Gold Shopping: ದೀಪಾವಳಿ ಹಬ್ಬಕ್ಕೆ ಭಾರತದಲ್ಲಿ ಒಟ್ಟು ಎಷ್ಟು ಕೆಜಿ ಚಿನ್ನ ಮಾರಾಟವಾಗಿದೆ ಗೊತ್ತಾ…? ಇದು ಭಾರತದ ತಾಕತ್ತು.

ಭಾರತದಲ್ಲಿ ದೀಪಾವಳಿ ಹಬ್ಬಕ್ಕೆ ದಾಖಲೆಯ ಚಿನ್ನ ಮಾರಾಟ.

Diwali Festival Gold Shopping In India: ಭಾರತದ ಜನಪ್ರಿಯ ಹಬ್ಬಗಳಲ್ಲಿ ದೀಪಾವಳಿ ಹಬ್ಬ (Diwali Festival) ಕೂಡ ಒಂದಾಗಿದೆ. ದೇಶದಾದ್ಯಂತ ಈ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈಗಾಗಲೇ ದೀಪಾವಳಿ ಹಬ್ಬ ಎಲ್ಲೆಡೆ ಆಚರಿಸುತಿದ್ದಾರೆ. ಈ ಹಬ್ಬದ ದಿನದಂದು ಜನರು ಚಿನ್ನ, ಬೆಳ್ಳಿ, ಪಾತ್ರೆಗಳು, ಹಾಗೆ ಇನ್ನಿತರ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಏಕೆಂದರೆ ಈ ದಿನವನ್ನು ಭಾರತದಲ್ಲಿ ಶಾಪಿಂಗ್ ಮಾಡಲು ಉತ್ತಮವಾದ ದಿನವೆಂದು ಪರಿಗಣಿಸುತ್ತಾರೆ. ಚಿನ್ನ (Gold)ಎಂದರೆ ಭಾರತೀಯರಿಗಿ ಎಲ್ಲಿಲ್ಲದ ಪ್ರೀತಿ.

Gold Shopping
Image Credit: Gulfnews

ಚಿನ್ನದ ದರ
ಕಳೆದ 10 ದಿನಗಳ ಹಿಂದೆ 10 ಗ್ರಾಂ ಬಂಗಾರದ ಬೆಲೆ 63 ಸಾವಿರ ಇದ್ದಿತ್ತು. ದಿನ ಕಳೆದಂತೆ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಂಡು ಕೊಂಡಿದೆ. ಅಂದರೆ ಅಕ್ಟೋಬರ್ 28 ರಿಂದ 24 ಕ್ಯಾರೆಟ್​ ನ 10 ಗ್ರಾಂ ಬಂಗಾರದ ಬೆಲೆ 800 ರಿಂದ 15,00 ರೂಪಾಯಿವರೆಗೆ ಕುಸಿಯುತ್ತ ಬಂದು ಈಗ 61,200 ರೂಪಾಯಿಗೆ ಬಂದು ನಿಂತಿದೆ. ಈ ಕಾರಣಕ್ಕಾಗಿಯೇ ಬಂಗಾರದ ಖರೀದಿ ಅಧಿಕವಾಗಿದೆ. ಇದಲ್ಲದೆ ಆನ್ಲೈನ್ (Online) ಮೂಲಕ ಕೂಡ ಹೆಚ್ಚು ಚಿನ್ನ ಖರೀದಿಯಾಗಿದೆ.

ಭಾರತದಲ್ಲಿ ದೀಪಾವಳಿ ಹಬ್ಬಕ್ಕೆ ದಾಖಲೆಯ ಚಿನ್ನ ಮಾರಾಟ
ದಿನದಿಂದ ದಿನಕ್ಕೆ ಚಿನ್ನ, ಬೆಳ್ಳಿ ದರ ಗಗನಕ್ಕೆ ಏರುತ್ತಿದೆ. ಬೆಲೆ ಎಷ್ಟೇ ಏರಿಕೆಯಾದರೂ ಆಭರಣ ಪ್ರಿಯರ ಆಸೆ ಮಾತ್ರ ಕಮ್ಮಿ ಆಗಿಲ್ಲ ಎನ್ನಬಹುದು. ದೀಪಾವಳಿ ಹಬ್ಬದ ಪ್ರಯುಕ್ತ ದೇಶಾದ್ಯಂತ ಅನೇಕರು ಚಿನ್ನ, ಬೆಳ್ಳಿ ಖರೀದಿ ಮಾಡಿದ್ದೂ ಹಿಂದೆಂದಿಗಿಂತಲೂ ಚಿನ್ನ ದಾಖಲೆಯ ಮಾರಾಟ ಕಂಡುಕೊಂಡಿದೆ ಎಂದು ಹೇಳಬಹುದು.

Gold Shopping In India
Image Credit: Ibtimes

ಈ ಬಗ್ಗೆ ಮಾಹಿತಿ ನೀಡಿರುವ All India Gem And Jewellery Domestic Council ನಿರ್ದೇಶಕ ದಿನೇಶ್ ಜೈನ್ ದೀಪಾವಳಿ ಹಬ್ಬದ ಹಿನ್ನೆಲೆ ಇಡೀ ದೇಶಾದ್ಯಂತ ಸುಮಾರು 41 ಟನ್​ ಚಿನ್ನ ಮತ್ತು 400 ಟನ್​ ಗಳಷ್ಟು ಬೆಳ್ಳಿ ಮಾರಾಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಕಳೆದ ವರ್ಷ ದೀಪಾವಳಿಯಂದು ತೆರಿಗೆಗಳನ್ನು ಹೊರತುಪಡಿಸಿ, ಪ್ರತಿ 10 ಗ್ರಾಂ ಚಿನ್ನದ ಬೆಲೆ 50,139 ಆಗಿತ್ತು. ಆಗ 22 ಟನ್ ಚಿನ್ನ ಖರೀದಿಯಾಗಿತ್ತು. ಆದರೆ ಈ ಬಾರಿ 30,000 ಕೋಟಿ ರೂಪಾಯಿಯಷ್ಟು ವಹಿವಾಟು ನೆಡೆದಿದೆ ಎಂದು ದಿನೇಶ್ ಜೈನ್ ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group