February Rule: ಫೆಬ್ರವರಿ ತಿಂಗಳಲ್ಲಿ ದೇಶದಲ್ಲಿ ಬದಲಾಗಲಿದೆ ಈ ಎಲ್ಲಾ ನಿಯಮಗಳು, ನಿಮ್ಮ ಜೇಬಿಗೆ ಕತ್ತರಿ

ಫೆಬ್ರವರಿ ತಿಂಗಳಲ್ಲಿ ದೇಶದಲ್ಲಿ ಬದಲಾಗಲಿದೆ ಈ 5 ನಿಯಮಗಳು

February Rule Change: ಫೆಬ್ರವರಿ 2024 ರಲ್ಲಿ ಮೋದಿ ಸರ್ಕಾರದ ಕೊನೆಯ ಬಜೆಟ್ ಘೋಷಣೆಯಾಗಲಿದೆ. ಈ ಬಜೆಟ್ ನಲ್ಲಿ ಸರ್ಕಾರ ಸಾಕಷ್ಟು ಬದಲಾವಣೆ ತರಲು ನಿರ್ಧರಿಸಿದೆ. ಬಜೆಟ್ ನಲ್ಲಿ ವಿವಿಧ ಘೋಷಣೆ ಮಾಡಲು ಸರ್ಕಾರ ಕಾಯುತ್ತಿದೆ. ಇನ್ನು ಫೆಬರವರಿ 2024 ರಿಂದ ದೇಶದಲ್ಲಿ ಅನೇಕ ನಿಯಮಗಳು ಬದಲಾಗಲಿವೆ. ಇದೀಗ ನಾವು ಫೆಬ್ರವರಿ ತಿಂಗಳಿಂದ ಬದಲಾಗುವ ಮುಖ್ಯ 5 ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Sovereign Gold Bond Latest Update
Image Credit: Advisor

ಫೆಬ್ರವರಿ ತಿಂಗಳಲ್ಲಿ ದೇಶದಲ್ಲಿ ಬದಲಾಗಲಿದೆ ಈ ಎಲ್ಲಾ ನಿಯಮಗಳು
•Sovereign Gold Bond (SGB)
ಭಾರತೀಯ ರಿಸರ್ವ್ ಬ್ಯಾಂಕ್ (RBI) ಫೆಬ್ರವರಿಯಲ್ಲಿ 2023-24 ಹಣಕಾಸು ವರ್ಷದಲ್ಲಿ ಸಾವರಿನ್ ಗೋಲ್ಡ್ ಬಾಂಡ್‌ ನ ಕೊನೆಯ ಕಂತಿನ ಬಿಡುಗಡೆ ಮಾಡಲಿದೆ. SGB 2023-24 ಸರಣಿ 4 ಫೆಬ್ರವರಿ 12 ರಂದು ತೆರೆಯುತ್ತದೆ ಮತ್ತು 16 ಫೆಬ್ರವರಿ 2024 ರಂದು ಮುಕ್ತಾಯಗೊಳ್ಳುತ್ತದೆ. ಆದರೆ ಹಿಂದಿನ ಕಂತು ಡಿಸೆಂಬರ್ 18 ರಂದು ಪ್ರಾರಂಭವಾಯಿತು ಮತ್ತು ಡಿಸೆಂಬರ್ 22 ರಂದು ಮುಚ್ಚಲ್ಪಡುತ್ತದೆ. ಈ ಕಂತಿಗೆ, ಸೆಂಟ್ರಲ್ ಬ್ಯಾಂಕ್ ಚಿನ್ನದ ವಿತರಣೆ ಬೆಲೆಯನ್ನು ಪ್ರತಿ ಗ್ರಾಂಗೆ 6,199 ರೂ.  ಆಗಲಿದೆ.

•NPS ವಾಪಸಾತಿ ನಿಯಮ
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಜನವರಿಯಲ್ಲಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ ಹೂಡಿಕೆ ಮಾಡಿದ ಹಣವನ್ನು ಭಾಗಶಃ ಹಿಂಪಡೆಯಲು ಮಾರ್ಗಸೂಚಿಗಳನ್ನು ರೂಪಿಸುವ ಸುತ್ತೋಲೆಯನ್ನು ಹೊರಡಿಸಿತು. ಮೊದಲ ಮನೆಯ ಖರೀದಿ ಅಥವಾ ನಿರ್ಮಾಣಕ್ಕಾಗಿ ಮಾತ್ರ ಚಂದಾದಾರರು ಭಾಗಶಃ ಹಿಂಪಡೆಯುವಿಕೆಯನ್ನು ಮಾಡಬಹುದು ಎಂದು ಪಿಂಚಣಿ ಸಂಸ್ಥೆ ಸ್ಪಷ್ಟಪಡಿಸಿದೆ. ಫೆಬ್ರವರಿ 1 ರಿಂದ ಈ ನಿಯಮ ಜಾರಿಗೆ ಬರಲಿದೆ.

FASTag Latest Update
Image Credit: Kannadanewsnow

•ಫಾಸ್ಟ್ಯಾಗ್ eKYC
KYC ಇಲ್ಲದ ಎಲ್ಲಾ ಫಾಸ್ಟ್‌ ಟ್ಯಾಗ್‌ ಗಳನ್ನು ಜನವರಿ 31 ರ ನಂತರ ನಿಷ್ಕ್ರಿಯಗೊಳಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ. ಫೆಬ್ರವರಿ 1 ರಂದು ಬಳಕೆದಾರರು ತಮ್ಮ ಫಾಸ್ಟ್‌ ಟ್ಯಾಗ್‌ ಗಾಗಿ KYC ಪೂರ್ಣಗೊಂಡಿದೆ ಎಂದು ಖಚಿತಪಡಿಸಿಕೊಳ್ಳಬೇಕು.

•SBI ಗೃಹ ಸಾಲದ ಮೇಲೆ ರಿಯಾಯಿತಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಸ್ತುತ ತನ್ನ ಗ್ರಾಹಕರಿಗೆ ಗೃಹ ಸಾಲದ ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ. ಇದು 65 bps ಗಿಂತ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲಗಳನ್ನು ನೀಡುತ್ತಿದೆ. ಗೃಹ ಸಾಲದ ಮೇಲಿನ ಪ್ರಕ್ರಿಯೆ ಶುಲ್ಕ ಮತ್ತು ರಿಯಾಯಿತಿಗಳಿಗೆ ಕೊನೆಯ ದಿನಾಂಕ 31 ಜನವರಿ 2024. ಈ ರಿಯಾಯಿತಿಯು ಫ್ಲೆಕ್ಸಿಪೇ, ಎನ್‌ಆರ್‌ಐ, ಸಂಬಳೇತರ, ಸವಲತ್ತು ಮತ್ತು ಇತರರಿಗೆ ಲಭ್ಯವಿದೆ.

Join Nadunudi News WhatsApp Group

SBI Home Loan Latest Update
Image Credit: News18

•ಧನ್ ಲಕ್ಷ್ಮಿ FD ಯೋಜನೆ
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ ನ (ಪಿಎಸ್‌ಬಿ) ವಿಶೇಷ ಎಫ್‌ಡಿ ‘ಧನ ಲಕ್ಷ್ಮಿ 444 ಡೇಸ್’ ಕೊನೆಯ ದಿನಾಂಕ ಜನವರಿ 31, 2024 ಆಗಿದೆ. ಬ್ಯಾಂಕ್ ಕೊನೆಯ ದಿನಾಂಕವನ್ನು ನವೆಂಬರ್ 30, 2023 ರಿಂದ ಜನವರಿ 31, 2024 ರವರೆಗೆ ವಿಸ್ತರಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಎಫ್‌ ಡಿ ಯಲ್ಲಿ ಹಣ ಹೂಡಿಕೆ ಮಾಡುವವರು ಅದರಲ್ಲಿ ಹೂಡಿಕೆ ಮಾಡಬಹುದು. ಈ FD ಯ ಅವಧಿಯು 444 ದಿನಗಳು ಮತ್ತು ಬಡ್ಡಿ ದರವು 7.4% ಮತ್ತು ಸೂಪರ್ ಸೀನಿಯರ್‌ಗೆ ಇದು 8.05% ಆಗಿದೆ.

Join Nadunudi News WhatsApp Group