Free Bore Well: ಸ್ವಂತ ಜಮೀನು ಹೊಂದಿರುವ ರೈತರಿಗೆ ಉಚಿತ ಬೋರ್ ವೆಲ್ ಘೋಷಣೆ, ಗಂಗಾ ಕಲ್ಯಾಣ ಯೋಜನೆಗೆ ಚಾಲನೆ

ರಾಜ್ಯದ ರೈತರಿಗಾಗಿ Ganga Kalyana ಯೋಜನೆ ಜಾರಿ.

Ganga Kalyana Scheme For Farmers: ರೈತರ ಅಭಿವೃದ್ದಿಗಾಗಿ ಸರ್ಕಾರ ವಿವಿಧ ಕ್ರಮ ಕೈಗೊಳ್ಳುತ್ತಿದೆ. ರೈತರಿಗೆ ತಮ್ಮ ಕೃಷಿಯಲ್ಲಿ ಯಾವುದೇ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ವಿವಿಧ ಸೌಲಭ್ಯವನ್ನು ಒದಗಿಸುತ್ತ ರೈತರ ಕೃಷಿಯನ್ನು ಅಭಿವೃದ್ಧಿಗಳಿಸುವತ್ತ ಗಮನ ಹರಿಸುತ್ತಿದೆ.

ಸಾಮಾನ್ಯವಾಗಿ ಕೃಷಿಗೆ ಮುಖ್ಯವಾಗಿ ಬೇಕಾಗಿರುವುದು ನೀರು. ಈ ಬಾರಿಯಂತೂ ಮಳೆಯ ಅಭಾವದಿಂದ ಸಾಕಷ್ಟು ರೈತರು ತಮ್ಮ ಬೆಳೆಯನ್ನು ಕಳೆದುಕೊಂಡಿದ್ದಾರೆ. ಈ ಬೆಲೆ ನಷ್ಟಕ್ಕೆ ಸರ್ಕಾರ ಬರ ಪರಿಹಾರ ಕೂಡ ಘೋಷಿಸಿದೆ. ಇನ್ನುಮುಂದೆ ನೀರಿನ ಸಮಸ್ಯೆಯಿಂದ ರೈತರ ಕೃಷಿ ಹಾಳಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಇದೀಗ ಹೊಸ ಯೋಜನೆಯನ್ನು ಜಾರಿಗೊಳಿಸುವತ್ತ ಗಮನಹರಿಸುತ್ತಿದೆ.

Ganga Kalyana For Farmers
Image Credit: The South First

ರಾಜ್ಯದ ರೈತರಿಗಾಗಿ Ganga Kalyana ಯೋಜನೆ ಜಾರಿ
ಮಳೆ ಹಾನಿಯಿಂದಾಗಿ ಕಂಗಾಲಾಗಿರುವ ರೈತರಿಗಾಗಿ ರಾಜ್ಯ ಸರ್ಕಾರ Ganga Kalyana Scheme ಅನ್ನು ಪರಿಚಯಿಸಿದೆ. ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಚಿತ ಬೋರ್ ವೆಲ್ (Free Borewell) ಕೊರೆಸಲು ಸಹಾಯಧನ ನೀಡಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಯಡಿ ಅರ್ಹರಿಗೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿದೆ.

ರಾಜ್ಯ ಸರ್ಕಾರದ Ganga Kalyana Scheme ಅಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಅಂದರೆ 1.20 ಎಕರೆಯಿಂದ 5 ಎಕರೆ ಜಮೀನು ಹೊಂದಿರುವವರು ಈ ಯೋಜನೆಯ್ದಿ ಒಟ್ಟು 1 .5 ಲಕ್ಷ ರೂಗಳಿಂದ 3 .50 ಲಕ್ಷ ರೂ. ಸಹಾಯಧನವನ್ನು ಸರ್ಕಾರದಿಂದ ಪಡೆಯಬಹುದು. ಬಾಕಿ 50 ಸಾವಿರವನ್ನು ಶೇ. 4 ರ ಬಡ್ಡಿಯಂತೆ ತೀರಿಸಬೇಕಾಗುತ್ತದೆ. ಇದೀಗ ನಾವು ಈ ಯೋಜನೆಯ ಅರ್ಜಿ ಸಲ್ಲಿಕೆ ಹೇಗೆ..? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು..? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Ganga Kalyana Scheme 2023
Image Credit: Sarkariyojana

ಅರ್ಜಿ ಸಲ್ಲಿಕೆಗೆ ಯಾರು ಅರ್ಹರು..?
•ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರು ಯೋಜನೆಗೆ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

•ಇನ್ನು ಗ್ರಾಮೀಣ ಪ್ರದೇಶದಲ್ಲಿ 1 .5 ಲಕ್ಷ ರೂ. ನಗರ ಪ್ರದೇಶದಲ್ಲಿ 2 ಲಕ್ಷ ಆದಾಯ ಮಿತಿಯನ್ನು ಮೀರಿರಬಾರದು.

•ಅರ್ಜಿದಾರರ ವಯಸ್ಸು ಕನಿಷ್ಠ 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.

•ಗ್ರಾಮ ಒನ್, ಬೆಂಗಳೂರು ಒನ್, ಅಟಲ್ ಜನಸ್ನೇಹಿ ಸೇವಾ ಕೇಂದ್ರ ಅಥವಾ ಸೇವಾಸಿಂಧು ಪೋರ್ಟಲ್ ನ ಮೂಲಕ December 15 , 2023 ರೊಳಗೆ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

Ganga Kalyana Yojana
Image Credit: Government Jobs In Karnataka

ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಅಗತ್ಯ
•ಸಣ್ಣ ಹಿಡುವಳಿದಾರರ ಪ್ರಮಾಣಪತ್ರ

•ಆದಾಯ ಹಾಗೂ ಜಾತಿ ಪ್ರಮಾಣ ಪತ್ರ

•ಇತ್ತೀಚಿನ ಪಹಣಿ

•ಕುಟುಂಬವದರ ಪಡಿತರ ಚೀಟಿ

•ಬ್ಯಾಂಕ್ ಪಾಸ್ ಬುಕ್

•ಆಧಾರ್ ಕಾರ್ಡ್

•ಗಂಗಾ ಕಲ್ಯಾಣ ಯೋಜನೆಗೆ ನೀವು https://kmdc.karnataka.gov.in/ ಅಧಿಕೃತ ವೆಬ್ ಸೈಟ್ ನ ಮೂಲಕ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group