫೆಡರಲ್ ಬ್ಯಾಂಕ್

•ಫಿನೋ ಪೇಮೆಂಟ್ಸ್ ಬ್ಯಾಂಕ್

•HDFC ಬ್ಯಾಂಕ್

•ಐಸಿಐಸಿಐ ಬ್ಯಾಂಕ್

•ಐಡಿಬಿಐ ಬ್ಯಾಂಕ್

IDFC First Bank
Image Credit: Live Mint

•ಐಡಿಎಫ್ ಸಿ ಫಸ್ಟ್ ಬ್ಯಾಂಕ್

•ಇಂಡಿಯನ್ ಬ್ಯಾಂಕ್

•ಇಂಡಸ್‌ ಇಂಡ್ ಬ್ಯಾಂಕ್

•ಜೆ & ಕೆ ಬ್ಯಾಂಕ್

•ಕರ್ನಾಟಕ ಬ್ಯಾಂಕ್

•ಕರೂರ್ ವೈಶ್ಯ ಬ್ಯಾಂಕ್

•ಕೋಟಕ್ ಮಹೀಂದ್ರಾ ಬ್ಯಾಂಕ್

•ನಾಗ್ಪುರ ನಾಗರಿಕ ಸಹಕಾರಿ ಬ್ಯಾಂಕ್

Punjab National Bank
Image Credit: The Hindu

•ಪಂಜಾಬ್ ನ್ಯಾಷನಲ್ ಬ್ಯಾಂಕ್

•ಸರಸ್ವತ್ ಬ್ಯಾಂಕ್

•ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)

•ತ್ರಿಶೂರ್ ಜಿಲ್ಲಾ ಸಹಕಾರಿ ಬ್ಯಾಂಕ್

•UCO ಬ್ಯಾಂಕ್

•ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

•ಯೆಸ್ ಬ್ಯಾಂಕ್

Join Nadunudi News WhatsApp Group