Senior Citizens: ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ಸಿಗಲಿದೆ 20,500 ರೂಪಾಯಿ, ಯೋಜನೆಯಲ್ಲಿ ಬದಲಾವಣೆ.

ಹಿರಿಯ ನಾಗರಿಕರ ಹೂಡಿಕೆಯ ಮಿತಿಯನ್ನ ಹೆಚ್ಚಳ ಮಾಡಿದ ಕಾರಣ ಅವರು ವೃದ್ದಾಪ್ಯದಲ್ಲಿ 20500 ರೂಪಾಯಿ ತನಕ ಪಿಂಚಣಿ ಪಡೆಯಬಹುದು.

Pension For Senior Citizens: ಕೇಂದ್ರ ಸರ್ಕಾರದಿಂದ (Central Govt) ಹಿರಿಯ ನಾಗರಿಕರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಹಿರಿಯ ನಾಗರಿಕರು ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವನ್ನು ದ್ವಿಗುಣ ಗೊಳಿಸಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಅವರು ಕೇಂದ್ರ ಬಜೆಟ್ 2023 ರ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದರು. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊತ್ತವನ್ನು ದ್ವಿಗುಣಗೊಳಿಸಿ ಕೇಂದ್ರ ಸರ್ಕಾರ ಇತ್ತೀಚಿಗೆ ಸುತ್ತೋಲೆ ಹೊರಡಿಸಿದೆ.

Due to the increase in pension limit for senior citizens, eligible citizens can get pension upto Rs 20500 at the time of old age.
Image Credit: economictimes.indiatimes

ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ
ಪ್ರಸ್ತುತ ಹಿರಿಯ ನಾಗರಿಕರಿಗೆ ಉಳಿತಾಯ ಯೋಜನೆಯಲ್ಲಿ ಕೇವಲ 15 ಲಕ್ಷ ರೂಪಾಯಿ ಇದ್ದಿತ್ತು. ಈ ಮಿತಿಯನ್ನು ದ್ವಿಗುಣಗೊಳಿಸುವ ಮೂಲಕ ರೂಪಾಯಿ 30 ಲಕ್ಷದ ವರೆಗೂ ಹೂಡಿಕೆ ಮಾಡಬಹುದು. ಹೆಚ್ಚಿಸಿದ ಮಿತಿ ಜಾರಿಗೆ ಬಂದಿದೆ. ಇನ್ನು ಮುಂದೆ ಈ ಯೋಜನೆಯಲ್ಲಿ ಗರಿಷ್ಠ ರೂಪಾಯಿ 30 ಲಕ್ಷ ಹೂಡಿಕೆ ಮಾಡಬಹುದು.

ಹಿರಿಯ ನಾಗರಿಕರ ಖಾತೆಗೆ ಬರಲಿದೆ ಪ್ರತಿ ತಿಂಗಳು 20,500 ರೂಪಾಯಿ
ಕೇಂದ್ರ ಸರ್ಕಾರವು 2004 ರಲ್ಲಿ ಹಿರಿಯ ನಾಗರಿಕರಿಗೆ ಅವರು ಹೂಡಿಕೆ ಮಾಡಿದ ಹಣದಿಂದ ನಿರ್ದಿಷ್ಟ ಮಾಸಿಕ ಆದಾಯವನ್ನು ಒದಗಿಸಲು ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ಪ್ರಾರಂಭಿಸಿತು. ಕೇಂದ್ರ ಸರ್ಕಾರ ಇತ್ತೀಚಿಗೆ ಕೈಗೊಂಡಿರುವ ನಿರ್ಧಾರದಿಂದ ವೃದ್ಧರಿಗೆ ಹೆಚ್ಚಿನ ಅನುಕೂಲವಾಗಿದೆ.

The investment limit of senior citizens will be increased to 30 lakhs so that senior citizens will get more pension money.
Image Credit: thenewsminute

ನಿವೃತ್ತಿಯ ಸಮಯದಲ್ಲಿ ನೀವು ಪಡೆಯುವ ಹಣವನ್ನು ಪ್ರತಿ ತಿಂಗಳು ಹೂಡಿಕೆ ಮಾಡುತ್ತೀರಿ. ನಿಮಗೆ ಇದರಿಂದ ಸ್ವಲ್ಪ ಪಿಂಚಣಿ ಪಡೆಯುವ ಅವಕಾಶ ಸಿಗುತ್ತದೆ. ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ವರದಾನ ನೀಡಿದೆ. ಪ್ರತಿ ತಿಂಗಳು ಅವರ ಖಾತೆಗೆ 20,500 ರೂ.ವರೆಗೆ ಪಡೆಯುವ ಅವಕಾಶ ಇದೆ.

Join Nadunudi News WhatsApp Group

ಹಿರಿಯ ನಾಗರಿಕರು ಹಣವನ್ನ ಹೆಚ್ಚು ಹೂಡಿಕೆ ಮಾಡಿದರೆ ಅವರಿಗೆ ವೃದ್ದಾಪ್ಯದ ಸಮಯದಲ್ಲಿ ಅತ್ತಿ ಹೆಚ್ಚಿನ ಪಿಂಚಿಣಿ ಬರುತ್ತದೆ. ಹೆಚ್ಚಿನ ಹೂಡಿಕೆ ಮಾಹಿತಿಗಾಗಿ ನೀವು ಹೂಡಿಕೆ ಮಾಡಿದ ಬ್ಯಾಂಕ್ ಅಥವಾ ಅಂಚೆ ಕಚೇರಿಯನ್ನ ಸಂಪರ್ಕ ಮಾಡುವುದು ಉತ್ತಮ.

The senior citizen investment limit has been increased from Rs 15 lakh to Rs 30 lakh.
Image Credit: newsroompost

ಹೆಚ್ಚಿನ ಹಣವನ್ನ ಹೂಡಿಕೆ ಮಾಡುವುದರ ಮೂಲಕ ವೃದ್ದಾಪ್ಯದ ಸಮಯದಲ್ಲಿ ಸುಮಾರು 20,500 ರೂಪಾಯಿ  ತನಕ ಪಿಂಚಣಿ ಹಣವನ್ನ ಪಡೆದುಕೊಳ್ಳಬಹುದು. ಅದೇ ರೀತಿಯಲ್ಲಿ ಹಿರಿಯ ನಾಗರಿಕರ ಹೂಡಿಕೆ ಹಣಕ್ಕೆ ಬಡ್ಡಿ ಮೊತ್ತವನ್ನ ಕೂಡ ಏರಿಕೆ ಮಾಡಲಾಗಿದೆ. ಸದ್ಯ ಹೊಸ ಹಣಕಾಸಿನ ವರ್ಷದಲ್ಲಿ ಹಲವು ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.

Join Nadunudi News WhatsApp Group