Flipkart Loan: ಈಗ ಫ್ಲಿಪ್ಕಾರ್ಟ್ ನಲ್ಲಿ 30 ನಿಮಿಷದಲ್ಲಿ ಸಿಗಲಿದೆ 5 ಲಕ್ಷ ರೂ ಸಾಲ, ಗ್ರಾಹಕರಿಗೆ ಹೊಸ ಸೇವೆ ಆರಂಭ.

ಗ್ರಾಹಕರಿಗೆ ವೈಯಕ್ತಿಕ ಸಾಲವನ್ನು ನೀಡುವುದಾಗಿ ಘೋಷಣೆ ಹೊರಡಿಸಿದ ಫ್ಲಿಪ್ಕಾರ್ಟ್.

Flipkart Personal Loan: ದೇಶದ ಜನಪ್ರಿಯ ಇ ಕಾಮರ್ಸ್ ಅಪ್ಲಿಕೇಶನ್ ಆಗಿರುವ Flipkart ವಿಶೇಷ ರಿಯಾಯಿತಿಯ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇತ್ತೀಚೆಗಂತೂ ಫ್ಲಿಪ್ಕಾರ್ಟ್ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.

ಸ್ಮಾರ್ಟ್ ಫೋನ್,ಸ್ಮಾರ್ಟ್ ಟಿವಿ, ಸ್ಮಾರ್ಟ್ ವಾಚ್, ಲ್ಯಾಪ್ ಟಾಪ್ ಸೇರಿದಂತೆ ಇನ್ನಿತರ ವಸ್ತುಗಳ ಖರೀದಿಯ ಮೇಲೆ ವಿಶೇಷ ರಿಯಾಯಿತಿಯನ್ನು ಗ್ರಾಹಕರಿಗೆ ನೀಡುತ್ತಿದೆ. ಇದೀಗ ಫ್ಲಿಪ್ ಕಾರ್ಟ್ ಗ್ರಾಹಕರಿಗೆ ವಿಶೇಷ ಸೌಲಭ್ಯವನ್ನು ನಿಡಲು ಮುಂದಾಗಿದೆ.

5 Lakh Personal Loan available on Flipkart
Image Credit: Thearcweb

ಫ್ಲಿಪ್ ಕಾರ್ಟ್ ನಲ್ಲಿ ಹೊಸ ಸೇವೆ ಆರಂಭ
ಫ್ಲಿಪ್ ಕಾರ್ಟ್ ಇದೀಗ ಗ್ರಾಹಕರಿಗಾಗಿ ಹೊಸ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ. ಗ್ರಾಹಕರಿಗೆ ಸಾಲ (Flipkart Loan) ಪಡೆದುಕೊಳ್ಳಲು ಫ್ಲಿಪ್ ಕಾರ್ಟ್ ಇನ್ನುಮುಂದೆ ಸಹಾಯವಾಗಲಿದೆ.

ಫ್ಲಿಪ್ ಕಾರ್ಟ್ ಗ್ರಾಹಕರಿಗಾಗಿ ವೈಯಕ್ತಿಕ ಸಾಲ ನೀಡಲು ನಿರ್ಧರಿಸಿದೆ. ಇವು ಗ್ರಾಹಕರಿಗೆ ವಿವಿಧ ಬ್ಯಾಂಕ್, ಹಣಕಾಸು ಸಂಸ್ಥೆಗಳು ಹಾಗೂ ಇನ್ನಿತರ ಸಾಲದ ಅಪ್ಲಿಕೇಶನ್ ಗಳು ಸಾಲವನ್ನು ನೀಡುತ್ತವೆ. ಆದರೆ ಇದೀಗ ಫ್ಲಿಪ್ ಕಾರ್ಟ್ ನಲ್ಲಿ ಕೂಡ ಸಾಲ ಸೌಲಭ್ಯ ಲಭ್ಯವಾಗಲಿದೆ.

ಫ್ಲಿಪ್ ಕಾರ್ಟ್ ನಲ್ಲಿ ಸಿಗಲಿದೆ ಸಾಲ ಸೌಲಭ್ಯ
ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಬ್ಯಾಂಕ್ ಸಾಕಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇನ್ನು ಕೆಲವು ಬ್ಯಾಂಕ್ ನಲ್ಲಿ ಸಾಲದ ದರ ಕೂಡ ಹೆಚ್ಚಿರುತ್ತದೆ. ಇದೀಗ ಫ್ಲಿಪ್ಕಾರ್ಟ್ ಗ್ರಾಹಕರಿಗೆ ಮೂರು ವರ್ಷಗಳ ವೈಯಕ್ತಿಕ ಸಾಲವನ್ನು ನೀಡುವುದಾಗಿ ಘೋಷಣೆ ಹೊರಡಿಸಿದೆ.

Join Nadunudi News WhatsApp Group

5 Lakh Personal Loan available on Flipkart
Image Credit: Maharashtranama

ಆಕ್ಸಿಸ್ ಬ್ಯಾಂಕ್ ಕೇವಲ 30 ಸೆಕೆಂಡುಗಳಲ್ಲಿ 5 ಲಕ್ಷದ ವರೆಗೆ ವೈಯಕ್ತಿಕ ಸಾಲಗಳನ್ನು ಅನುಮೋದಿಸಲಿದೆ. ಇನ್ನು ಫ್ಲಿಪ್ಕಾರ್ಟ್ ಸರಿಸುಮಾರು 45 ಕೋಟಿ ನೋಂದಾಯಿತ ಗ್ರಾಹಕರನ್ನು ಹೊಂದಿದ್ದು, ಗ್ರಾಹಕರು ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಕೇವಲ 30 ಸೆಕೆಂಡುಗಳಲ್ಲಿ ಸಾಲವನ್ನು ಪಡೆಯಬಹುದು.

ಫ್ಲಿಪ್ಕಾರ್ಟ್ ನಲ್ಲಿ ಲಭ್ಯವಿದೆ 5 ಲಕ್ಷದ ವೈಯಕ್ತಿಕ ಸಾಲ
ಫ್ಲಿಪ್ ಕಾರ್ಟ್ ನ ಮೂಲಕ 5 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು 6 ತಿಂಗಳಿಂದ 36 ತಿಂಗಳುಗಳ ಕಾಲ ಸಾಲದ ಮರುಪಾವತಿಗೆ ಸಮಯಾವಕಾಶವನ್ನು ನೀಡಲಾಗುತ್ತದೆ. ಸಾಲ ಮಂಜೂರಾತಿಯು ನಿಮ CIBIL ಸ್ಕೊರ್ ಮತ್ತು ಆದಾಯವನ್ನು ಅವಲಂಭಿತವಾಗಿರುತ್ತದೆ. ಪಾನ್ ಕಾರ್ಡ್ ನ ವಿವರವನ್ನು ನೀಡುವ ಮೂಲಕ ಫ್ಲಿಪ್ಕಾರ್ಟ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group