Free Ration Distribution: ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ, 2024 ರ ತನಕ ಪಡಿತರ ಧಾನ್ಯ ಉಚಿತ.

Govt's decision to distribute free food ration till 2024 in Madhya Pradesh

Ration Card New Update: ಜನಸಾಮಾನ್ಯರಿಗಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಸೌಲಭ್ಯವನ್ನು ನೀಡಿದೆ. ದೇಶದ ಬಡವರಿಗಾಗಿ ಹಲವಾರು ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ.

ಸರ್ಕಾರದ ಅನೇಕ ಯೋಜನೆಗಳು ಬಡ ನಾಗರಿಕರಿಗೆ ಉಪಯೋಗವಾಗಿದೆ. ಇನ್ನು ಇದೀಗ ಪಡಿತರ ಚೀಟಿದಾರರಿಗೆ (Ration Card) ಹೊಸ ಸೌಲಭ್ಯವನ್ನು ನೀಡಲು ಸರ್ಕಾರ ಮುಂದಾಗಿದೆ.

Ration Card New Update By Government
Image Source: Zee News

ಪಡಿತರ ಚೀಟಿದಾರರಿಗೆ ಸರ್ಕಾರದಿಂದ  ಸಿಹಿ ಸುದ್ದಿ
ದೇಶದಲ್ಲಿನ ಬಡ ಜನರಿಗಾಗಿ ಸರ್ಕಾರ ಪಡಿತರ ವಿತರಣೆ ಯೋಜನೆನ್ನು ಜಾರಿಗೊಳಿಸಿತ್ತು. ಇದರಿಂದಾಗಿ ಅದೆಷ್ಟೋ ಬಡ ಜನರು ಕಡಿಮೆ ದರದಲ್ಲಿ ಪಡಿತರನ್ನು ಪಡೆಯುತ್ತಿದ್ದರು. ಇದೀಗ ಪಡಿತರ ಚೀಟಿದಾರರಿಗೆ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬಡ ನಾಗರೀಕರಿಗಾಗಿ ಸರ್ಕಾರ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ.

Ration Card New Update By Government
Image Credit: Zee News

ಬಡ ಜನರಿಗೆ ಉಚಿತ ಆಹಾರ ಧಾನ್ಯ ವಿತರಣೆ
ಇದೀಗ ಮಧ್ಯ ಪ್ರದೇಶದ ಹೊಸ ಬಜೆಟ್ ಮಂಡನೆಯಾಗಿದೆ. ದೇಶದ ಪ್ರಸಕ್ತ ಬಜೆಟ್ ನಲ್ಲಿ 2024 ರವರೆಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲು ಸರಕಾರ ನಿರ್ಧರಿಸಿದೆ. ಹೀಗಾಗಿ 2024 ರವರೆಗೆ ಪಡಿತರ ಚೀಟಿದಾರರು ಒಂದು ಪೈಸೆ ಹಣ ನೀಡದೆ ಆಹಾರವನ್ನು ಖರೀದಿಸಬಹುದು.

ನೀವು ಮಧ್ಯಪ್ರದೇಶದ ಪ್ರಜೆಯಾಗಿದ್ದರೆ ನಿಮಗೆ ಈ ಸೌಲಭ್ಯ ಸಿಗಲಿದೆ. ಉಚಿತ ಆಹಾರ ಧಾನ್ಯಗಳನ್ನು ನೀಡುವಂತೆ ಮಧ್ಯಪ್ರದೇಶ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ರಾಜ್ಯದ ಲಕ್ಷಾಂತರ ಪಡಿತರ ಚೀಟಿದಾರರು ಈ ಹೊಸ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು.

Join Nadunudi News WhatsApp Group

Ration Card New Update By Government
Image Source: The Indian Express

ಉಚಿತ ಪಡಿತರ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ರಾಜ್ಯ ಸರ್ಕಾರ 500 ಕೋಟಿ ರೂ. ರಾಜ್ಯದಲ್ಲಿ 500 ಕೋಟಿ ವೆಚ್ಚದಲ್ಲಿ 3500 ಪಡಿತರ ಅಂಗಡಿ ತೆರೆಯಲು ಸರ್ಕಾರ ಸಿದ್ಧತೆ ಮಾಡಿದೆ. ಇನ್ನು ನೀವು ಮಧ್ಯಪ್ರದೇಶದ ಪ್ರಜೆಯಾಗಿದ್ದರೆ, ಈ ಹೊಸ ಸೌಲಭ್ಯದ ಲಾಭವನ್ನು ಪಡೆದುಕೊಳ್ಳಿ.

ಕರ್ನಾಟಕದಲ್ಲಿ ಈ ಕೂಡ ಈ ನಿಯಮ ಜಾರಿಗೆ ಬರಬೇಕು
ಸದ್ಯ ಈ ನಿಯಮ ಮಧ್ಯ ಪ್ರದೇಶದಲ್ಲಿ ಮಾತ್ರ ಜಾರಿಗೆ ಬಂದಿದೆ. ಮಧ್ಯಪ್ರದೇಶದ ಜನರು 2024 ರ ವರೆಗೆ ಉಚಿತವಾಗಿ ಪಡಿತರ ಅಂಗಡಿಗಳಲ್ಲಿ ಆಹಾರ ಧಾನ್ಯಗಳನ್ನ ಪಡೆದುಕೊಳ್ಳಬಹುದು ಎಂದು ಸರ್ಕಾರ ಹೇಳಿದೆ. ಈ ನಿಯಮ ಕರ್ನಾಟಕದಲ್ಲಿ ಕೂಡ ಜಾರಿಗೆ ಬರಬೇಕು ಎಂದು ಬಡಜನರು ಮತ್ತು ಮಧ್ಯಮ ವರ್ಗದ ಜನರು ತಮ್ಮ ಅಭಿಪ್ರಾಯವನ್ನ ಹೊರಹಾಕಿದ್ದಾರೆ.

Ration Card New Update By Government
Image Source: India.com

Join Nadunudi News WhatsApp Group