Gruha Lakshmi Application: ಗೃಹ ಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಹಾಕುವುದು ಹೇಗೆ…? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಮತ್ತೊಮ್ಮೆ ಅವಕಾಶ...!

Gruha Lakshmi Application By Using WhatsApp: ಸದ್ಯ ರಾಜ್ಯದಲ್ಲಿ ಅರ್ಹ ಮಹಿಳೆಯರು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ಹಣವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಡಿ ಇನ್ನು ಕೂಡ ಸಾಕಷ್ಟು ಮಹಿಳೆಯರು ಯೋಜನೆಯ ಲಾಭವನ್ನು ಪಡೆಯುವಲ್ಲಿ ವಂಚಿತಾಗಿದ್ದಾರೆ.

ಯೋಜನೆಯ ಲಾಭವನ್ನು ಪಡೆಯಲು ಬೇಕಾಗಿರುವ ಅಗತ್ಯ ದಾಖಲೆಗಳ ಸಮಸ್ಯೆಯಿಂದಾಗಿ ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದರು ಕೂಡ ಅರ್ಜಿ ತಿರಸ್ಕಾರಗೊಂಡು ಅರ್ಹರು ಯೋಜನೆಯಿಂದ ವಂಚಿರಾಗಿದ್ದರೆ. ಸದ್ಯ ಅಂತವರಿಗಾಗಿ ಸರ್ಕಾರ ಮತ್ತೊಂದು ಅವಕಾಶವನ್ನು ನೀಡಿದೆ. ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಯ ಬಗ್ಗೆ ಮಾಹಿತಿ ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Gruha Lakshmi Application By Using WhatsApp
Image Credit: Original source

ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಮತ್ತೊಮ್ಮೆ ಅವಕಾಶ…!
ಸದ್ಯ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶವನ್ನು ನೀಡಿದೆ. ದಾಖಲೆಗಳ ಸಮಸ್ಯೆಯಿಂದಾಗಿ ಅದೆಷ್ಟೋ ಅರ್ಹರು ಯೋಜನೆಯಿಂದ ವಂಚಿತರಾಗಿದ್ದು ಸದ್ಯ ಇದೀಗ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇನ್ನು ಕಳೆದ ಬಾರಿ ಅರ್ಜಿ ಸಲ್ಲಿಕೆಗೆ ಅವಕಾಶ ಕೊಟ್ಟಾಗ ಸೈಬರ್ ಗಳಲ್ಲಿ ಸಮಸ್ಯೆ ಉಂಟಾದ ಕಾರಣ ಈ ಬಾರಿ ಸರ್ಕಾರ ಅರ್ಜಿ ಸಲ್ಲಿಕೆಯನ್ನು ಮತ್ತಷ್ಟು ಸರಳಗೊಳಿಸಿದೆ. ಅರ್ಜಿದಾರರು ಸುಲಭವಾಗಿ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಗೃಹ ಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಹಾಕುವುದು ಹೇಗೆ…?
ಸದ್ಯ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಹೊಸ ರೀತಿಯಲ್ಲಿ ಅವಕಾಶವನ್ನು ನೀಡಿದೆ. ಇ-ಆಡಳಿತಕ್ಕಾಗಿ ಕೇಂದ್ರವು ಅಭಿವೃದ್ಧಿಪಡಿಸಿದ WhatsApp ಚಾಟ್‌ ಬಾಟ್‌ ನ ಸಹಾಯದಿಂದ ಜನರು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಸಾಮಾನ್ಯವಾಗಿ ಕಂಪನಿಗಳು ಗ್ರಾಹಕರೊಂದಿಗೆ ಸಂವಹನ ನಡೆಸಲು ಚಾಟ್‌ ಬಾಟ್‌ ಗಳನ್ನು ಬಳಸುತ್ತವೆ. ಇದನ್ನು ಈಗ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಲು ಬಳಸಬಹುದು. ನಿಮ್ಮ ವಿವರಗಳನ್ನು WhatsApp ಸಂಖ್ಯೆ 8147500500 ಗೆ ಕಳುಹಿಸಬೇಕಾಗುತ್ತದೆ.

Join Nadunudi News WhatsApp Group

Gruha Lakshmi Application
Image Credit: Live Mint

ಅಪ್ಲಿಕೇಶನ್ ಸಲ್ಲಿಕೆಯನ್ನು ಪೂರ್ಣಗೊಳಿಸಲು ಚಾಟ್‌ಬಾಟ್ ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇ-ಆಡಳಿತಕ್ಕಾಗಿ ಅಭಿವೃದ್ಧಿಪಡಿಸಲಾದ ಚಾಟ್‌ ಬಾಟ್ ಅರ್ಜಿದಾರರೊಂದಿಗೆ ಸಂವಹನ ನಡೆಸುತ್ತದೆ. ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ ಇರಿಸಿದರೆ, ಅರ್ಜಿಯನ್ನು ನಿಮಿಷಗಳಲ್ಲಿ ಸಲ್ಲಿಸಬಹುದು. ಚಾಟ್‌ ಬಾಟ್ ಸ್ವೀಕರಿಸಿದ ಅಥವಾ ವಿನಂತಿಸಿದ ಎಲ್ಲಾ ಮಾಹಿತಿಯನ್ನು ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ್ ಒನ್ ಕಚೇರಿಗಳಿಗೆ ವರ್ಗಾಯಿಸುತ್ತದೆ. ಅಲ್ಲಿ ದಾಖಲೆಗಳನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ.

Gruha Lakshmi Application Latest News
Image Credit: News 18

Join Nadunudi News WhatsApp Group