Gruha Lakshmi: ಮನೆಯ ಯಜಮಾನಿಯರಿಗೆ ಮತ್ತೆ 2 ಹೊಸ ರೂಲ್ಸ್, ಇಲ್ಲವಾದರೆ ಬರಲ್ಲ ಗೃಹಲಕ್ಷ್ಮಿ ಹಣ

ಮಹಿಳೆಯರೇ ನಿಮಗೆ ಗ್ರಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ನಿಮ್ಮ ಖಾತೆಗೆ ಬರಬೇಕೆಂದರೆ ಕಡ್ಡಾಯವಾಗಿ ಈ ಕೆಲಸವನ್ನು ಮಾಡಿಕೊಳ್ಳಿ, ಇಲ್ಲಿದೆ ಈ ಯೋಜನೆಯ ಸಂಪೂರ್ಣ ಮಾಹಿತಿ

Gruha Lakshmi Scheme New Rules: ರಾಜ್ಯದಲ್ಲಿ ಗ್ರಹಲಕ್ಷ್ಮಿ ಯೋಜನೆ ಜಾರಿಗೆ ಬಂದು ಹಲವು ತಿಂಗಳುಗಳು ಕಳೆದಿದ್ದು, ಈ ಯೋಜನೆಯಡಿ ಪ್ರತಿ ತಿಂಗಳು ಮಹಿಳೆಯರು 2000 ಹಣವನ್ನು ಪಡೆಯುತ್ತಿದ್ದಾರೆ.

ರಾಜ್ಯ ಸರ್ಕಾರದ ಐದು ಯೋಜನೆಯಲ್ಲಿ ಗ್ರಹಲಕ್ಷ್ಮಿ ಯೋಜನೆ ಲಕ್ಷಾಂತರ ಮಹಿಳೆಯರನ್ನು ತಲುಪಿದ್ದು, ಇನ್ನು ಹೊಸ ಅರ್ಜಿಯನ್ನು ಹಾಕಲು ಅನುವು ಮಾಡಿಕೊಡಲಾಗಿದೆ. ಈಗಾಗ್ಲೇ ಈ ಯೋಜನೆಯ ಐದು ಕಂತಿನ ಹಣ ಬಿಡುಗಡೆ ಆಗಿದ್ದು, ಆರನೇ ಕಂತಿನ ಹಣ ಬರಬೇಕೆಂದರೆ ಮಹಿಳೆಯರು ಕಡ್ಡಾಯವಾಗಿ ಈ ಕೆಲಸವನ್ನು ಮಾಡಿಕೊಳ್ಳಬೇಕಾಗಿದೆ ಎಂದು ಸರ್ಕಾರ ಆದೇಶ ಮಾಡಿದೆ.

Gruha Lakshmi Scheme New Rules
Image Credit: India Today

ಮಹಿಳೆಯರು ಈ ಎರಡು ಕೆಲಸವನ್ನು ಮಾಡಿಕೊಳ್ಳಲೇಬೇಕಾಗಿದೆ
ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಈ ಯೋಜನೆಯ ಲಾಭ ದೊರಕುತ್ತಿದ್ದು, ಮೊದಲನೇದಾಗಿ ಪ್ರತಿಯೊಬ್ಬ ಮಹಿಳೆಯು ಕೂಡ ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಬೇಕಾಗಿದೆ. ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ಮನೆ ವಿಳಾಸ ಹಾಗು ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರು ಹಾಗು ವಿಳಾಸ ಬೇರೆ ಆಗಿದ್ರೆ ಅಥವಾ ಹೊಂದಾಣಿಕೆ ಆಗದಿದ್ದಲ್ಲಿ ಮೊದಲೂ ನೀವು ನಿಮ್ಮ ಹೆಸರು ಮತ್ತು ವಿಳಾಸವನ್ನು ಸರಿಪಡಿಸಿಕೊಳ್ಳಬೇಕಾಗಿದೆ.

ಎರಡನೇದಾಗಿ ಆಧಾರ್ ಸೀಡಿಂಗ್ ಕಡ್ಡಾಯ ಎಂದು ಸರ್ಕಾರ ಈಗಾಗಲೇ ತಿಳಿಸಿದ್ದು, ನೀವು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನಿಮ್ಮ ಖಾತೆಗೆ ಆಧಾರ್ ಸೀಡಿಂಗ್ ಆಗಿದೆಯೇ ಇಲ್ಲವಾ ಎಂದು ವಿಚಾರಿಸಿಕೊಳ್ಳಿ, ಒಂದೊಮ್ಮೆ ಆಧಾರ್ ಸೀಡಿಂಗ್ ಆಗಿಲ್ಲ ಅಂತಾದರೆ ಕೂಡಲೇ ಈ ಕೆಲಸವನ್ನು ಮಾಡಿಕೊಳ್ಳತಕ್ಕದಾಗಿದೆ.

Gruha Lakshmi Scheme Karnataka
Image Credit: News 9 Live

ಗ್ರಹಲಕ್ಷ್ಮಿ ಯೋಜನೆಯ ಹಣ ಬಂದಿದಿಯೇ ಇಲ್ಲವಾ ಎಂದು ತಿಳಿಯುವ ವಿಧಾನ

Join Nadunudi News WhatsApp Group

ಗ್ರಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆಯೇ ಎಂದು ತಿಳಿಯಲು ಮೊದಲನೇದಾಗಿ ಗೂಗಲ್ ನಲ್ಲಿ ಮಾಹಿತಿ ಕಣಜ ಎಂದು ಸರ್ಚ್ ಮಾಡಿ ,ಆ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ,ಹೊಸ ಪುಟದಲ್ಲಿ ಮೇಲ್ಬಾಗದಲ್ಲಿ ಗ್ರಹಲಕ್ಷ್ಮಿ ಅರ್ಜಿ ಸ್ಥಿತಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ, ಈಗ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು,ಈಗ ಗೋ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಗ್ರಹಲಕ್ಷ್ಮಿ ಯೋಜನೆಯ ಹಣ ಬಂದಿರುವ ಕುರಿತು ಮಾಹಿತಿ ಪಡೆದುಕೊಳ್ಳಿ. ಖಾತೆಗೆ ಎಷ್ಟು ಹಣ, ಯಾವಾಗ ಬಂದಿದೆ ಎನ್ನುವ ಎಲ್ಲಾ ಮಾಹಿತಿಗಳು ಅಲ್ಲಿ ದೊರೆಯುತ್ತದೆ.

Join Nadunudi News WhatsApp Group