8th Pay: 8 ನೇ ವೇತನದ ಕುರಿತಂತೆ ಬಂತು ಇನ್ನೊಂದು ಬಿಗ್ ಅಪ್ಡೇಟ್, ಹಣಕಾಸು ಸಚಿವಾಲಯ ಹೇಳುವುದೇನು…?

8 ನೇ ವೇತನ ಹೆಚ್ಚಳದ ಕುರಿತು ಕೇಂದ್ರ ಸರ್ಕಾರ ಮಹತ್ವದ ಹೇಳಿಕೆ ನೀಡಿದೆ.

8th Pay Commission: ಇತ್ತೀಚಿಗೆ ಸರ್ಕಾರಿ ನೌಕರರ ವೇತನದ ವಿಷಯಗಳು ಸಾಕಷ್ಟು ಹರಿದಾಡುತ್ತಿವೆ. ಸರ್ಕಾರಿ ನೌಕರರಿಗೆ ವೇತನದ ವಿಷಯವಾಗಿ ಸಿಹಿ ಸುದ್ದಿಗಳು ಸಿಗುತ್ತಲೇ ಇದೆ. ಸದ್ಯ ಕೇಂದ್ರ ಸರ್ಕಾರ ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮಾಸಿಕ ತಿಂಗಳ ವೇತನದಲ್ಲಿ ಕೂಡ ಹೆಚ್ಚಳ ಮಾಡಿದೆ.

ಪ್ರಸ್ತುತ ಸರ್ಕಾರಿ ನೌಕರರು 7 ನೇ ವೇತನ ಆಯೋಗ (7th Pay Commission) ಅಡಿಯಲ್ಲಿ ವೇತನ ಪಡೆಯುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. 8 ನೇ ವೇತನ ಆಯೋಗದ (8th Pay Commission) ಕುರಿತು ಮಾಹಿತಿ ಹೊರಬಿದ್ದಿದೆ. ಸರ್ಕಾರಿ ನೌಕರರಿಗೆ ಶೀಘ್ರವೇ 8ನೇ ವೇತನ ಆಯೋಗ ಜಾರಿಗೊಳಿಸುವಂತೆ ಸರ್ಕಾರ ಚಿಂತನೆ ನಡೆಸಿದೆ.

8th pay commission
Image Credit: Hyderabaddccb

8 ನೇ ವೇತನದ ಕುರಿತಂತೆ ಬಂತು ಇನ್ನೊಂದು ಬಿಗ್ ಅಪ್ಡೇಟ್
2024 ರ ಅಂತ್ಯದ ವೇಳೆಯಲ್ಲಿ 8ನೇ ವೇತನ ಆಯೋಗ ರಚನೆಯಾಗಲಿದೆ. 2016 ರಲ್ಲಿ 7 ನೇ ವೇತನ ಆಯೋಗ ರಚನೆಯಾಗಿತ್ತು. ಪ್ರತಿ 10 ವರ್ಷಗಳ ನಂತರ ಹೊಸ ವೇತನ ಆಯೋಗ ರಚನೆಯಾಗಲಿದೆ. 2025 ರ ಅಂತ್ಯದಲ್ಲಿ ಅಥವಾ 2026 ರ ಆರಂಭದಲ್ಲಿ 8 ನೇ ವೇತನ ಆಯೋಗ ಜಾರಿಗೆ ಬರಲಿದೆ ಎನ್ನುವ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ವರದಿಯಾಗಿತ್ತು.

ಈ ಬಾರಿಯ 8 ನೇ ವೇತನ ಹೆಚ್ಚಳವು ನೌಕರರ ವೇತನವನ್ನು ಇನ್ನಷ್ಟು ಹೆಚ್ಚಿಸಲಿದೆ. ಫಿಟ್ ಮೆಂಟ್ ಅಂಶವು 3.68 ಪಟ್ಟು ಹೆಚ್ಚಳ ಸಂಭವನೀಯ ಸಾಧ್ಯತೆ ಇದೆ ಹಾಗೂ ವೇತನ ಹೆಚ್ಚಳ 44.44 %, ಕನಿಷ್ಠ ವೇತನ ರೂ. 26,000 ಸಾಧ್ಯತೆ ಇದೆ ಎನ್ನುವ ಬಗ್ಗೆ ಈ ಹಿಂದೆ ವರದಿಯಾಗಿತ್ತು.

Govt Employees 8th Pay Commission
Image Credit: Informal News

ವೇತನ ಹೆಚ್ಚಳದ ಕುರಿತು ಹಣಕಾಸು ಸಚಿವಾಲಯ ಹೇಳುವುದೇನು…?
ಕೇಂದ್ರ ಸರ್ಕಾರೀ ನೌಕರರು 8 ನೇ ವೇತನಕ್ಕಾಗಿ ಕಾಯುತ್ತಿದ್ದಾರೆ. ಸದ್ಯ 8 ನೇ ವೇತನ ಹೆಚ್ಚಳದ ಕುರಿತು ಕೇಂದ್ರ ಸರ್ಕಾರ ಮಹತ್ವದ ಹೇಳಿಕೆ ನೀಡಿದೆ. ಮುಂದಿನ ವರ್ಷ ನಡೆಯುವ ರಾಷ್ಟ್ರೀಯ ಚುನಾವಣೆಗೆ ಮುನ್ನ ಸುಮಾರು 54 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಎಂಟನೇ ವೇತನ ಆಯೋಗವನ್ನು ರೂಪಿಸುವ ಯಾವುದೇ ಯೋಜನೆ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಹಣಕಾಸು ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group