Gruha Lakshmi: ಗೃಹಲಕ್ಷ್ಮಿ 2000 ರೂ ಹಣ ಇನ್ನೂ ಸಿಗಲಿದೆ ಬಿಗ್ ರಿಲೀಫ್, ಹಣ ಕ್ರೆಡಿಟ್ ಮಾಡಲು ಸರ್ಕಾರದ ಹೊಸ ಪ್ಲ್ಯಾನ್

ಗೃಹ ಲಕ್ಷ್ಮಿ ಯೋಜನೆಯಡಿ ಅರ್ಹ ಮಹಿಳೆಯರ ಖಾತೆಗೆ ಹಣ ತಲುಪಿಸಲು ಸರ್ಕಾರದ ಹೊಸ ಮಾರ್ಗ

Gruha Lakshmi Latest Update: ಸದ್ಯ ರಾಜ್ಯದಲ್ಲಿ Congress ನ ಐದು ಉಚಿತ ಗ್ಯಾರಂಟಿ ಯೋಜನೆಗಳಲ್ಲಿ Gruha Lakshmi ಯೋಜನೆಯು ಇನ್ನೂ ಕೂಡ ಬಗೆಹರಿಯದ ಸಮಸ್ಯೆಯಾಗಿ ಉಳಿದಿದೆ. ಹೌದು, ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಎಲ್ಲ ಅರ್ಹರಿಗೂ ತಲುಪಿಸಬೇಕು ಎನ್ನುವ ಉದ್ದೇಶದಿಂದ ವಿವಿದ ಕ್ರಮ ಕೈಗೊಳ್ಳುತ್ತಿದ್ದರೂ ಕೂಡ ಯಾವುದೇ ಪ್ರಯೋಜನ ಆಗುತ್ತಿಲ್ಲ.

ಇನ್ನು ಕೂಡ ಗೃಹ ಲಕ್ಷ್ಮಿ ಯೋಜನೆಯಡಿ ಒಂದು ಕಂತಿನ ಹಣ ಪಡೆಯದ ಸಾಕಷ್ಟು ಮಹಿಳೆಯರಿದ್ದಾರೆ. ಇದುವರೆಗೂ ಯೋಜನೆಯ ಲಾಭ ಪಡೆಯದ ಮಹಿಳೆಯರು ಸರ್ಕಾರಕ್ಕೆ ಮೇಲಿಂದ ಮೇಲೆ ಪ್ರಶ್ನೆ ಮಾಡುತ್ತಲೇ ಇದ್ದಾರೆ. ಸದ್ಯ ಇದನೆಲ್ಲ ಗಮನಿಸಿದ ಸರ್ಕಾರ ಯೋಜನೆಯ ಹಣ ಜಮಾ ಆಗದ ಮಹಿಳೆಯರಿಗಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೂಲಕ ಮಹಿಳೆಯರಿಗೆ ಬಿಗ್ ರಿಲೀಫ್ ನೀಡಲು ಮುಂದಾಗಿದೆ.

Gruha lakshmi Scheme Money Credit Update
Image Credit: The Hans India

ಗೃಹ ಲಕ್ಷ್ಮಿ ಹಣ ವರ್ಗಾವಣೆಗೆ ಸರ್ಕಾರದ ಹೊಸ ಸೂತ್ರ
ಸದ್ಯ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ ಇನ್ನು ಕೂಡ ಒಂದು ಕಂತಿನ ಹಣ ಪಡೆಯದ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲು ಹೊಸ ಸೂತ್ರವನ್ನು ಕಂಡು ಹಿಡಿದಿದೆ. ಹೌದು, ಕರ್ನಾಟಕ ಸರ್ಕಾರ ಮಹಿಳಾ ಮತ್ತು ಕಲ್ಯಾಣ ಇಲಾಖೆ ವತಿಯಿಂದ ಗೃಹಿಣಿಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣವನ್ನು ನೇರ ವರ್ಗಾವಣೆ ಮಾಡಲಾಗುತ್ತಿದೆ. ಆದರೆ ನಾನಾ ಕಾರಣಗಳಿಂದ ಕಳೆದ ಆರು ತಿಂಗಳಿಂದ ಲಕ್ಷಗಟ್ಟಲೆ ಮಹಿಳೆಯರಿಗೆ ಗೃಹಲಕ್ಷ್ಮಿ ಭಾಗ್ಯ ಲಭಿಸಿಲ್ಲ. ಇದೇ ಕಾರಣಕ್ಕೆ ಹಣ ಸಿಗದವರಿಗೆ ಸರ್ಕಾರ ಹಣ ನೀಡಲು ಮುಂದಾಗಿದೆ.

ಗೃಹ ಲಕ್ಷ್ಮಿ ಹಣ ಸಿಗದವರಿಗೆ ಬಿಗ್ ರಿಲೀಫ್
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಹಣ ಸಿಗದೇ ಇರುವವರು ಹಾಗೂ ಕೆಲ ಕಂತುಗಳು ಹಣ ಸಿಗದವರ ಮಾಹಿತಿಯನ್ನು ಸರ್ಕಾರಪಡೆದುಕೊಂಡಿದೆ. ಪ್ರತಿ ಗ್ರಾಮಕ್ಕೂ ಅಧಿಕಾರಿಗಳನ್ನು ಕಳುಹಿಸಲಾಗಿದೆ. ಬ್ಯಾಂಕ್‌ ಗಳಲ್ಲಿ ಖಾತೆ ಹೊಂದಿದ್ದರೆ ಮತ್ತು ಹಲವು ವರ್ಷಗಳಿಂದ ಖಾತೆ ಸಕ್ರಿಯವಾಗಿಲ್ಲದಿದ್ದರೆ ಅಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಠೇವಣಿ ಆಗಿರುವುದಿಲ್ಲ. ಬ್ಯಾಂಕ್ ಖಾತೆಗಳಲ್ಲಿ ದೋಷ ಕಂಡುಬಂದರೆ, ಅಂಚೆ ಇಲಾಖೆ ಮೂಲಕ ಹೊಸ ಖಾತೆ ತೆರೆಯಲು ಮತ್ತು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನಗಳನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ.

Gruha Lakshmi latest Updates 2024
Image Credit: Citizenmatters

ಅಲ್ಲದೆ ಬ್ಯಾಂಕ್ ಖಾತೆ ಜತೆಗೆ ಇಕೆವೈಸಿ ಕೊರತೆಯಿಂದ ಹಣ ಪಾವತಿಯಾಗದಿದ್ದರೆ ಅಂತಹ ಖಾತೆಗಳನ್ನು ಸರಿಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಖಾತೆಗಳಿಗೆ Aadhaar Seeding, NPCI Mapping ಕಡ್ಡಾಯವಾಗಿದೆ. ಈ ಕೆಲಸ ಮಾಡದೇ ಇರುವವರೂ ಕೆವೈಸಿ ಸಂಬಂಧಿತ ಕೆಲಸ ಮಾಡುತ್ತಿದ್ದಾರೆ. ತಾಂತ್ರಿಕ ಸಮಸ್ಯೆಗಳು ಬಗೆಹರಿದರೆ ಶೀಘ್ರವೇ ಫಲಾನುಭವಿಗಳ ಖಾತೆಗೆ ಬಾಕಿ ಹಣ ಜಮಾ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Join Nadunudi News WhatsApp Group

Join Nadunudi News WhatsApp Group