Gold Price: ದೇಶದಲ್ಲಿ ಐತಿಹಾಸಿಕ ಏರಿಕೆ ಕಂಡ ಚಿನ್ನದ ಬೆಲೆ, ಬಡವರ ಕೈಯಿಂದ ಚಿನ್ನ ಇನ್ನಷ್ಟು ದೂರ.
200 ರೂ ಏರಿಕೆಯಾಗುವ ಮೂಲಕ ಮತ್ತಷ್ಟು ದುಬಾರಿಯಾದ ಬಂಗಾರ.
Gold Price Hike: ದೇಶದ ಜನತೆ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ಚಿನ್ನದ ಬೆಲೆಯ (Gold Price) ಇಳಿಕೆಯ ಬಗ್ಗೆ ಸಾಕಷ್ಟು ಜನರು ಕಾಯುತ್ತಿದ್ದಾರೆ. ಆದರೆ ಚಿನ್ನ ಖರೀದಿಗೆ ಇನ್ನು ಕೂಡ ಉತ್ತಮ ಸಮಯ ಬಂದಿಲ್ಲ ಎಂದರೆ ತಪ್ಪಾಗಲಾರದು. ಕಳೆದ ವರ್ಷ ಕೆಲ ಹಬ್ಬದ ವಿಶೇಷಕ್ಕೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿತ್ತು. ಆದರೆ ಈ ಬಾರಿ ಯಾವುದೇ ಹಬ್ಬದ ವಿಶೇಷಕ್ಕೂ ಚಿನ್ನದ ಬೆಲೆ ಇಳಿಕೆಯಾಗಿಲ್ಲ.
ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ
ಸದ್ಯ ಗಣೇಶ ಚರ್ತುರ್ಥಿಯ ಹಬ್ಬದ ದಿನದಂದು ಜನರು ಚಿನ್ನದ ಇಳಿಕೆಯ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನೇನು ಗಣೇಶನ ಹಬ್ಬಕ್ಕೆ ಕೇವಲ ಎರಡು ದಿನಗಳು ಬಾಕಿ ಇವೆ. ಆಭರಣದ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಇದೀಗ ಮತ್ತೆ ಬೇಸರದ ಸುದ್ದಿ ಎದುರಾಗಿದೆ. ಮೊನ್ನೆ ಚಿನ್ನದ ಬೆಲೆಯಲ್ಲಿ 340 ರೂ. ಇಳಿಕೆ ಕಂಡಿದೆ. ಈ ವೇಳೆ ಜನರು ಮಾತ್ತಷ್ಟು ಇಳಿಕೆಯನ್ನು ನಿರೀಕ್ಷಿಸಿದ್ದರು. ಆದರೆ ನಿನ್ನೆ ಸ್ಥಗಿತಗೊಂಡ ಚಿನ್ನದ ಬೆಲೆ ಇಂದು ಬರೋಬ್ಬರಿ 200 ರೂ. ಏರಿಕೆಯಾಗಿದೆ. ಈ ಮೂಲಕ ಮತ್ತೆ ಬಂಗಾರ ದುಬಾರಿಯಾಗಿದೆ.
ಇಂದು 54700 ರೂ. ತಲುಪಿದ 22 ಕ್ಯಾರೆಟ್ ಚಿನ್ನದ ಬೆಲೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂ ಏರಿಕೆಯಾಗಿ 5,470 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,450 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ ಏರಿಕೆಯಾಗಿ 43,760 ರೂ. ತಲುಪಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 43,600 ರೂ. ಗೆ ಲಭ್ಯವಿತ್ತು.
ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ ಏರಿಕೆಯಾಗಿ 54,700 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 54,500 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,000 ರೂ ಏರಿಕೆಯಾಗಿ 5,47,000 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,45,000 ರೂ. ಗೆ ಲಭ್ಯವಿತ್ತು.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 22 ರೂ ಏರಿಕೆಯಾಗಿ 5967 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5945 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 126 ರೂ ಏರಿಕೆಯಾಗಿ 47736 ರೂ. ತಲುಪಿದೆ.
ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 47,560 ರೂ. ಗೆ ಲಭ್ಯವಿತ್ತು. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 220 ರೂ ಏರಿಕೆಯಾಗಿ 59,670 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 59,450 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,200 ರೂ ಏರಿಕೆಯಾಗಿ 5,96,700 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,94,500 ರೂ. ಗೆ ಲಭ್ಯವಿತ್ತು.