Graha Lakshmi: ಗೃಹಲಕ್ಷ್ಮಿ ಹಣ ಪಡೆಯಲು E -KYC ಮಾಡಿಸುವುದು ಹೇಗೆ…? ಗೃಹಲಕ್ಷ್ಮಿ 2000 ರೂ ಬೇಕಾದರೆ ತಕ್ಷಣ ಮಾಡಿ KYC

ಗೃಹಲಕ್ಷ್ಮಿ ಹಣ ಪಡೆಯಲು KYC ಮಾಡಿಸುವುದು ಹೇಗೆ...? ಇಲ್ಲಿದೆ ಡೀಟೇಲ್ಸ್

Gruha Lakshmi Scheme E-kyc: ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಕೋಟ್ಯಾಂತರ ಮಹಿಳೆಯರು ಪ್ರತಿ ತಿಂಗಳು 2000 ರೂಪಾಯಿ ಪಡೆಯುತ್ತಿದ್ದಾರೆ. ಈ ಯೋಜನೆಯು ಬಡ ಮಹಿಳೆಯರನ್ನು ಆರ್ಥಿಕವಾಗಿ ಸದ್ರಡಗೊಳಿಸುವ ಉದ್ದೇಶವನ್ನು ಹೊಂದಿದ್ದು,ಈ ಯೋಜನೆ ಪ್ರಾರಂಭ ಆಗಿ ಹಲವು ತಿಂಗಳುಗಳು ಕಳೆದರು ಇನ್ನು ಹಲವು ಅರ್ಹ ಮಹಿಳೆಯರಿಗೆ ಈ ಯೋಜನೆ ತಲುಪಿಲ್ಲ, ಇದಕ್ಕೆ ಪ್ರಮುಖ ಕಾರಣವೇ ತಂತ್ರಿಕ ದೋಷ ಹಾಗು E -KYC ಮಾಡಿಸದೇ ಇರುವುದಾಗಿದೆ. ಹಾಗಾಗಿ ಗೃಹಲಕ್ಷ್ಮಿ ಹಾಗು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಲು E -KYC ಮಾಡಿಸುವುದು ಮುಖ್ಯ ಆಗಿದೆ.

Gruha Lakshmi Scheme E-kyc
Image Credit: Publictv

ಗೃಹಲಕ್ಷ್ಮಿ ಹಾಗು ಅನ್ನಭಾಗ್ಯ ಯೋಜನೆಗೆ E -KYC ಕಡ್ಡಾಯ

ಗೃಹಲಕ್ಷ್ಮಿ ಹಾಗು ಅನ್ನಭಾಗ್ಯ ಯೋಜನೆಗೆ ಪಡಿತರ ಚೀಟಿ ಕಡ್ಡಾಯ ಆಗಿದ್ದು, ಅದರೊಂದಿಗೆ ನಿಮ್ಮ ಪಡಿತರ ಚೀಟಿ E -KYC ಆಗಿದೀಯ ಎಂದು ಪರೀಕ್ಷಿಸಿಕೊಳ್ಳುವುದು ಮುಖ್ಯ ಆಗಿದೆ. ಈ ಎರಡು ಯೋಜನೆಗಳಿಗೂ ಇದು ಕಡ್ಡಾಯ ಆಗಿದ್ದು, E-KYC ಯನ್ನು ನಿರ್ಲಕ್ಷಿಸಿದರೆ ಗೃಹಲಕ್ಷ್ಮಿ ಹಾಗು ಅನ್ನಭಾಗ್ಯ ಯೋಜನೆಯಾ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುವುದಿಲ್ಲ.

ಪಡಿತರ ಚೀಟಿ E -KYC ಆಗಿದೀಯ ಎಂದು ಪರೀಕ್ಷಿಸಿಕೊಳ್ಳುವ ವಿಧಾನ

ಮೊದಲು ರಾಜ್ಯ ಸರ್ಕಾರದ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ನಂತರ ಎಡಭಾಗದ ಮೆನುವಿನಲ್ಲಿ ಇ-ಸ್ಟೇಟಸ್ ಎನ್ನುವ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ, ಇದರ ಮೇಲೆ ಡೆಬಿಟಿ ಸ್ಟೇಟಸ್ ಎನ್ನುವ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಲಿಂಕ್ ಒಂದು ಆಯ್ಕೆ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ, ಈಗ ನಿಮ್ಮ ಮುಂದೆ ಇನ್ನೊಂದು ಪೇಜ್ ಕಾಣಿಸಿಕೊಳ್ಳುತ್ತದೆ ಅದರಲ್ಲಿ ನಿಮ್ಮ ಪಡಿತರ ವಿವರ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Join Nadunudi News WhatsApp Group

Gruha Lakshmi Scheme Latest Update
Image Credit: Powertvnews

ಈಗ ಮತ್ತೊಂದು ಪೇಜ್ ಕಾಣಿಸುತ್ತದೆ ಅದರಲ್ಲಿ ಎರಡು ಆಯ್ಕೆಗಳು ಇರುತ್ತದೆ, ವಿತ್ ಒಟಿಪಿ, ಇನ್ನೊಂದು ವಿಥೌಟ್ ಒಟಿಪಿ. ಈಗ ವಿಥೌಟ್ ಒಟಿಪಿ ಮೇಲೆ ಕ್ಲಿಕ್ ಮಾಡಿ ನಿಮ್ಮ ಪಡಿತರ ಸಂಖ್ಯೆ ನಮೂದಿಸಿ ನಂತರ ಗೋ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ ರೇಷನ್ ಕಾರ್ಡ್ ಸ್ಟೇಟಸ್ ಇಂಟೆರ್ ಫೇಸ್ ಓಪನ್ ಆಗುತ್ತದೆ ಅದರ ಎಡಭಾಗದಲ್ಲಿ ನಿಮ್ಮ ಪಡಿತರ ಚೀಟಿಯ ವಿವರ ಇರುತ್ತದೆ. ಬಲಭಾಗದಲ್ಲಿ ಪ್ರತಿ ತಿಂಗಳು ಪಡೆಯುವ ಪಡಿತರ ವಿವರ ಇರುತ್ತದೆ ಹಾಗೆಯೆ ಮಧ್ಯದಲ್ಲಿ ಪಡಿತರ ಚೀಟಿಯಲ್ಲಿರುವ ಹೆಸರು ಕಾಣಿಸುತ್ತದೆ.

ಅದರಲ್ಲಿ ಎಷ್ಟು ಜನರ KYC ಆಗಿದೆ, ಎಷ್ಟು ಜನರ KYC ಬಾಕಿ ಇದೆ ಎನ್ನುವ ವಿವರ ಕಾಣಿಸುತ್ತದೆ. ಆಗ ನೀವು ಯಾರ KYC ಆಗಿಲ್ಲ ಎಂದು ಪರಿಶೀಲಿಸಿ, ,ಮತ್ತೆ ನೀವು ಮೆನ್ ಮೆನುಗೆ ಬಂದು ಇ-ಪಡಿತರ ಚೀಟಿ ಆಯ್ಕೆಯಲ್ಲಿ ಲಿಂಕ್ ವಿಥ್ ಯುಐಡಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಜಿಲ್ಲಾವಾರು ಲಿಂಕ್ ಇರುತ್ತದೆ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಲಿಂಕ್ ಮಾಡಬೇಕು. ಇಲ್ಲಿ ನಿಮಗೆ ಆಧಾರ್ ಕಾರ್ಡ್ ಸಂಖ್ಯೆ ಹಾಗು ವರ್ಚುವಲ್ ಐಡಿ ಎನ್ನುವ ಎರಡು ಆಯ್ಕೆಗಳು ಇರುತ್ತದೆ. ಆಧಾರ್ ನಂಬರ್ ನಮೂದು ಮಾಡಿ ಗೋ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.

Gruha Lakshmi Scheme Karnataka
Image Credit: ETV Bharat

ಇದರ ನಂತರ ನಿಮ್ಮ ಮೊಬೈಲ್ ಗೆ ಒಂದು ಒಟಿಪಿ ಬರುತ್ತದೆ, ಆ ಒಟಿಪಿಯನ್ನು ಎಂಟ್ರಿ ಮಾಡಿ ಗೋ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ಸ್ಟೇಟಸ್ ಆಪ್ ರೇಷನ್ ಕಾರ್ಡ್ ಇಂಟರ್ ಫೇಸ್ ಓಪನ್ ಆಗುತ್ತದೆ. ಮೊದಲ ರೀತಿಯಲ್ಲಿ ಎಡಭಾಗದಲ್ಲಿ ಪಡಿತರ ವಿವರ, ಬಲಭಾಗದಲ್ಲಿ ಪಡಿತರ ಪಡೆದುಕೊಂಡ ವಿವರ ಹಾಗು ಮಧ್ಯದಲ್ಲಿ ಪಡಿತರ ಚೀಟಿಯಲ್ಲಿ ಇದ್ದವರ ಹೆಸರು ಕಾಣಿಸುತ್ತದೆ ಈಗ ಸದಸ್ಯರ ಹೆಸರು, ಆಧಾರ್ ನಂಬರ್ ನ ಕೊನೆಯ ನಾಲ್ಕು ಸಂಖ್ಯೆ ಮತ್ತು E-KYC ಆಗಿದ್ದರೆ ಎಸ್ ಎಂದು ಬರುತ್ತದೆ.

Join Nadunudi News WhatsApp Group