Own Business: ಸ್ವಂತ ಬಿಸಿನೆಸ್ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂ ಸಾಲ, ಇಂತವರು ಅರ್ಜಿ ಸಲ್ಲಿಸಿ

ಸ್ವಂತ ಬಿಸಿನೆಸ್ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ ಲೋನ್

Subsidy For Own Business: ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಪರಿಚಯಿಸುತ್ತ ಬಂದಿದೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ಘೋಷಿಸಿರುವ ಪಂಚ ಗ್ಯಾರಂಟಿ ಯೋಜನೆಯ ಜೊತೆಗೆ ಸಾಕಷ್ಟು ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಗೊಂಡಿವೆ. ರಾಜ್ಯದ ಜನತೆಗೆ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ಯೋಜನೆಯು ತಲೆ ಎತ್ತಿಕೊಂಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Subsidy Loan For Own Business
Image Credit: Okcredit

ಯುವ ನಿಧಿ ಯೋಜನೆಯ ಬೆನ್ನಲ್ಲೇ ಮತ್ತೊಂದು ಯೋಜನೆ ಜಾರಿ
ಇನ್ನು ರಾಜ್ಯದಲ್ಲಿ ಕಳೆದ ತಿಂಗಳಿನಲ್ಲಿ ಯುವ ನಿಧಿ ಯೋಜನೆಯು ಜಾರಿಯಾಗಿದ್ದು, ರಾಜ್ಯದ ನಿರುದ್ಯೋಗ ಯುವಕ ಯುವತಿಯರಿಗೆ ಮಾಸಿಕ ಭತ್ಯೆಯನ್ನು ನೀಡುತ್ತಿವೆ. ಈಗಾಗಲೇ ಈ ಯೋಜನೆಯಡಿ ಒಂದು ತಿಂಗಳಿನ ನಿರುದ್ಯೋಗ ಭತ್ಯೆಯನ್ನು ಅರ್ಹರು ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಯುವ ನಿಧಿ ಯೋಜನೆಯ ಜೊತೆಗೆ ಇದೀಗ ರಾಜ್ಯ ಸರ್ಕಾರ ನಿರುದ್ಯೋಗಿಗಳಿಗೆ ಇನ್ನೊಂದು ಸೌಲಭ್ಯವನ್ನು ಪರಿಚಯಿಸಲು ಮುಂದಾಗಿದೆ. ಈ ಯೋಜನೆಯ ಲಾಭ ಕೆಲ ವರ್ಗದ ನಿರುದ್ಯೋಗಿಗಳಿಗೆ ಮಾತ್ರ ಲಭ್ಯವಾಗಲಿದೆ.

ರಾಜ್ಯದ ST -ST ವರ್ಗದ ಪದವೀಧರರಿಗೆ ಬಿಗ್ ನ್ಯೂಸ್
ಇದೀಗ ರಾಜ್ಯ ಸರ್ಕಾರ SC -ST ವರ್ಗದ ಪದವಿದರಿಗೆ ಗುಡ್ ನ್ಯೂಸ್ ನೀಡಿದೆ. ಈ ವರ್ಗದ ಹಣರು ಸ್ವಂತ ಉದ್ಯೋಗ ಕಾಯ್ದುಕೊಳ್ಳಲು ಸರ್ಕಾರವು ಸಹಾಯಧನ ನಿಡಲುಮುಂದಾಗಿದೆ. ಪರಿಶಿಷ್ಟ ಜಾತಿ ಪಂಗಡದ ಸ್ನಾತಕೋತ್ತರ ಪದವೀಧರರಿಗೆ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾದ್ಯಮದಲ್ಲಿ ಉದ್ಯಮವನ್ನು ಸ್ಥಾಪಿಸಲು ಸಹಾಯಧನ ನೀಡುವ ಕುರಿತು ಮಹತ್ವದ ಆದೇಶವನ್ನು ಹೊರಡಿಸಿದೆ.

Government Subsidy Loan For Business
Image Credit: Paytm

ಇಂತವರಿಗೆ ಸ್ವಂತ ಉದ್ಯೋಗ ಮಾಡಲು ಸಿಗಲಿದೆ 5 ಲಕ್ಷ ರೂ
ಪರಿಶಿಷ್ಟ ಜಾತಿ ಪಂಗಡದ ಸ್ನಾತಕೋತ್ತರ ಪದವೀಧರ ಯುವಕ ಯುವತಿಯರಿಗೆ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾದ್ಯಮದಲ್ಲಿ ಉದ್ಯಮವನ್ನು ಸ್ಥಾಪಿಸಲು ಘಟಕ ವೆಚ್ಚದ ಶೇ. 70 ರಷ್ಟು ಅಥವಾ ಗರಿಷ್ಟ 5 ಲಕ್ಷ ಸಹಾಯಧನ ನೀಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಕೆಲವು ಷರತ್ತುಗಳನು ವಿಧಿಸಿದೆ. ಈ ಷರತ್ತುಗಳ ಆಧಾರದ ಮೇಲೆ ಅರ್ಹ ಫಲಾನುಭವಿಗಳು ಸಹಾಯಧನವನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group