Galaxy Book4: ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಸಲು ಇದು ಬೆಸ್ಟ್ ಟೈಮ್, ಅಗ್ಗದ ಬೆಲೆಗೆ Samsung ಲ್ಯಾಪ್ ಟಾಪ್ ಲಾಂಚ್

Samsung ನ ನೂತನ ಗ್ಯಾಲಕ್ಸಿ ಬುಕ್ 4 ಖರೀದಿಗೆ ಭರ್ಜರಿ ಆಫರ್

Galaxy Book4 Series Booking: ಟೆಕ್ ವಲಯದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ Samsung Galaxy ಸದ್ಯ ಹೊಸ Electronic Items ಗಳನ್ನೂ ಲಾಂಚ್ ಮಾಡುತ್ತಿದೆ. ಸದ್ಯ Samsung ನೂತನ Galaxy Book4 Series ಅನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಕಂಪನಿಯು ಬುಕ್ 4 ಸಿರೀಸ್ ನ ಬುಕಿಂಗ್ ಅನ್ನು ಕೂಡ ಆರಂಭಿಸಿದೆ. ಈ ನೂತನ ಮಾದರಿಯನ್ನು ಬುಕ್ ಮಾಡುವ ಮೂಲಕ ಗ್ರಾಹಕರು ಹೆಚ್ಚಿನ Cash back ಅನ್ನು ಪಡೆದುಕೊಳ್ಳಬಹುದಾಗಿದೆ. 

Galaxy Book4 Series Booking
Image Credit: Samsung

Galaxy Book4 Series ಬುಕಿಂಗ್ ಆರಂಭ
Galaxy Book4 ಪ್ರೋ ಮತ್ತು Galaxy Book4 360 ಅನ್ನು ಒಳಗೊಂಡಿರುವ ಅಲ್ಟ್ರಾ-ಸ್ಮಾರ್ಟ್ PC ಶ್ರೇಣಿಯ Galaxy Book4 ಸರಣಿಯ ಮುಂಗಡ ಬುಕಿಂಗ್ ಪ್ರಾರಂಭವಾಗಿದೆ. Galaxy Book4 ಸರಣಿಯು ಹೊಸ Intelligent Processors ಅನ್ನು ಹೊಂದಿದೆ. AI ಯ ಹೊಸ ಯುಗವು ಅತ್ಯುತ್ತಮ ಭದ್ರತಾ ವ್ಯವಸ್ಥೆ, ಉತ್ಪಾದಕತೆ, ಚಲನಶೀಲತೆ ಮತ್ತು ಸಂಪರ್ಕವನ್ನು ನೀಡುವ PC ಯನ್ನು ಪ್ರಾರಂಭಿಸುತ್ತಿದೆ.

Galaxy Book 4 ಸರಣಿಯು ಅತ್ಯಂತ ಬುದ್ಧಿವಂತ, ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಇತ್ತೀಚಿನ Intel® Core™ Ultra7/Ultra5 Processors ನೊಂದಿಗೆ ಸಜ್ಜುಗೊಂಡಿದೆ. ಇದು ವೇಗದ ಸಾಮರ್ಥ್ಯದ Central Processing Unit (CPU), ಹೆಚ್ಚು ಶಕ್ತಿಶಾಲಿ Graphics Processing Unit (GPU) ಮತ್ತು ಹೊಸದಾಗಿ ಸೇರಿಸಲಾದ Neutral Processing Unit (NPU) ಹೊಂದಿದೆ.

Galaxy Book4 Series Price And Feature
Image Credit: Gearrice

ಗ್ಯಾಲಕ್ಸಿ ಬುಕ್ 4 ಖರೀದಿಗೆ ಭರ್ಜರಿ ಆಫರ್
ಅತ್ಯಾಧುನಿಕ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನವನ್ನು ಒಳಗೊಂಡಿರುವ Book4 ಅನ್ನು ಬುಕ್ ಮಾಡುವ ಗ್ರಾಹಕರಿಗೆ ರೂ 8,000 ಕ್ಯಾಶ್‌ ಬ್ಯಾಕ್ ಕೊಡುಗೆಯನ್ನು ಸಹ ನೀಡಲಾಗಿದೆ. Galaxy Book4 Pro 360, Galaxy Book4 Pro ಮತ್ತು Galaxy Book4 360 ಉತ್ಪನ್ನಗಳು ಫೆಬ್ರವರಿ 20, 2024 ರಿಂದ Samsung.com ನಲ್ಲಿ ಮುಂಗಡ ಬುಕಿಂಗ್‌ ಗೆ ಲಭ್ಯವಿರುತ್ತವೆ.

ಪ್ರಮುಖ Online Store ಗಳು ಮತ್ತು ಆಯ್ದ ಚಿಲ್ಲರೆ ಅಂಗಡಿಗಳಲ್ಲಿ ಬುಕ್ ಮಾಡಬಹುದಾಗಿದೆ. Galaxy Book4 ಅನ್ನು ಮುಂಗಡವಾಗಿ ಬುಕ್ ಮಾಡುವ ಗ್ರಾಹಕರು ರೂ. 5000 ಮೌಲ್ಯದ ಪ್ರಯೋಜನಗಳನ್ನು ಪಡೆಯುತ್ತಾರೆ. Galaxy Book4 Pro ಮತ್ತು Galaxy Book4 360 ಅನ್ನು ಬುಕ್ ಮಾಡುವ ಗ್ರಾಹಕರು ರೂ.10000 ಮೌಲ್ಯದ ಬ್ಯಾಂಕ್ Cash back ಕೊಡುಗೆಯನ್ನು ಅಥವಾ ರೂ.8000 ಮೌಲ್ಯದ ಅಪ್‌ಗ್ರೇಡ್ ಬೋನಸ್ ಅನ್ನು ಪಡೆಯುತ್ತಾರೆ. ಗ್ರಾಹಕರು 24 ತಿಂಗಳವರೆಗೆ No Cost EMI ಅನ್ನು ಕೂಡ ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group