Cash Limit: ಜಾರಿಗೆ ಬಂತು ಹೊಸ ನಿಯಮ, ಇನ್ಮುಂದೆ ಮನೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇಟ್ಟುಕೊಳ್ಳುವಂತಿಲ್ಲ

ಇನ್ಮುಂದೆ ಮನೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇಟ್ಟುಕೊಳ್ಳುವಂತಿಲ್ಲ

Cash Limit At Home: ದೇಶದಲ್ಲಿ 2024 ರ ಆರಂಭದಿಂದ ಅನೇಕ ನಿಯಮಗಳು ಬದಲಾಗುತ್ತ ಬಂದಿದೆ. ಅದರಲ್ಲೂ ಹೊಸ ಹಣಕಾಸು ವರ್ಷ ಆರಂಭವಾದ ಬೆನ್ನಲ್ಲೇ ಅನೇಕ ಹೊಸ ಹಣಕಾಸು ನಿಯಮಗಳು ಜಾರಿಯಾಗಿವೆ. ಸದ್ಯ ಆದಾಯ ಇಲಾಖೆ ನಗದಿಗೆ ಸಂಬಂಧಿಸಿದಂತೆ ಅನೇಕ ನಿಯಮಾವಳಿಗಳನ್ನು ರೂಪಿಸಿದೆ. ಮನೆಯಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬಬಹುದು ಎನ್ನುವುದಕ್ಕೂ ಆದಾಯ ಇಲಾಖೆಯಲ್ಲಿ ಪ್ರತ್ಯೇಕ ನಿಯಮವಿದೆ.

ಮನೆಯಲ್ಲಿ ಇಂತಿಷ್ಟು ಹಣವನ್ನು ಮಾತ್ರ ಇಟ್ಟುಕೊಳ್ಳಬಹುದು ಎಂದು ಆದಾಯ ಇಲಾಖೆ ನಿಯಮ ಮಾಡಿದೆ. ನೀವು ಮನೆಯಲ್ಲಿ ಹಣವನ್ನು ಸ್ಟಾಕ್ ಮಾಡಿ ಇಟ್ಟುಕೊಳ್ಳುವ ಮುನ್ನ ಮನೆಯಲ್ಲಿ ಇರಿಸಬಹುದಾದ ಹಣದ ಮಿತಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಆದಾಯ ಇಲಾಖೆಯ ನಿಯಮವನ್ನು ಮೀರಿ ಹೆಚ್ಚಿನ ಹಣವನ್ನು ಇಟ್ಟುಕೊಂಡರೆ ನೀವು ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ.

Guidelines for Cash AT Home
Image Credit: Taxconcept

ಇನ್ಮುಂದೆ ಮನೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇಟ್ಟುಕೊಳ್ಳುವಂತಿಲ್ಲ
•ಆದಾಯ ತೆರಿಗೆಯ ನಿಯಮಗಳ ಪ್ರಕಾರ, ನಿಮ್ಮ ಮನೆಯಲ್ಲಿ ನೀವು ಹೆಚ್ಚಿನ ಹಣವನ್ನು ಇಟ್ಟುಕೊಳ್ಳಬಹುದು, ಆದರೆ ತೆರಿಗೆ ಇಲಾಖೆಯವರು ಸಂಬಂಧಪಟ್ಟ ಹಣದ ದಾಖಲೆಯನ್ನು ಕೇಳಿದಾಗ ಸೂಕ್ತ ಮಾಹಿತಿ ನೀಡಬೇಕಾಗುತ್ತದೆ. ಕಾನೂನುಬದ್ಧವಾಗಿ ಆ ಹಣವನ್ನು ಗಳಿಸಿದ್ದರೆ ಸಂಪೂರ್ಣ ದಾಖಲೆಯನ್ನು ನೀಡಬೇಕು. ಹೆಚ್ಚಿನ ಹಣಗಳಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದರೆ ಚಿಂತಿಸುವ ಅಗತ್ಯವಿಲ್ಲ.

•ದಾಖಲೆಗಳಿಲ್ಲದ ಹಣಗಳಿಗೆ ಹೆಚ್ಚಿನ ದಂಡವನ್ನು ಕಟ್ಟಬೇಕಾಗುತ್ತದೆ. ನಿಮ್ಮಿಂದ ಮರುಪಡೆಯಲಾದ ನಗದು ಮೊತ್ತಕ್ಕೆ ಆ ಮೊತ್ತದ 137 % ವರೆಗೆ ತೆರಿಗೆ ವಿಧಿಸಬಹುದು. ಅಂದರೆ ನಿಮ್ಮ ಬಳಿ ಇರುವ ನಗದು ಮೊತ್ತದ 37 % ಪಾವತಿಸಬೇಕಾಗುತ್ತದೆ. ಇನ್ನು ನೀವು 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಇಟ್ಟರೆ ಅಥವಾ ಒಮ್ಮೆಲೇ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆದರೆ ಬ್ಯಾಂಕ್ ನಲ್ಲಿ ಹಣವನ್ನು ಹಿಂಪಡೆಯುವಾಗ ಪಾನ್ ಹಾಗೂ ಆಧಾರ್ ದಾಖಲೆಗಳನ್ನು ನೀಡಬೇಕಾಗುತ್ತದೆ.

Cash Limit At Home
Image Credit: NDTV

•ಇನ್ನು ಬ್ಯಾಂಕಿನಲ್ಲಿ 2 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಹಿಂಪಡೆದರೆ TDS ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ಅದೇ ರೀತಿಯಲ್ಲಿ ಮನೆಯಲ್ಲಿ 20 ಲಕ್ಷ ರೂಪಾಯಿಯಿಂದ ಹೆಚ್ಚಿನ ನಗದು ಇಟ್ಟುಕೊಳ್ಳುವುದು ಕಾನೂನು ಬಾಹಿರ ಕೂಡ ಆಗಿದೆ. 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನ ಮನೆಯಲ್ಲಿ ಇಟ್ಟುಕೊಂಡರೆ ತೆರಿಗೆ ಇಲಾಖೆ ದಾಳಿ ಮಾಡಿದ ಸಮಯದಲ್ಲಿ ಅಗತ್ಯ ದಾಖಲೆ ಸಲ್ಲಿಸಬೇಕಾಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.

Join Nadunudi News WhatsApp Group

•ಆದಾಯ ತೆರಿಗೆ ನಿಯಮಗಳ ಪ್ರಕಾರ ನೀವು ಖರೀದಿ ಮಾಡುವಾಗ 2 ಲಕ್ಷಕ್ಕಿಂತ ಹೆಚ್ಚು ಪಾವತಿಸುವಂತಿಲ್ಲ. ಇದಕ್ಕಾಗಿ ನೀವು ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ತೋರಿಸಬೇಕು.

•ಒಂದು ವರ್ಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ನೀವು ಬ್ಯಾಂಕ್ ಖಾತೆಯ ನಗದು ಮಿತಿ 20 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಜಮಾ ಮಾಡಿದರೂ ಸಹ, ನೀವು ಬ್ಯಾಂಕ್‌ ಗೆ ಪ್ಯಾನ್ ಮತ್ತು ಆಧಾರ್ ಅನ್ನು ತೋರಿಸಬೇಕಾಗುತ್ತದೆ.

Storage Of Cash At Home
Image Credit: Karnataka Times

Join Nadunudi News WhatsApp Group