Loan For Business: ಸ್ವಂತ ಉದ್ಯೋಗ ಮಾಡುವವರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂ, ಇಂದೇ ಅರ್ಜಿ ಹಾಕಿ

ಸ್ವಂತ ಉದ್ಯೋಗ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂ

Karnataka Government Business Loan Scheme: ರಾಜ್ಯದಲ್ಲಿ ನಿರುದ್ಯೋಗ ಹೋಗಲಾಡಿಸುವುದು ಸರ್ಕಾರದ ದೊಡ್ಡ ಹೊಣೆ ಆಗಿದೆ. ನಿರುದ್ಯೋಗ ಹೋಗಲಾಡಿಸುವುದಕ್ಕಾಗಿ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಪ್ರತಿಯೊಬ್ಬರು ಉದ್ಯೋಗಿಗಳಾಗಿರಬೇಕು, ಆರ್ಥಿಕವಾಗಿ ಸ್ವಾವಲಂಭಿ ಆಗಿರಬೇಕು ಅನ್ನುವುದು ಸರ್ಕಾರದ ಗುರಿ ಆಗಿದೆ. ಸರ್ಕಾರ ಸ್ವ ಉದ್ಯೋಗ ಹೊಂದಲು ಹೆಚ್ಚಿನ ಪ್ರೋತ್ಸಹ ನೀಡುತ್ತಿದ್ದು, ಸ್ವ ಉದ್ಯೋಗ ವಿಚಾರವಾಗಿ ಧನ ಸಹಾಯವನ್ನು ಮಾಡಲು ಇಂದಿನ ಕಾಂಗ್ರೆಸ್ ಸರ್ಕಾರ ಹೊಸ ಯೋಜನೆಯನ್ನು ಕೈಗೊಂಡಿದೆ. ಸ್ವ ಉದ್ಯೋಗ ಮಾಡುವವರಿಗೆ ಸರ್ಕಾರದ ಯೋಜನೆ ಬಗ್ಗೆ ಮಾಹಿತಿ ಹೀಗಿದೆ.

Karnataka Government Business Loan Scheme
Image Credit: NDTV

ಸ್ವಉದ್ಯೋಗ ಮಾಡುವವರಿಗೆ ಸಹಾಯಧನ ಹಾಗು ಸಾಲ ಸೌಲಭ್ಯ ನೀಡಲಾಗುತ್ತಿದೆ

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವರ್ಗದ ಜನರ ಏಳಿಗೆಗಾಗಿ ಸರಕಾರ ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ವತಿಯಿಂದ ಸಾಂದೀಪಿನಿ ಶಿಷ್ಯ ವೇತನ ಹಾಗು ಸ್ವ ಉದ್ಯೋಗ ಮಾಡುವವರಿಗೆ ಬ್ಯಾಂಕ್ ನಿಂದ ಐದುಲಕ್ಷ ರೂಪಾಯಿ ಸಹಾಯಧನ ನೀಡಲಿದೆ ಎಂದು ಸಚಿವ ಕ್ರಷ್ಣ ಬೈರೇ ಗೌಡ ಅವರು ಮಾಹಿತಿ ನೀಡಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು ಈ ಯೋಜನೆಯಡಿ ಶೇಕಡಾ 20 ರಷ್ಟು ಸಹಾಯಧನ ನೀಡಲಾಗುವುದು ಹಾಗು ಅದನ್ನು ವ್ಯಕ್ತಿಯ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ಮೂಲಕ ಬ್ರಾಹ್ಮಣ ವರ್ಗದ ಅರ್ಹರು ಈ ಯೋಜನೆಗೆ ಅರ್ಜಿ ಹಾಕಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದಾಗಿದೆ. ಈ ಯೋಜನೆಯಡಿ, ಹಣ್ಣಿನ ಅಂಗಡಿ, ಹೂವಿನ ಅಂಗಡಿ, ಮೊಬೈಲ್ ಅಂಗಡಿ, ಹೈನುಗಾರಿಕೆ, ಗುಡಿಕೈಗಾರಿಕೆ ಹಾಗು ಹೊಲಿಗೆ, ಆಟಿಕೆ ತಯಾರಿಕೆ ವ್ಯಾಪಾರ ಮಾಡಬಹುದಾಗಿದೆ.

Business Loan scheme 2024
Image Credit: Original Source

ಸಾಂದೀಪಿನಿ ಶಿಷ್ಯ ವೇತನ ಬಗ್ಗೆ ಮಾಹಿತಿ

Join Nadunudi News WhatsApp Group

ಈ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವರ್ಗದ SSLC ಹಾಗು PUC ಓದುತ್ತಿರುವ ವಿದ್ಯಾರ್ಥಿಗಳು 15,000 ರೂಪಾಯಿ ಶಿಷ್ಯ ವೇತನವನ್ನು ಪಡೆಯಬಹುದಾಗಿದೆ. ಉನ್ನತ ಶಿಕ್ಷಣಕ್ಕೆ CET ಮೂಲಕ PAS ಆದವರಿಗೆ ಒಂದು ಲಕ್ಷದ ವರೆಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಇದು ಬ್ರಾಹ್ಮಣ ವರ್ಗದ ವಿದ್ಯಾರ್ಥಿಗಳಿಗೆ ಬಹಳ ಸಹಕಾರಿ ಆಗಲಿದ್ದು, ಜನವರಿ 31 ರ ಒಳಗೆ ಈ ಯೋಜನೆಗೆ ಅರ್ಜಿ ಹಾಕಬಹುದಾಗಿದೆ.

Join Nadunudi News WhatsApp Group