Gold: ಸತತ ಇಳಿಕೆಯ ನಡುವೆ ಇಂದು 150 ರೂ ಏರಿಕೆಯಾದ ಚಿನ್ನದ ಬೆಲೆ, ಇಂದಿನ ಚಿನ್ನದ ಬೆಲೆ ಹೀಗಿದೆ.

ಚಿನ್ನ ಖರೀದಿಸುವವರಿಗೆ ಬೇಸರದ ಸುದ್ದಿ, ಬಂಗಾರದ ಬೆಲೆಯಲ್ಲಿ ಮತ್ತೆ ಏರಿಕೆ.

Gold Price Hike Today: ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Price) ಯಲ್ಲಿ ಇತ್ತೀಚಿಗೆ ಇಳಿಕೆ ಕಂಡುಬಂದಿದೆ. ಚಿನ್ನದ ಬೆಲೆಯ ಇಳಿಕೆಯಿಂದ ಜನಸಾಮಾನ್ಯರಿಗೆ ಚಿನ್ನ ಖರೀದಿಸಲು ಉತ್ತಮವಾಗಿತ್ತು.

ಜೂನ್ 19 ರಿಂದ ಜೂನ್ 23 ರವರೆಗೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು ಜೂನ್ 24 ರಂದು 10 ಗ್ರಾಂ ಚಿನ್ನದಲ್ಲಿ 150 ರೂಪಾಯಿ ಏರಿಕೆ ಆಗಿತ್ತು. ಆದರೆ ನಿನ್ನೆ ಅದೇ ಬೆಲೆಯಲ್ಲಿ ಚಿನ್ನ ಸ್ಥಿರತೆ ಕಂಡುಕೊಂಡಿದೆ. ಇದೀಗ ಇಂದು ಜೂನ್ 26 ರಂದು ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಆಗಿದೆ.

10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆ
ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಏರಿಕೆ ಆಗಿದೆ. ಜನಸಾಮಾನ್ಯರು ಮತ್ತೆ ಚಿನ್ನದ ಬೆಲೆಯ ಏರಿಕೆಯಿಂದ ಕಂಗಾಲಾಗಿದ್ದಾರೆ. ಇಂದಿನ 22 ಹಾಗು 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಎನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.

Information about the price of 22 and 24 carat gold
Image Credit: Manubhai

22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Rate) 
ಇಂದು ಒಂದು ಗ್ರಾಂ ಚಿನ್ನದ ಬೆಲೆ 5,435 ರೂ. ಆಗಿದೆ. ಇಂದು ಒಂದು ಗ್ರಾಂ ಚಿನ್ನದಲ್ಲಿ 10 ರೂ. ಏರಿಕೆಯಾಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯಾಗಿದೆ.

ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 54,250 ಇದ್ದು, ಇಂದು 54,350 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 43,400 ಇದ್ದು, ಇಂದು 43,480 ರೂ. ಆಗಿದೆ. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂ. ಏರಿಕೆಯಾಗಿದೆ. ಇಂದಿನ ನೂರು ಗ್ರಾಂ ಚಿನ್ನದ ಬೆಲೆ 5,43,500 ರೂ. ಆಗಿದೆ.

Join Nadunudi News WhatsApp Group

Information about the price of 22 and 24 carat gold
Image Credit: Ibtimes

24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate) 
ಇಂದು ಒಂದು ಗ್ರಾಂ ಚಿನ್ನದ ಬೆಲೆ 5928 ರೂ. ಆಗಿದೆ. ಇಂದು ಒಂದು ಗ್ರಾಂ ಚಿನ್ನದಲ್ಲಿ 10 ರೂ. ಏರಿಕೆಯಾಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯಾಗಿದೆ.

ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 59180 ಇದ್ದು, ಇಂದು 59280 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 47,344 ಇದ್ದು, ಇಂದು 47,424 ರೂ. ಆಗಿದೆ. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂ. ಏರಿಕೆಯಾಗಿದೆ. ಇಂದಿನ ನೂರು ಗ್ರಾಂ ಚಿನ್ನದ ಬೆಲೆ 5,92,800 ರೂ. ಆಗಿದೆ.

Join Nadunudi News WhatsApp Group