December Gas Price: ಗ್ಯಾಸ್ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಶಾಕ್, ತಿಂಗಳ ಮೊದಲ ದಿನವೇ ಬೆಲೆ ಏರಿಕೆ.

December ತಿಂಗಳ ಮೊದಲ ದಿನವೇ LPG ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆ.

Gas Price Hike From December 1st: ಪ್ರತಿ ತಿಂಗಳು Gas Cylinder ಬೆಲೆ ಪರಿಷ್ಕರಣೆಯಾಗುವ ಬಗ್ಗೆ ಎಲ್ಲರಿಗು ತಿಳಿದೆ ಇದೆ. ಹೀಗಾಗಿ ಪ್ರತಿ ತಿಂಗಳು ಆರಂಭವಾಗುತ್ತಿದ್ದಂತೆ ಜನರು GAS ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿ ಕಾಯುತ್ತಾರೆ. ಹಣದುಬ್ಬರತೆಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜನರಿಗೆ ಗ್ಯಾಸ್ ಬೆಲೆಯ ಇಳಿಕೆ ಒಂದು ರೀತಿಯಲ್ಲಿ ಖುಷಿ ನೀಡುತ್ತದೆ ಎನ್ನಬಹುದು.

ಇನ್ನು ನವೆಂಬರ್ ತಿಂಗಳು ಮುಗಿದು ಇಂದಿನಿಂದ 2023 ರ ಕೊನೆಯ ತಿಂಗಳು ಆರಂಭವಾಗಿದೆ. ಇಂದು ದೇಶದ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಿದೆ. ಇದೀಗ ನಾವು ಇಂದಿನ ಗ್ಯಾಸ್ ಸಿಲಿಂಡರ್ ಬೆಲೆಯ ಬಗ್ಗೆ ಮಾಹಿತಿ ತಿಳಿಯೋಣ.

Gas Price Hike From December 1st
Image Credit: DNA India

ಗ್ಯಾಸ್ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಶಾಕ್
ಸದ್ಯ ಗ್ಯಾಸ್ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ December ತಿಂಗಳು ಬೇಸರ ನೀಡಿದೆ. LPG ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಲು ತೈಲ ಕಂಪನಿಗಳು ನಿರ್ಧರಿಸಿದ್ದು, ಜನಸಾಮಾನ್ಯರಿಗೆ ಮತ್ತೊಮ್ಮೆ ಶಾಕ್ ನೀಡಿದೆ. ಹೌದು ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ ಆಗಿದ್ದು ಇದು ಜನಸಾಮಾನ್ಯರ ಬೇಸರಕ್ಕೆ ಕಾರಣವಾಗಿದೆ ಎನ್ನಬಹುದು.

October ಹಾಗೂ November ತಿಂಗಳಿನಲ್ಲಿ ಕೂಡ ಗ್ಯಾಸ್ ಸಿಲಿಂಡರ್ ನಲ್ಲಿ ತೈಲ ಕಂಪನಿಗಳು ಬೆಲೆಯಲ್ಲಿ ಏರಿಕೆ ಮಾಡಿದ್ದವು. ಕಳೆದ ಎರಡು ತಿಂಗಳು ಬೆಲೆ ಏರಿಕೆಯಾದ ಕಾರಣ ಈ ತಿಂಗಳಿನಲ್ಲಿ ಬೆಲೆ ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆ ಜನರಲ್ಲಿ ಹೆಚ್ಚಿತ್ತು. ಆದರೆ ಈ ಬಾರಿ ಕೂಡ ಜನರಿಗೆ ಗ್ಯಾಸ್ ಬೆಲೆಯ ವಿಷಯವಾಗಿ ಶಾಕಿಂಗ್ ಸುದ್ದಿ ಎದುರಾಗಿದೆ. ದೇಶದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಆಗಿದ್ದು ಜನರಿಗೆ ಇನ್ನು ಹೆಚ್ಚಿನ ಆರ್ಥಿಕ ಹೊರೆ ಎದುರಾಗಲಿದೆ.

LPG Cylinder Price Latest Update
Image Credit: Business-Standard

December ತಿಂಗಳ ಮೊದಲ ದಿನವೇ ಗ್ಯಾಸ್ ಬೆಲೆಯಲ್ಲಿ ಭರ್ಜರಿ ಏರಿಕೆ
ಕಳೆದ ತಿಂಗಳು ಏರಿಕೆ ಕಂಡಿದ್ದ 19kg ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಇದೀಗ December ತಿಂಗಳ ಮೊದಲ ದಿನವೇ ಬರೋಬ್ಬರಿ 21 ರೂ. ಏರಿಕೆ ಕಂಡಿದೆ. December 1 ರಿಂದ ಹೊಸ LPG ದರ ಜಾರಿಗೆ ಬರಲಿದೆ. ಇನ್ನು ದೆಹಲಿ 1796 ರೂ., ಕೋಲ್ಕತ್ತಾ 1908 ರೂ., ಮುಂಬೈ 1749 ರೂ., ಚೆನ್ನೈ 1968 ರೂ. ತಲುಪಿದೆ. ಕಳೆದ ಮೂರು ತಿಂಗಳಿನಿಂದ LPG Gas Cylinder ದರ ಏರಿಕೆ ಕಾಣುತ್ತಲೇ ಇದೆ.

Join Nadunudi News WhatsApp Group

Join Nadunudi News WhatsApp Group