Guarantee Update: ಗೃಹ ಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಸಿಗದ ಮಹಿಳೆಯರಿಗಾಗಿ ಹೊಸ ಬದಲಾವಣೆ, ಸಂತಸದಲ್ಲಿ ಮಹಿಳೆಯರು.

ಗೃಹ ಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಸಿಗದ ಮಹಿಳೆಯರಿಗಾಗಿ ಹೊಸ ಯೋಜನೆ ಜಾರಿಗೆ ತಂದ ಸಿದ್ದರಾಮಯ್ಯ.

Siddaramaiah About Gruha Lakshmi And Anna Bhagya Scheme: ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ನ ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಬಾರಿ ಚರ್ಚೆ ಉಂಟಾಗುತ್ತಿದೆ. ಈಗಾಗಲೇ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಯೋಜನೆಗಳು ಅನುಷ್ಠಾನಗೊಂಡಿದ್ದರೂ ಅದರಲ್ಲಿ ಕೇವಲ ಶಕ್ತಿ ಯೋಜನೆ ಹಾಗೂ ಗೃಹ ಜ್ಯೋತಿ ಯೋಜನೆಯ ಲಾಭವನ್ನು ಅರ್ಹರು ಸಂಪೂರ್ಣವಾಗಿ ಪಡೆಯುತ್ತಿದ್ದಾರೆ ಎನ್ನಬಹುದು.

ಇನ್ನು Gruha Lakshmi ಯೋಜನೆ ಹಾಗೂ Anna Bhagya ಯೋಜನೆಗಳು ಅನುಷ್ಠಾನಗೊಂಡಿದ್ದರೂ ಕೂಡ ಸಂಪೂರ್ಣವಾಗಿ ಅರ್ಹರಿಗೆ ಯೋಜನಗಳ ಲಾಭ ದೊರೆಯುತ್ತಿಲ್ಲ. ಸದ್ಯ ಗೃಹ ಲಕ್ಷ್ಮಿ, ಅನ್ನ ಭಾಗ್ಯ ಯೋಜನೆಯ ಲಾಭ ದೊರಕದ ಫಲಾನುಭವಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸಿಹಿಸುದ್ದಿ ನೀಡಿದ್ದಾರೆ. ಸಮಸ್ಯೆ ಬಗೆಹರಿಸುವ ಬಗ್ಗೆ ಸಿಎಂ ಸೂಚನೆ ನೀಡಿದ್ದಾರೆ.

gruha lakshmi and anna bhagya yojana latest update
Image Credit: Original Source

ಗೃಹ ಲಕ್ಷ್ಮಿ, ಅನ್ನ ಭಾಗ್ಯ ಯೋಜನೆಯ ಲಾಭ ದೊರಕದ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್
ರಾಜ್ಯ ಸರ್ಕಾರ ಪ್ರತಿ ಬರಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಗೃಹ ಲ್ಕಷ್ಮಿ ಯೋಜನೆಗಳ ಬಗ್ಗೆ ಹೆಚ್ಚು ಚರ್ಚೆ ನಡೆಸುತ್ತಲೇ ಇರುತ್ತದೆ. ಈ ಎರಡು ಯೋಜನೆಗಳ ಸಮಸ್ಯೆ ಇನ್ನು ಕೂಡ ಬಗೆಹರಿಯದೆ ಇರುವುದು ಸರ್ಕಾರಕ್ಕೆ ಒಂದು ರೀತಿಯ ದೊಡ್ಡ ತಲೆನೋವಾಗಿದೆ ಎನ್ನಬಹುದು. ಇನ್ನು ಈ ಎರಡು ಯೋಜನೆಗಳ ಫಲಾನುಭವಿಗಳ ಯೋಜನೆಯ ಹಣ ಯಾವಾಗ ಜಮಾ ಆಗುತ್ತದೆ ಎಂದು ಕಾಯುತ್ತ ಇದ್ದಾರೆ.

ಸದ್ಯ ರಾಜ್ಯ ಸರ್ಕಾರ ಫಲಾನುಭವಿಗಳ ಕಾಯುವಿಕೆಗೆ ಬ್ರೇಕ್ ಹಾಕಲು ಮಹತ್ವದ ನಿರ್ಧಾರ ಕೈಗೊಂಡಿದೆ. ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸಿ ಗೃಹ ಲಕ್ಷ್ಮಿ, ಅನ್ನ ಭಾಗ್ಯ ಯೋಜನೆಯ ಲಾಭ ದೊರಕದ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ನೀಡಿದೆ. ಯೋಜನೆಯ ಲಾಭ ದೊರಕದ ಅರ್ಹ ಫಲಾನುಭವಿಗಳಿಗೆ ಹಣ ತಲುಪಲು ಇರುವ ತಾಂತ್ರಿಕ ಅಡಚಣೆಯನ್ನು ಶೀಘ್ರವೇ ನಿವಾರಿಸಿ ಆದಷ್ಟು ಬೇಗ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.

anna bhagya yojana update 2023
Image Credit: Original Source

ಅದಾಲತ್ ನಡೆಸಲು ಸರ್ಕಾರದ ಸಿದ್ಧತೆ
ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳನ್ನು ಬ್ಯಾಂಕಿಗೆ ಕರೆದೊಯ್ದು ಸಮಸ್ಯೆ ಬಗೆಹರಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಿ ಎಲ್ಲ ಅರ್ಹ ಫಲಾನುಭವಿಗಳಿಗೆ ನೆರವು ಕ್ರಮ ಕೈಗೊಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ. ಡಿಸೆಂಬರ್ ಒಳಗೆ ಅರ್ಹ ಫಲಾನುಭವಿಗಳಿಗೆ ನಗದು ವರ್ಗಾವಣೆ ಮಾಡುವಂತೆ ಸಿದ್ದರಾಮಯ್ಯ ಘೋಷಿಸಿದ್ದಾರೆ.

Join Nadunudi News WhatsApp Group

ರಾಜ್ಯ ಸಾರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆಯರನ್ನು ಗೃಹ ಭೇಟೆಗೆ ಸೂಚಿಸಿದ್ದಾರೆ. ಅದಾಲತ್ ನಡೆಸಲು ಸರಕಾರ ಸಿದ್ಧವಿದೆ. ಹಣ ಸಿಗದವರ ಬಳಿ ತೆರಳಿ ಸಮಸ್ಯೆ ಬಗೆಹರಿಸಲು ಸರ್ಕಾರ ನಿರ್ಧರಿಸಿದ್ದು, ಇನ್ನೂ ಹಣ ಸಿಗದವರು ಅದಾಲತ್ ನಲ್ಲಿ ದೂರು ದಾಖಲಿಸಬಹುದು. ತಾಂತ್ರಿಕ ದೋಷ ನಿವಾರಣೆಗೆ ದಾಖಲೆ ಸಂಗ್ರಹಣೆಗೆ ಮನೆ ಬಾಗಿಲಿಗೆ ತೆರಳು ಇಲಾಖೆ ನಿರ್ಧರಿಸಿದೆ.

Join Nadunudi News WhatsApp Group