Grama One: ಗ್ರಾಮ ಒನ್ ಕಚೇರಿ ಆರಂಭಿಸಲು ಅರ್ಜಿ ಸಲ್ಲಿಸುವುದು ಹೇಗೆ..? ಬೇಕಾಗಿರುವ ದಾಖಲೆಗಳು ಏನು…?

ಗ್ರಾಮ ಒನ್ ಕೇಂದ್ರಗಳಿಗೆ ಫ್ರ್ಯಾಂಚೈಸ್ ಗಳಿಂದ ಅರ್ಜಿ ಆಹ್ವಾನ

Grama One Franchise Registration: ಸಾರ್ವಜನಿಕರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆಯನ್ನು ಪರಿಚಯಿಸುತ್ತ ಇರುತ್ತದೆ. ಇನ್ನು ನಿರುದ್ಯೋಗಿಗಳಿಗೆ ಸ್ವಂತ ಉದ್ಯೋಗವನ್ನು ಮಾಡಲು ಕೂಡ ವಿವಿಧ ಯೋಜನೆಯನ್ನು ಪರಿಚಯಿಸುತ್ತಿರುತ್ತದೆ. ಸ್ವಂತ ಉದ್ಯೋಗದ ಯೋಜನೆ ಹೊಂದಿದವರಿಗೆ ಸಹಾಯಮಾಡಲು ಸಾಕಷ್ಟು ಯೋಜನೆಗಳನ್ನು ಪರಿಚಯಿಸುವ ಮೂಲಕ ಸರ್ಕಾರ ಸಹಾಯಧನವನ್ನು ನೀಡುತ್ತಿದೆ.

ಸದ್ಯ ಗ್ರಾಮೀಣ ಪ್ರದೇಶದಲ್ಲಿ ಈ ಕಚೇರಿಯನ್ನು ತೆರೆಯಲು ಸರ್ಕಾರ ಅವಕಾಶವನ್ನು ನೀಡಿದೆ. ಈ ಮೂಲಕ ನಿರುದ್ಯೋಗಿಗಳೇ ಉದ್ಯೋಗವನ್ನು ಕಂಡುಕೊಳ್ಳಲು ಅವಕಾಶವನ್ನು ನೀಡಿದೆ. ಇದೀಗ ನಾವು ಈ ಲೇಖನದಲ್ಲಿ Grama One ಕಚೇರಿ ಆರಂಭಿಸಲು ಅರ್ಜಿ ಸಲ್ಲಿಸುವುದು ಹೇಗೆ..? ಬೇಕಾಗಿರುವ ದಾಖಲೆಗಳು ಏನು…? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Grama One Registration
Image Credit: Digital India Gov

ಗ್ರಾಮ ಒನ್ ಕೇಂದ್ರಗಳಿಗೆ ಫ್ರ್ಯಾಂಚೈಸ್ ಗಳಿಂದ ಅರ್ಜಿ ಆಹ್ವಾನ
ನೀವು ಸ್ವಂತ ಉದ್ಯೋಗದ ಕನಸು ಕಾಣುತ್ತಿದ್ದರೆ ಈ Grama One ಕೇಂದ್ರವನ್ನು ತೆರೆಯುವ ಮೂಲಕ ನಿಮ್ಮ ಸ್ವಂತ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಬಹುದು. Grama One ಕೇಂದ್ರ ತೆರೆಯಲು ಅರ್ಜಿ ಆಹ್ವಾನ ಮಾಡಲಾಗಿದೆ. ಮುಖ್ಯ ದಾಖಲೆಗಳನ್ನು ನೀಡುವ ಮೂಲಕ ಆಸಕ್ತರು ಅರ್ಜಿ ಸಲ್ಲಿಸಬಹುದು. Grama One ಕೇಂದ್ರಗಳಿಗೆ ಆಸಕ್ತ ಫ್ರ್ಯಾಂಚೈಸ್ ಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತ ಫ್ರಾಂಚೈಸಿಗಳು https://kal-mys.gramaone.karnataka.gov.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಗ್ರಾಮ ಒನ್ ತೆರೆಯಲು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು…?
•ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

•ಸಾರ್ವಜನಿಕ ಸಂಪರ್ಕವಿರುವ ಜಾಗದಲ್ಲಿ ಗ್ರಾಮ ಒನ್ ಅನ್ನು ಸ್ಥಾಪಿಸಬೇಕು.

Join Nadunudi News WhatsApp Group

•ಪೊಲೀಸ್ ವೆರಿಫಿಕೇಷನ್ ಪ್ರಮಾಣಪತ್ರ ಹೊಂದಿರಬೇಕು.

•ಇನ್ನು ಒಂದರಿಂದ ಎರಡು ಲಕ್ಷ ಬಂಡವಾಳ ಹೂಡಿಕೆಯ ಅಗತ್ಯವಿದೆ.

Grama One Application Start
Image Credit: Digital India

ಗ್ರಾಮ ಒನ್ ಕಚೇರಿಯಲ್ಲಿ ಈ ವಸ್ತುಗಳು ಇರುವುದು ಕಡ್ಡಾಯ
•ಡೆಸ್ಕ್ ಟಾಪ್ ಅಥವಾ ಲಾಪ್ ಟಾಪ್
•ಪ್ರಿಂಟರ್
•ಸ್ಕ್ಯಾನರ್
•ಬಯೋಮೆಟ್ರಿಕ್ ಸ್ಕ್ಯಾನರ್
•ವೆಬ್ ಕ್ಯಾಮರಾ
•ವೈಫೈ ರಿಸೀವರ್
•ಇಂಟರ್ನೆಟ್ ಕನೆಕ್ಷನ್

ಪ್ರಾಂಚೈಸಿ ತೆರೆಯಲು ಅಗತ್ಯವಿರುವ ದಾಖಲೆಗಳು
*ಆಧಾರ್ ಕಾರ್ಡ್
*ಪಾನ್ ಕಾರ್ಡ್
*ಬ್ಯಾಂಕ್ ಅಕೌಂಟ್ ಡಿಟೈಲ್ಸ್
*ಗ್ರಾಮ ಒನ್ ಸ್ಥಾಪಿಸಲು ಇರಬೇಕಾದ ಸ್ಥಳದ ದೃಡೀಕರಣ ಪ್ರಮಾಣಪತ್ರ
*ಅಗತ್ಯ ಯಂತ್ರೋಪಕರಣಗಳು ಇದೆ ಎನ್ನುವುದನ್ನು ತೋರಿಸುವ ದೃಡೀಕರಣ ಪ್ರಮಾಣಪತ್ರ.

Join Nadunudi News WhatsApp Group