Post Office Scheme: 95 ರೂ ಹೂಡಿಕೆ ಮಾಡಿರೆ ಸಿಗಲಿದೆ 14 ಲಕ್ಷ ರೂ, 19 ವರ್ಷದೊಳಗಿನ ಮಕ್ಕಳಿಗಾಗಿ ಹೊಸ ಸ್ಕೀಮ್

ಈ ಯೋಜನೆಯಲ್ಲಿ ಕೇವಲ 95 ರೂ. ಹೂಡಿಕೆ ಮಾಡಿ ಪಡೆಯಿರಿ 14 ಲಕ್ಷ ಲಾಭ

Gram Sumangal Dak Jeevan Bima Yojana: ಭಾರತೀಯ ಅಂಚೆ ಇಲಾಖೆಯು ಈಗಾಗಲೇ ಹಲವು ಹೂಡಿಕೆಯ ಯೋಜನೆಯನ್ನು ನೀಡಿದೆ. ಸಣ್ಣ ಉಳಿತಾಯ ಯೋಜನೆಗಳಿಂದ ಹಿಡಿದು ದೀರ್ಘಾವಧಿಯ ಹೂಡಿಕೆಯ ಯೋಜನೆಗಳು ಅಂಚೆ ಇಲಾಖೆಯಲ್ಲಿ ಸಾಕಷ್ಟಿವೆ.

ಇನ್ನು 19 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೂ ಕೂಡ ಅಂಚೆ ಇಲಾಖೆ ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಬಗ್ಗೆ ನಿಮಗೆ ಮಾಹಿತಿ ತಿಳಿದಿದೆಯೇ…? ಈ ಯೋಜನೆಯಲ್ಲಿ ನೀವು ಹೂಡಿಕೆಯನ್ನು ಆರಂಭಿಸಿದರೆ ಲಕ್ಷ ಲಾಭವನ್ನು ಪಡೆಯಬಹುದು. ಇದರಲ್ಲಿ ಯಾವುದೇ ಸಂದೇಹವಿಲ್ಲ. ಯೋಜನೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Gram Sumangal Dak Jeevan Bima Yojana
Image Credit: hmtvlive

19 ವರ್ಷದೊಳಗಿನ ಮಕ್ಕಳಿಗಾಗಿ ಅಂಚೆ ಇಲಾಖೆಯ ಬೆಸ್ಟ್ ಸ್ಕೀಮ್
ಸದ್ಯ ಅಂಚೆ ಇಲಾಖೆಯು 19 ವರ್ಷ ಒಳಗಿನ ಮಕ್ಕಳಿಗಾಗಿ Gram Sumangal Dak Jeevan Bima Yojana ಆರಂಭಿಸಿದೆ. ಇನ್ನು 19 ವರ್ಷಕ್ಕಿಂತ ಕಡಿಮೆ ವಯ್ಯಸ್ಸಿನ ಮಕ್ಕಳ ಹೆಸರಿನಲ್ಲಿ ಈ ಯೋಜನೆಯಡಿ ಹೂಡಿಕೆ ಮಾಡಬಹುದು. ಇದು ಮನಿ ಬ್ಯಾಕ್ ಯೋಜನೆಯಾಗಿದ್ದು ಅದು ಆವರ್ತಕ ಆದಾಯದ ಜೊತೆಗೆ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ. 15 ವರ್ಷಗಳು ಮತ್ತು 20 ವರ್ಷಗಳು ನಿಯಮಗಳಿಗೆ ಲಭ್ಯವಿರುತ್ತವೆ.

ಪಾಲಿಸಿದಾರನು ಪಾಲಿಸಿಯ ಮೆಚ್ಯೂರಿಟಿ ತನಕ ಬದುಕಿದ್ದರೆ, ಅವಧಿಗೆ ಅನುಗುಣವಾಗಿ ಆದಾಯವನ್ನು ಪಡೆಯಬಹುದು. ಇನ್ನು 15 ವರ್ಷಗಳ ಪಾಲಿಸಿಗಾಗಿ ಹೂಡಿಕೆದಾರರು 6, 9 ಮತ್ತು 12 ವರ್ಷಗಳ ನಂತರ ವಿಮಾ ಮೊತ್ತದ 20% ವರೆಗೆ ಪಡೆಯುತ್ತಾರೆ. ಆದರೆ ನೀವು ಮುಕ್ತಾಯದ ಸಮಯದಲ್ಲಿ ಬೋನಸ್ ಜೊತೆಗೆ ಉಳಿದ 40% ಅನ್ನು ಪಡೆಯುತ್ತೀರಿ. 20 ವರ್ಷಗಳವರೆಗೆ ಪಾಲಿಸಿಯಲ್ಲಿ ಹೂಡಿಕೆ ಮಾಡುವವರು 16 ವರ್ಷಗಳ ನಂತರ 8,12% ಮತ್ತು 20% ಮತ್ತು ಮುಕ್ತಾಯದ ಸಮಯದಲ್ಲಿ ಉಳಿದ 40% ಬೋನಸ್‌ ಗಳನ್ನು ಪಡೆಯಬಹುದು.

Gram Sumangal Dak Jeevan Bima Yojana Investment
Image Credit: Kannada News

ಕೇವಲ 95 ರೂ. ಹೂಡಿಕೆಯಲ್ಲಿ ಪಡೆಯಿರಿ 14 ಲಕ್ಷ
ಇನ್ನು Gram Sumangal Dak Jeevan Bima ಯೋಜನೆಯಡಿ ಪ್ರತಿ ದಿನ 95 ರೂ. ಗಳನ್ನೂ ಹೂಡಿಕೆ ಮಾಡಿದರೆ ಮೆಚ್ಯುರಿಟಿ ಅವಧಿಯ ನಂತರ ಸುಮಾರು 14 ಲಕ್ಷ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ. ಅಂದರೆ ನೀವು ಈ ಯೋಜನೆಯಡಿ ದಿನಕ್ಕೆ 95 ರೂ. ಗಳಂತೆ ತಿಂಗಳಿಗೆ 2853 ರೂ. ಗಳನ್ನೂ ಠೇವಣಿ ಮಾಡಬೇಕಾಗುತ್ತದೆ. ವಾರ್ಷಿಕವಾಗಿ ಈ ಯೋಜನೆಯಡಿ 34,236 ರೂ. ಹೂಡಿಕೆ ಅಗತ್ಯವಿದೆ. ನೀವು ಈ ರೀತಿಯಾಗಿ ಹೂಡಿಕೆ ಮಾಡುತ್ತ ಬಂದರೆ ಮೆಚ್ಯುರಿಟಿ ಅವಧಿಯ ನಂತರ ನೀವು ಒಟ್ಟಾರೆ 14 ಲಕ್ಷ ಲಾಭವನ್ನು ಪಡೆಯಬಹುದು.

Join Nadunudi News WhatsApp Group

Gram Sumangal Dak Jeevan Bima Yojana Update
Image Credit: Lokmat

Join Nadunudi News WhatsApp Group