Gas Price Fall: ಗ್ಯಾಸ್ ಬೆಲೆಯ ಏರಿಕೆಯ ಬೇಸರದಲ್ಲಿದ್ದ ಜನರಿಗೆ ಗುಡ್ ನ್ಯೂಸ್, ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 57 ರೂ. ಇಳಿಕೆ.

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಳಿಕೆ ಆಗಿದ್ದು ಇದು ಜನಸಾಮಾನ್ಯರ ಸಂತಸಕ್ಕೆ ಕಾರಣವಾಗಿದೆ

LGP Gas Cylinder Price Down In November: ದೇಶದಲ್ಲಿ ಈಗಾಗಲೇ ಜನರು ಹಣದುಬ್ಬರತೆಯ ಪರಿಸ್ಥಿಯನ್ನು ಎದುರಿಸುತ್ತಿದ್ದಾರೆ ಎನ್ನಬಹುದು. ಯಾವುದೇ ವಸ್ತುವನ್ನು ಖರೀದಿಸಬೇಕಿದ್ದರು ಸದ್ಯದ ಪರಿಸ್ಥಿತಿಯಲ್ಲಿ ಅಧಿಕ ಹಣವನ್ನು ನೀಡಬೇಕಾಗುತ್ತಿದೆ. ಇನ್ನು ಪ್ರತಿನಿತ್ಯ ತಿಂಗಳ ಆರಂಭದಲ್ಲಿ ಕೆಲ ವಸ್ತುಗಳ ಬೆಲೆ ಪರಿಷ್ಕರಣೆ ಆಗುತ್ತಾ ಜನರಿಗೆ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ. ಅದರಲ್ಲೂ ಮುಖ್ಯವಾಗಿ ಪ್ರತಿ ತಿಂಗಳು ಬದಲಾಗುವ Gas Cylinder ಬೆಲೆ ಜನರ ಆರ್ಥಿಕ ಪರಿಸ್ಥಿತಿಯ ಮೇಲೆ ಹೆಚ್ಛಿನ ಪರಿಣಾಮವನ್ನು ಬೀರುತ್ತದೆ.

gas cylinder price fall november
Image Credit: Original Source

ಗ್ಯಾಸ್ ಬೆಲೆಯ ಏರಿಕೆಯ ಬೇಸರದಲ್ಲಿದ್ದ ಜನರಿಗೆ ಗುಡ್ ನ್ಯೂಸ್
ಇನ್ನು October ತಿಂಗಳ ಆರಂಭದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 207 ರೂ. ಏರಿಕೆಯಾಗಿತ್ತು. ಇನ್ನು ತೈಲ ಕಂಪನಿಗಳು ಅಕ್ಟೊಬರ್ ತಿಂಗಳಿನಲ್ಲಿ ಗ್ಯಾಸ್ ಬೆಲೆಯಲ್ಲಿ ಏರಿಕೆ ಮಾಡಿರುವ ಕಾರಣ ನವೆಂಬರ್ ಗ್ಯಾಸ್ ಬೆಲೆಯಲ್ಲಿ ಇಳಿಕೆ ಆಗಬಹದು ಎನ್ನುವ ನಿರೀಕ್ಷೆಯಲ್ಲಿ ಜನಸಾಮಾನ್ಯರು ಕಾಯುತ್ತಿದ್ದರು.

ಆದರೆ ನವೆಂಬರ್ ತಿಂಗಳಿನಲ್ಲಿ ಕೂಡ ಗ್ಯಾಸ್ ಬೆಲೆಯಲ್ಲಿ 103 ರೂ. ಏರಿಕೆಯಾಗಿದೆ. ಎರಡು ತಿಂಗಳಿನಲ್ಲಿ ಗ್ಯಾಸ್ ಬೆಲೆಯಲ್ಲಿ ಬರೋಬ್ಬರಿ 310 ರೂ. ಏರಿಕೆಯಾಗಿದೆ. ಸದ್ಯ ಗ್ಯಾಸ್ ಬೆಲೆಯ ಏರಿಕೆಯ ಬೇಸರದಲ್ಲಿದ್ದ ಜನರಿಗೆ ಇದೀಗ ಗುಡ್ ನ್ಯೂಸ್ ಹೊರಬಿದ್ದಿದೆ. ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲು ಕೇಂದ್ರದಿಂದ ಆದೇಶ ಹೊರಡಿಸಲಾಗಿದೆ. ಗ್ಯಾಸ್ ಸಿಲಿಂಡರ್ ನಲ್ಲಿ ಇಷ್ಟು ಇಳಿಕೆಯಾಗಲಿದೆ.

gas cylinder latest price
Image Credit: Original Source

LPG Cylinder ನಲ್ಲಿ 57 ರೂ. ಇಳಿಕೆ
ದೀಪಾವಳಿ ಹಬ್ಬದ ಬಳಿಕ LPG Cylinder ಬೆಲೆ ಏರಿಕೆಯಾಗುವ ಬಗ್ಗೆ ಸುದ್ದಿ ವೈರಲ್ ಆಗಿತ್ತು. ಆದರೆ ಇದೀಗ ಜನಸಾಮಾನ್ಯರಿಗೆ ಗ್ಯಾಸ್ ಸಿಲಿಂಡರ್ ವಿಷಯವಾಗಿ ಬಿಗ್ ರಿಲೀಫ್ ಸಿಕ್ಕಿದೆ. ತೈಲ ಕಂಪನಿಗಳು ನವೆಂಬರ್ 16, 2023 ರಂದು ವಾಣಿಜ್ಯ ಸಿಲಿಂಡರ್‌ ಗಳ ಬೆಲೆಯನ್ನು ಕಡಿಮೆ ಮಾಡಿದೆ. 19kg ವಾಣಿಜ್ಯ LPG ಸಿಲಿಂಡರ್‌ ನ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

ತೈಲ ಮಾರುಕಟ್ಟೆ ಕಂಪನಿಗಳು 57.50 ರೂ. ಇಳಿಕೆ ಮಾಡುವ ಮೂಲಕ ಹೊಸ ದರ ಜಾರಿಗೆ ತಂದಿದೆ. ಇಂದಿಂದಲೇ LGP Gas Cylinder ಗಳ ಹೊಸ ದರ ಜಾರಿಯಾಗಲಿದೆ. ಹೊಸ ಗ್ಯಾಸ್ ದರ ಜಾರಿಯಾದ ಮೇಲೆ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1755.50 ರೂ., ಕೋಲ್ಕತ್ತಾದಲ್ಲಿ 1885.50 ರೂ., ಮುಂಬೈನಲ್ಲಿ 1728 ರೂ. ಮತ್ತು ಚೆನ್ನೈ ನಲ್ಲಿ 1942 ರೂ. ಆಗಿದೆ. ಇನ್ನು ವಾಣಿಜ್ಯ ಸಿಲಿಂಡರ್‌ ಗಳ ಬೆಲೆ ಮಾತ್ರ ಕಡಿಮೆಯಾಗಿದ್ದು, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Join Nadunudi News WhatsApp Group

Join Nadunudi News WhatsApp Group