Gruha Lakshmi: ಗೃಹಲಕ್ಷ್ಮಿ ಯೋಜನೆಗೆ ಮತ್ತೆ ಅರ್ಜಿ ಆರಂಭ, ಈ ರೀತಿಯಲ್ಲಿ ರೇಷನ್ ಕಾರ್ಡುದಾರರು ಅರ್ಜಿ ಸಲ್ಲಿಸಿ

ಗೃಹಲಕ್ಷ್ಮಿ ಯೋಜನೆಗೆ ಮತ್ತೆ ಅರ್ಜಿ ಆರಂಭ, ಈ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ

Gruha Lakshmi Scheme Registration 2024: ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಬಹಳ ಸದ್ದು ಮಾಡುತ್ತಿದ್ದು, ಈಗಾಗಲೇ ಮಹಿಳೆಯರು ಈ ಯೋಜನೆಯಡಿ ಪ್ರತಿ ತಿಂಗಳು 2000 ರೂಪಾಯಿಯನ್ನು ಪಡೆಯುತ್ತಿದ್ದು, ಈಗ ಮತ್ತೆ ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಎನ್ನಲಾಗಿದೆ. ಹಲವರು ಪಡಿತರ ಚೀಟಿ ಇಲ್ಲದೇ ಇರುವುದರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರಲಿಲ್ಲ ಆದರೆ ಈಗ ಮತ್ತೆ ಅರ್ಹ ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.

Gruha Lakshmi Scheme Registration 2024
Image Credit: Live Mint

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಕೋಟ್ಯಂತರ ಮಹಿಳೆಯರನ್ನು ತಲುಪಿದೆ

ಗೃಹಲಕ್ಷ್ಮಿ ಯೋಜನೆಗೆ ಜುಲೈ 19 2023 ರಿಂದ ಅರ್ಜಿ ಸಲ್ಲಿಸಲು ಸರಕಾರ ಆಹ್ವಾನ ನೀಡಿತ್ತು, ತದನಂತರ ಆಗಸ್ಟ್ 30 ರ ಒಳಗೆ 1.10 ಕೋಟಿ ಅರ್ಜಿಗಳು ಸಲ್ಲಿಕೆ ಆಗಿದ್ದವು. ಈಗ ಒಟ್ಟು 1.17 ಕೋಟಿ ಅರ್ಜಿ ಸಲ್ಲಿಕೆ ಆಗಿದ್ದು, ಈಗಾಗಲೇ ನಾಲ್ಕು ಕಂತಿನ ಹಣವನ್ನು ಬಿಡುಗಡೆ ಮಾಡಿದ್ದೂ, ಇನ್ನು ಸದ್ಯದಲ್ಲೇ ಐದನೇ ಕಂತಿನ ಹಣ ಬಿಡುಗಡೆ ಆಗಲಿದೆ. ಈ ಯೋಜನೆಯನ್ನು ಪ್ರತಿಯೊಬ್ಬ ಅರ್ಹ ಮಹಿಳೆಯರಿಗೂ ತಲುಪಿಸಬೇಕೆನ್ನುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.

ಹಲವು ಮಹಿಳಾ ಅಭ್ಯರ್ಥಿಗೆ ಇನ್ನು ಗೃಹಲಕ್ಷ್ಮಿ ಹಣ ಬಂದಿಲ್ಲ

ಕೆಲವು ಅರ್ಜಿ ನೀಡಿದ ಮಹಿಳೆಯರು ಈ ಯೋಜನೆಯಿಂದ ಹೊರಗುಳಿದಿದ್ದಾರೆ , ಇದಕ್ಕೆ ಮುಖ್ಯ ಕಾರಣಗಳು, ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದೇ ಇರುವುದು ಅಥವಾ ಪಡಿತರ ಚೀಟಿಯಲ್ಲಿರುವ ಕೆಲವು ತಪ್ಪುಗಳು ಮತ್ತು ಸರಕಾರದ ಕೆಲವು ತಂತ್ರಿಕ ದೋಷಗಳಾಗಿದ್ದು, ಇವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸರಕಾರ ಅದಾಲತ್ ಹಾಗು ಕ್ಯಾಂಪ್ ಗಳ ಮೂಲಕ ಲಕ್ಷಾಂತರ ಮಹಿಳೆಯರ ಸಮಸ್ಯೆಯನ್ನು ಬಗೆಹಸಿಸುತ್ತಿದ್ದು, ಎಲ್ಲಾ ಸಮಸ್ಯೆಗಳು ಬಗೆಹರಿದ ನಂತರ ಸಂಪೂರ್ಣ ಐದು ಕಂತಿನ ಹಣವನ್ನು ಒಮ್ಮೆಲೇ ಮಹಿಳಾ ಅಭ್ಯರ್ಥಿಯ ಖಾತೆಗೆ ಜಮೆ ಮಾಡಲಾಗುವುದು.

Join Nadunudi News WhatsApp Group

Gruha Lakshmi Scheme Latest News Update
Image Credit: Citizenmatters

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

ಈಗಾಗಲೇ ಹಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿಲ್ಲ ಕೆಲವು ತಂತ್ರಿಕಾ ದೋಷಗಳನ್ನು ಸರಿಪಡಿಸಲು ಸಾಧ್ಯವಾಗದೆ ಇರುವುದರಿಂದ ಇಂತಹ ಮಹಿಳೆಯರು ಮತ್ತೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ ಹಾಗು ನೀವು ಹೊಸ ಪಡಿತರ ಚೀಟಿಯನ್ನು ಹೊಂದಿದ್ದರೆ ಅರ್ಜಿ ಸಲ್ಲಿಸಬಹುದಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿರದ ಕಾರಣ ನಿಮ್ಮ ಆಧಾರ ಕಾರ್ಡ್, ರೇಷನ್ ಕಾರ್ಡ್ ಹಾಗು ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗು ಮೊಬೈಲ್ ನಂಬರ್ ವಿವರವನ್ನು ನಿಮ್ಮ ಹತ್ತಿರದ ಒನ್ ಬಾಪೂಜಿ ಕೇಂದ್ರ ಮೊದಲಾದ ಸೇವಾ ಕೇಂದ್ರಕ್ಕೆ ಹೋಗಿ ನೇರವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಿ.

Join Nadunudi News WhatsApp Group