Garlic Price: ದಾಖಲೆಯ ಏರಿಕೆ ಕಂಡ ಬೆಳ್ಳುಳ್ಳಿ ಬೆಲೆ, ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಬೆಳ್ಳುಳ್ಳಿ ಬೆಲೆ

ಜನರನ್ನು ಕಂಗಾಲು ಮಾಡಿದ ಬೆಳ್ಳುಳ್ಳಿ ಬೆಲೆ, ಬೆಳ್ಳುಳ್ಳಿ ಇಷ್ಟೊಂದು ದುಬಾರಿಯಾಗಲು ಕಾರಣವೇನು..?

Garlic Price Hike: ರಾಜ್ಯದೆಲ್ಲೆಡೆ ಈಗಾಗಲೇ ಬೆಲೆ ಏರಿಕೆಯ ಬಿಸಿ ಜನರಿಗೆ ತಾಗಿದೆ. ಕಳೆದ ವರ್ಷದಿಂದ ಒನ್ದಲ್ಲ ಒಂದು ದಿನ ಬಳಕೆಯ ವಸ್ತುವಿನ ಬೆಲೆ ಏರಿಕೆಯಾಗುವ ಮೂಲಕ ಜನಸಾಮಾನ್ಯರಿಗೆ ಆರ್ಥಿಕ ಹೊರೆ ನೀಡುತ್ತಿದೆ ಎನ್ನಬಹುದು.

ರಾಜ್ಯದಲ್ಲಿ ಈ ಹಿಂದೆ ಟೊಮೇಟೊ, ಈರುಳ್ಳಿ, ಬೇಳೆಕಾಳುಗಳು, ಹಾಲು, ಮೊಸರು ಸೇರಿದಂತೆ ಅನೇಕ ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಿತ್ತು. ಈ ಸಮಯಲ್ಲಿ ಮನೆಯಲ್ಲಿ ಅಡುಗೆ ಮಾಡಲು ಜನರು ಚಿಂತಿಸುವಂತಾಗಿದೆ. ಸದ್ಯ ಬೆಲೆ ಏರಿಕೆಯ ಸಾಲಿಗೆ ಇದೀಗ ಬೆಳ್ಳುಳ್ಳಿ (Garlic) ಕೂಡ ಸೇರಿಕೊಂಡಿದೆ. ಹೌದು, ಟೊಮೇಟೊ, ಈರುಳ್ಳಿ ಬೆಲೆಯ ಏರಿಕೆಗಿಂತ ಬೆಳ್ಳುಳ್ಳಿ ಬೆಲೆಯ ಏರಿಕೆ ಜನರನ್ನು ಕಂಗಾಲು ಮಾಡುತ್ತಿದೆ.

Garlic Price Hike In Karnataka
Image Credit: ibc24

ಕೆಜಿಗೆ 600 ರೂ. ದಾಟಿದೆ ಬೆಳ್ಳುಳ್ಳಿ ಬೆಲೆ
ಬೆಳ್ಳುಳ್ಳಿ ಬೆಲೆಯ ಏರಿಕೆಯಾ ಪ್ರಮಾಣ ಇನ್ನು ಕಡಿಮೆ ಆಗುತ್ತಿಲ್ಲ. ಈ ಹಿಂದೆ ಬೆಳ್ಳುಳ್ಳಿ ಕೆಜಿಗೆ 150 ರಿಂದ 200 ರೂ. ಲಭ್ಯವಾಗುತ್ತಿತ್ತು. ಆದರೆ ಇದೀಗ ಬೆಳ್ಳುಳ್ಳಿ ಮೈಗೆಟುಕದಂತಾಗಿದೆ. ಕೆಜಿಗೆ 600 ರೂ. ತಲುಪುತ್ತಿದೆ. ಅಡುಗೆಗೆ ಬೆಳ್ಳುಳ್ಳಿ ಬಳಸಲು ಸಾಧ್ಯವಾಗದ ಪರಿಸ್ಥಿತಿ ತಲುಪಿದೆ. ದೆಹಲಿ, ಲಕ್ನೋ, ಭೋಪಾಲ್, ಪಾಟ್ನಾ ಸೇರಿದಂತೆ ಬಹುತೇಕ ನಗರಗಳಲ್ಲಿ ಬೆಳ್ಳುಳ್ಳಿ ಕೆಜಿಗೆ 400 ರಿಂದ 600 ರೂ.ಗೆ ಮಾರಾಟವಾಗುತ್ತಿದೆ. ಬೆಳ್ಳುಳ್ಳಿಯ ಬೆಲೆ ಇಷ್ಟೊಂದು ದುಬಾರಿಯಾಗಲು ಕಾರಣವೇನು..? ಎನ್ನುವ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿದುಕೊಳ್ಳಿ.

Garlic Price Hike News
Image Credit: Manilatimes

ಬೆಳ್ಳುಳ್ಳಿ ಇಷ್ಟೊಂದು ದುಬಾರಿಯಾಗಲು ಕಾರಣವೇನು..?
ಹೊಸ ಬೆಳೆ ಬರಲು ವಿಳಂಬ ಹಾಗೂ ಇಳುವರಿ ಕೊರತೆಯಿಂದ ಬೆಳ್ಳುಳ್ಳಿ ಬೆಲೆ ಹೆಚ್ಚಾಗಿದೆ. ಬದಲಾಗುತ್ತಿರುವ ಹವಾಮಾನವು ಬೆಳ್ಳುಳ್ಳಿ ಬೆಳೆಗಳ ಮೇಲೆ ಪರಿಣಾಮ ಬೀರಿದೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ರೈತರನ್ನು ಕಾಡಿದೆ, ಮಳೆ ಸರಿಯಾಗಿ ಆಗದ ಕಾರಣ ಬೆಳೆಗಳೆಲ್ಲಾ ನಾಶವಾಗಿದೆ. ಈ ಬೆಳೆ ನಾಶ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಬಹುದಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡರಿಂದಲೂ ಬೆಳ್ಳುಳ್ಳಿ ಬೆಳೆ ನಾಶವಾಗಿರುವುದರಿಂದ ಸಹಜವಾಗಿಯೇ ಬೆಳ್ಳುಳ್ಳಿ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.

Join Nadunudi News WhatsApp Group

Join Nadunudi News WhatsApp Group