Gas Cylinder Price: ತಿಂಗಳ ಮೊದಲ ದಿನವೇ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆ, ಗ್ಯಾಸ್ ಬಳಸುವವರಿಗೆ ಗುಡ್ ನ್ಯೂಸ್

ಜೂನ್ ಮೊದಲ ದಿನ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ...?

Gas Cylinder Price Down In June 1st: ಸದ್ಯ ಮೇ ತಿಂಗಳು ಮುಗಿದು ಇದೀಗ ಜೂನ್ ತಿಂಗಳ ಮೊದಲ ದಿನ ಆರಂಭವಾಗಿದೆ. ಇನ್ನು ನಿಮಗೆ ತಿಳಿದ ಹಾಗೆ ತಿಂಗಳ ಮೊದಲ ದಿನದಿಂದ ಅನೇಕ ನಿಯಮಗಳು ಬದಲಾಗುತ್ತದೆ. ನಿಯಮಗಳ ಬದಲಾವಣೆಯ ಜೊತೆಗೆ ಕೆಲ ಅಗತ್ಯ ವಸ್ತುಗಳ ಬೆಲೆಯಲ್ಲಿ ಕೂಡ ತಿಂಗಳ ಆರಂಭದಲ್ಲಿ ಬದಲಾವಣೆ ಆಗುತ್ತದೆ.

ಸದ್ಯ ಜೂನ್ ತಿಂಗಳ ಮೊದಲ ದಿನ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ ಎನ್ನಬಹುದು. ಹೌದು, ಇದೀಗ ಜೂನ್ ಮೊದಲ ದಿನ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇದೀಗ ನಾವು ಜೂನ್ ಮೊದಲ ದಿನ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ…? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Gas Cylinder Price Down
Image Credit: DAN India

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 72 ರೂ. ಇಳಿಕೆ
ಜೂನ್ ಮೊದಲ ದಿನವೇ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಇಂದು ದೇಶಾದ್ಯಂತ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆ 72 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಗ್ಯಾಸ್ ಸಿಲಿಂಡರ್ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ನೀಡಲಾಗಿದೆ. ಮಾಹಿತಿಯ ಪ್ರಕಾರ, ದೇಶದ ನಾಲ್ಕು ಮಹಾನಗರಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಮುಂಬೈನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ ಗಳು 69.5 ರೂ.ಗಳಷ್ಟು ಅಗ್ಗವಾಗಿವೆ. ಇದಾದ ನಂತರ ಎರಡೂ ಮಹಾನಗರಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಕ್ರಮವಾಗಿ 1676 ಮತ್ತು 1629 ರೂ. ಗೆ ತಲುಪಿದೆ.

ಸತತ ಇಳಿಕೆಯ ಕಾರಣ ಮಾರುಕಟ್ಟೆಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಎಷ್ಟಿದೆ ಗೊತ್ತಾ…?
ಕೋಲ್ಕತ್ತಾದಲ್ಲಿ ಗರಿಷ್ಠ 72 ರೂ.ಗಳ ಕಡಿತವಿದೆ. ಇದರಿಂದಾಗಿ ಬೆಲೆಗಳು ರೂ.1787 ಕ್ಕೆ ಇಳಿದಿವೆ. ದಕ್ಷಿಣ ಭಾರತದ ಪ್ರಮುಖ ನಗರವಾದ ಚೆನ್ನೈನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಶೇ.70.5ರಷ್ಟು ಕುಸಿದು 1,840.50 ರೂ.ಗೆ ತಲುಪಿದೆ. ಇನ್ನು 2024 ರಲ್ಲಿ ಸತತ ಮೂರು ಬಾರಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ. ಈ ಮೂಲಕ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಗಣನೀಯ ಇಳಿಕೆ ದಾಖಲಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಗಳ ಬೆಲೆಯ ಸತತ ಇಳಿಕೆಯು ದೇಶದ ರಾಜಧಾನಿ ದೆಹಲಿಯಲ್ಲಿ 119 ರೂ.ಗಳಷ್ಟು ಕಡಿಮೆಯಾಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ 124 ರೂ. ಕುಸಿತ ಕಂಡಿದೆ.

Join Nadunudi News WhatsApp Group

Gas Cylinder Price Down In June 1st
Image Credit: The Statesman

Join Nadunudi News WhatsApp Group