Gas Price: ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಫೆಬ್ರವರಿ 1 ರಿಂದ ಹೊಸ ನಿಯಮ, ಕೇಂದ್ರದ ಸರ್ಕಾರದ ನಿರ್ಧಾರ.

ಫೆಬ್ರವರಿ 1 ರಿಂದ LPG ಗ್ಯಾಸ್ ಸಿಲಿಂಡರ್ ದರದಲ್ಲಿ ಬಾರಿ ಬದಲಾವಣೆ

Gas Cylinder Price Changes In February: ಕೇಂದ್ರ ಸರ್ಕಾರ 2024 ಬಜೆಟ್ ಘೋಷಣೆ ಮಾಡಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಈ ಬಾರಿ ಬಜೆಟ್ ನಲ್ಲಿ ಸಾಕಷ್ಟು ಘೋಷಣೆ ಆಗಲಿದೆ. ಇನ್ನು ದಿನನಿತ್ಯ ಬಳಕೆಯ LPG ಗ್ಯಾಸ್ ಸಿಲಿಂಡರ್ ಕುರಿತಾಗಿ ಈ ಬಾರಿಯ ಬಜೆಟ್ ನಲ್ಲಿ ಮಹತ್ವದ ಘೋಷಣೆ ಹೊರಬೀಳಲಿದೆ.

ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಬಾರಿಯ ಬಜೆಟ್ ಘೋಷಣೆ ಮಾಡಲಿದೆ. ಹೀಗಾಗಿ ಜನರಿಗೆ ನಿರೀಕ್ಷೆ ಹೆಚ್ಚಿದೆ ಎನ್ನಬಹುದು. ಸಾಧ್ಯ ಫೆಬ್ರವರಿ 1 ರಿಂದ LPG ಗ್ಯಾಸ್ ಸಿಲಿಂಡರ್ ದರದಲ್ಲಿ ಬಾರಿ ಬದಲಾವಣೆ ಆಗುವ ಸಾಧ್ಯತೆ ಇದೆ.

Gas Cylinder Price
Image Credit: Moneycontrol

ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಫೆಬ್ರವರಿ 1 ರಿಂದ ಹೊಸ ನಿಯಮ
ಫೆಬ್ರವರಿ 1 ರಂದು LPG ಸಿಲಿಂಡರ್ ದರಗಳು ಸಹ ಬಿಡುಗಡೆಯಾಗಬಹುದು. ಇದು ಸಾಮಾನ್ಯ ಜನರಿಗೆ ಹೆಚ್ಚಿನ ಪರಿಹಾರವನ್ನು ನೀಡುತ್ತದೆ. ಕಳೆದ ಹಲವು ದಿನಗಳಿಂದ ಗೃಹಬಳಕೆಯ LPG ಸಿಲಿಂಡರ್‌ ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಹೀಗಾಗಿ ಮೇಲೆ ಪೆಟ್ರೋಲಿಯಂ ಕಂಪನಿಗಳು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು.

ಸಿಲಿಂಡರ್ ಬೆಲೆ ಇಳಿಕೆಯಾಗಬಹುದು ಎನ್ನುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರ ಫೆಬ್ರವರಿ 1 ರಂದು ಮಂಡಿಸಲಿರುವ ಬಜೆಟ್ ನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯ ಬಗ್ಗೆ ಘೋಷಣೆ ಹೊರಡಿಸಲಿದೆ. ಫೆ. 1 ರಿಂದ ಗ್ಯಾಸ್ ಸಿಲಿಂದ ದರಗಳು ಬದಲಾಗಲಿವೆ. ಗ್ಯಾಸ್ ಸಿಲಿಂಡರ್ ವಿಷಯವಾಗಿ ಜನರಿಗೆ ಫೆ. 1 ರಂದು ಸಿಹಿಸುದ್ದಿ ಹೊರಬೀಳುವ ಸಾಧ್ಯತೆ ಹೆಚ್ಚಿದೆ.

Gas Cylinder Price Change
Image Credit: Live Mint

ಅಗ್ಗದ ಬೆಲೆಯಲ್ಲಿ ಸಿಗಲಿದೆ ಗ್ಯಾಸ್ ಸಿಲಿಂಡರ್
ಕಳೆದ ಮೂರು ವರ್ಷಗಳಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 17 ಬಾರಿ ಬದಲಾಗಿದ್ದರೆ, ವಾಣಿಜ್ಯ ಸಿಲಿಂಡರ್‌ ನ ಬೆಲೆ ಪ್ರತಿ ತಿಂಗಳು ಬದಲಾಗುತ್ತಿದೆ. ಇದರಿಂದಾಗಿ ಜನರು ಪರಿಹಾರವನ್ನು ಪಡೆಯುತ್ತಿದ್ದಾರೆ. ಇನ್ನು ಕೇಂದ್ರದ ಮೋದಿ ಸರ್ಕಾರ ಪ್ರದಾನ್ ಮಂತ್ರಿ ಉಜ್ವಲ ಯೋಜನೆಯನ್ನು ಆರಂಭಿಸಿದ್ದು, ಈ ಯೋಜನೆಯಡಿ ಜನರು ಗ್ಯಾಸ್ ಸಿಲಿಂಡರ್ ಗಳ ಮೇಲೆ ಸಬ್ಸಿಡಿಯನ್ನು ಪಡೆಯುತ್ತಿದ್ದಾರೆ. ದೇಶದಲ್ಲಿ ಸಾಕಷ್ಟು ಜನರು PM ಉಜ್ವಲ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಫೆಬ್ರವರಿಯಲ್ಲಿ ಕಡಿಮೆ ಮಾಡಿದರೆ, ಸಬ್ಸಿಡಿ ಪಡೆಯುವ ಮೂಲಕ ಇನ್ನಷ್ಟು ಕಡಿಮೆ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group