Gruha Lakshmi: ಈ ದಿನದಂದು ಗೃಹಲಕ್ಷ್ಮಿ ಯೋಜನೆಯ 6 ನೇ ಕಂತಿನ ಹಣ ಜಮಾ, ಮಹಿಳೆಯರಿಗೆ ಈ ರೀತಿ ಚೆಕ್ ಮಾಡಿ.

ಗೃಹ ಲಕ್ಷ್ಮಿ ಯೋಜನೆಯ 6 ನೇ ಕಂತಿನ ಹಣ ಬಿಡುಗಡೆಯ ದಿನಾಂಕದ ಬಗ್ಗೆ ಬಿಗ್ ಅಪ್ಡೇಟ್

Gruha Lakshmi 6th Installment: Gruha Lakshmiಆಗಸ್ಟ್ ನಲ್ಲಿ ಅನುಷ್ಠಾನಗೊಂಡ ಗೃಹ ಲಕ್ಷ್ಮಿ ಯೋಜನೆಯು (Gruha Lakshmi Scheme) ಈಗಾಗಲೇ ಐದು ಕಂತುಗಳು ಯಶಸ್ವಿಯಾಗಿ ಅರ್ಹ ಫಲಾನುಭವಿಗಳ ಖಾತೆಗೆ ತಲುಪಿದೆ. ಆದರೆ ಯೋಜನೆಗೆ ಅರ್ಜಿ ಸಲ್ಲಿಸಿದ ಸಂಪೂರ್ಣ ಅರ್ಹರಿಗೆ ತಾಂತ್ರಿಕ ದೋಷದ ಕಾರಣ ಹಣ ತಲುಪುತ್ತಿಲ್ಲ.

ಎಲ್ಲ ಅರ್ಹ ಫಲಾನುಭವಿಗಳಿಗೆ ಹಣ ಜಮಾ ಮಾಡಲು ಸರ್ಕಾರ ವಿವಿಧ ಕ್ರಮ ಕೈಗೊಳ್ಳುತ್ತಿದೆ. ಇನ್ನು ಈ ತಿಂಗಳ ಅಂತ್ಯದೊಳಗೆ ಗೃಹ ಯೋಜನೆಯನ್ನು ಸಂಪೂರ್ಣ 100% ಯಶಸ್ವಿಯಾಗಿಸಲು ಸರ್ಕಾರ ನಿರ್ಧರಿಸಿದೆ. ಸದ್ಯ ಗೃಹ ಲಕ್ಷ್ಮಿ ಯೋಜನೆಯ 6 ನೇ ಕಂತಿನ ಹಣ ಬಿಡುಗಡೆಯ ದಿನಾಂಕದ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ.

Gruha Lakshmi 6th Installment
Image Credit: Kannada News

ಈ ದಿನದಂದು ಗೃಹಲಕ್ಷ್ಮಿ ಯೋಜನೆಯ 6 ನೇ ಕಂತಿನ ಹಣ ಜಮಾ
ಗೃಹ ಲಕ್ಷ್ಮಿ ಯೋಜನೆಯಡಿ ಈಗಾಗಲೇ ಅರ್ಹ ಫಲಾನುಭವಿಗಳು ಐದು ಕಂತುಗಳ ಹಣ ಒಟ್ಟಾಗಿ 10000 ರೂಪಾಯಿ ಮೊತ್ತ ಜಮಾ ಆಗಿದೆ. ಸದ್ಯ ಇನ್ನೇನು ಕೆಲವೇ ದಿನಗಳಲ್ಲಿ ಗೃಹ ಲಕ್ಷ್ಮಿ 6 ನೇ ಕಂತಿನ ಹಣ ಕೂಡ ಬಿಡುಗಡೆಯಾಗಲಿದೆ. ಗೃಹ ಲಕ್ಷ್ಮಿ ಯೋಜನೆಯ ನೋಂದಣಿ ಮಾಡಿಕೊಂಡಿರುವ ಮಹಿಳೆಯರು ತಮ್ಮ ಖಾತೆಗೆ E-KYC ಮಾಡಿಸುವುದು ಕಡ್ಡಾಯವಾಗಿದೆ.

ಗೃಹ ಲಕ್ಷ್ಮಿ 6 ನೇ ಕಂತಿನ ಹಣ ಪಡೆಯಬೇಕಿದ್ದರೆ ರೇಷನ್ ಕಾರ್ಡ್ ನಲ್ಲಿ ಇರುವ ಪ್ರತಿಯೊಬ್ಬ ಸದಸ್ಯರು ಕೂಡ E-KYC ಮಾಡಿಸಬೇಕಿದೆ. E -KYC ಪೂರ್ಣಗೊಂಡಿದ್ದ ಅರ್ಹ ಫಲಾನುಭವಿಗಳ ಖಾತೆಗೆ ಫೆಬ್ರವರಿ ಮೊದಲ ವಾರದಲ್ಲಿ 6 ನೇ ಕಂತಿನ ಹಣ ಬಿಡುಗಡೆಯಾಗಲಿದೆ. ಮಹಿಳೆಯರು ಮೊದಲ ವಾರದಲ್ಲಿ 2000 ರೂ. ಹಣವನ್ನು ಪಡೆದುಕೊಳ್ಳಬಹುದು. ನಿಮ್ಮ ಖಾತೆಗೆ ಹಣ ಬಿಡುಗಡೆಯಾಗಿದೆ ಎನ್ನುವುದನ್ನು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಬಹುದು.

Gruha Lakshmi Scheme Money
Image Credit: Original Source

ಮಹಿಳೆಯರಿಗೆ ಈ ರೀತಿ ಚೆಕ್ ಮಾಡಿ
•ಮೊದಲನೇದಾಗಿ ನಿಮ್ಮ ಸ್ಮಾರ್ಟ್ಫೋನ್ ನಲ್ಲಿ DBT Karnataka App ಅನ್ನು ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು,

Join Nadunudi News WhatsApp Group

•ನಂತರ ಡೌನ್ಲೋಡ್ ಆದ ಅಪ್ಲಿಕೇಶನ್ ಅನ್ನು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ.

•ಇದಾದ ನಂತರ ಮಹಿಳೆಯ ಆಧಾರ್ ನಂಬರ್ ಅನ್ನು ನಮೂದಿಸಬೇಕು,

•ಆಗ ನೋಂದಾವಣೆ ಆಗಿರುವ ಮೊಬೈಲ್ ನಂಬರ್ ಗೆ ಒಂದು OTP ಬರುತ್ತದೆ, ಅದನ್ನು ನಮೂದಿಸಬೇಕು.

•ನಂತರ ಮೊಬೈಲ್ ಅಪ್ಲಿಕೇಶನ್ ಗೆ ಲಾಗಿನ್ ಆಗಲು ನೀವು ನಾಲ್ಕು ಪಿನ್ ಬಳಸಬೇಕಾಗುತ್ತದೆ. ನಂತರ ಇದನ್ನು ಮತ್ತೆ ವೆರಿಫಿಕೇಷನ್ ಮಾಡಿಕೊಳ್ಳಬೇಕಾಗುತ್ತದೆ.

•ಕೊನೆಗೆ ಸಬ್ಮಿಟ್ ಆಯ್ಕೆ ಕೊಟ್ಟರೆ ಪೇಮೆಂಟ್ ಪುಟ ತೆರೆದುಕೊಳ್ಳುತ್ತದೆ. ಆಗ ನಿಮ್ಮ ಖಾತೆಗೆ ಯಾವ ಕಂತಿನ ಹಣವೆಲ್ಲ ಬಂದಿದೆ ಎನ್ನುವ ಸಂಪೂರ್ಣ ಮಾಹಿತಿ ತಿಳಿಯುತ್ತದೆ.

Join Nadunudi News WhatsApp Group