March Gas Price: ತಿಂಗಳ ಮೊದಲ ದಿನವೇ ಗ್ಯಾಸ್ ಬೆಲೆಯಲ್ಲಿ ಏರಿಕೆ, ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಬೇಸರದ ಸುದ್ದಿ

ಜನಸಾಮಾನ್ಯರಿಗೆ ತಿಂಗಳ ಮೊದಲ ದಿನವೇ ಗ್ಯಾಸ್ ಬೆಲೆಯ ಏರಿಕೆಯ ಶಾಕ್

Gas Cylinder Price Hike In March 1st: ಪ್ರತಿ ತಿಂಗಳ ಆರಂಭದಲ್ಲಿ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸುತ್ತವೆ. ಹೀಗಾಗಿ ಜನಸಮಾನ್ಯರು ಹೊಸ ತಿಂಗಳ ಆರಂಭವಾಗುತ್ತಿದಂತೆ ಗ್ಯಾಸ್ ಬೆಲೆ ಇಳಿಕೆಯಾಗಿದೆಯೋ…? ಅಥವಾ ಏರಿಕೆಯಾಗಿದೆಯೋ…? ಎನ್ನುವ ನಿರೀಕ್ಷಯಲ್ಲಿ ಕಾಯುತ್ತಿರುತ್ತಾರೆ.

ಕಳದೆ ಕೆಲವು ತಿಂಗಳಿನಿಂದ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡುತ್ತಿದೆ. ಇದರಿಂದಾಗಿ ಜನಮಾನ್ಯರಿಗೆ ಮೇಲಿಂದ ಮೇಲೆ ಬೆಲೆ ಏರಿಕೆಯ ಬಿಸಿ ತಾಗುತ್ತಿದೆ ಎನ್ನಬಹುದು. ಇಂದಿನ ಮಾರ್ಚ್ ತಿಂಗಳು ಆರಂಭವಾಗಲಾಯಿದ್ದು. ತೈಲ ಕಂಪನಿಗಳು ಇಂದು ಗ್ಯಾಸ್ ಬೆಲೆಯನ್ನು ಪರಿಷ್ಕರಿಸಿವೆ. ಇದೀಗ ನಾವು ಇಂದು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವ ರೀತಿ ವ್ಯತ್ಯಾಸವಾಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Gas Cylinder Price Hike
Image Credit: Mumbaimirror

ತಿಂಗಳ ಮೊದಲ ದಿನವೇ ಗ್ಯಾಸ್ ಬೆಲೆಯ ಏರಿಕೆಯ ಶಾಕ್
ಸದ್ಯ ಗ್ಯಾಸ್ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ March ತಿಂಗಳು ಬೇಸರ ನೀಡಿದೆ. LPG ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಲು ತೈಲ ಕಂಪನಿಗಳು ನಿರ್ಧರಿಸಿದ್ದು, ಜನಸಾಮಾನ್ಯರಿಗೆ ಮತ್ತೊಮ್ಮೆ ಶಾಕ್ ನೀಡಿದೆ. ಹೌದು ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ ಆಗಿದ್ದು ಇದು ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯ ಮೇಲೆ ಇನ್ನಷ್ಟು ಪರಿಣಾಮ ಬೀರಲಿದೆ.

ಕಳೆದ ವರ್ಷದಲ್ಲಿ ಕೂಡ ಗ್ಯಾಸ್ ಸಿಲಿಂಡರ್ ನಲ್ಲಿ ತೈಲ ಕಂಪನಿಗಳು ಬೆಲೆಯಲ್ಲಿ ಏರಿಕೆ ಮಾಡಿದ್ದವು. ಕಳೆದ ಎರಡು ತಿಂಗಳು ಬೆಲೆ ಏರಿಕೆಯಾದ ಕಾರಣ ಈ ತಿಂಗಳಿನಲ್ಲಿ ಬೆಲೆ ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆ ಜನರಲ್ಲಿ ಹೆಚ್ಚಿತ್ತು. ಆದರೆ ಈ ಬಾರಿ ಕೂಡ ಜನರಿಗೆ ಗ್ಯಾಸ್ ಬೆಲೆಯ ವಿಷಯವಾಗಿ ಶಾಕಿಂಗ್ ಸುದ್ದಿ ಎದುರಾಗಿದೆ. ದೇಶದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಆಗಿದ್ದು ಜನರಿಗೆ ಇನ್ನಷ್ಟು ಆರ್ಥಿಕ ನಷ್ಟವಾಗಲಿದೆ.

Gas Cylinder Price Hike In March 1st
Image Credit: Free Press Journal

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 25.50 ರೂ. ಹೆಚ್ಚಳ
ಕಳೆದ ತಿಂಗಳು ಏರಿಕೆ ಕಂಡಿದ್ದ 19kg ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಇದೀಗ march ತಿಂಗಳ ಮೊದಲ ದಿನವೇ ಬರೋಬ್ಬರಿ 25 .೫೦ ರೂ. ಏರಿಕೆ ಕಂಡಿದೆ. ಮಾರ್ಚ್ 1 ರಂದು ತೈಲ ಕಂಪನಿಗಳು LPG ದರವನ್ನು ನವೀಕರಿಸಿದ್ದು, ಮಾರ್ಚ್ 1 ರಿಂದ ಹೊಸ LPG ದರ ಜಾರಿಗೆ ಬರಲಿದೆ.

Join Nadunudi News WhatsApp Group

ಇನ್ನು 14kg ದೇಶಿಯ LPG ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬೆಂಗಳೂರಿನಲ್ಲಿ ನಿನ್ನೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1851 .50 ರೂ. ಇದ್ದು, ಇಂದು 1877 ರೂ. ತಲುಪಿದೆ. ಇನ್ನು ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿ 1795 ರೂ., ಕೋಲ್ಕತ್ತಾ 1911 ರೂ., ಮುಂಬೈ 1749 ರೂ., ಚೆನ್ನೈ 1960 ರೂ. ತಲುಪಿದೆ. ಈ ತಿಂಗಳು ಕೂಡ ಗ್ಯಾಸ್ ಬೆಲೆ ಇಳಿಕೆ ಆಗದಿರುವುದು ಜನಸಾಮಾನ್ಯರಲ್ಲಿ ಬೇಸರ ಮೂಡಿಸಿದೆ.

Join Nadunudi News WhatsApp Group