Haripriya Wedding: ಹರಿಪ್ರಿಯಾ-ವಸಿಷ್ಠ ಮದುವೆಗೆ ಸಾಕ್ಷಿಯಾದ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು..

Haripriya- Vasishta Simha Wedding: ಸ್ಯಾಂಡಲ್ ವುಡ್ ನ ಸ್ಟಾರ್ ಜೋಡಿಗಳಾದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ನಿನ್ನೆ (ಜನವರಿ 26) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಿಂಹ ಪ್ರಿಯ ಜೋಡಿ ವಿವಾಹವಾಗಿದ್ದಾರೆ.

ಈ ಜೋಡಿಯ ವಿವಾಹಕ್ಕೆ ಸಾಕಷ್ಟು ಗಣ್ಯರು, ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ಸಾಕಷ್ಟು ವರ್ಷಗಳ ಪ್ರೀತಿಗೆ ಹರಿಪ್ರಿಯಾ (Hariprriya)  ಮತ್ತು ವಸಿಷ್ಠ ಸಿಂಹ (Vasishta Simha) ಮದುವೆ ಮುದ್ರೆ ಒತ್ತಿದ್ದಾರೆ.

Sandalwood celebs who witnessed the Haripriya-Vasishtha wedding
Image Credit: news18

ವೈವಾಹಿಕ ಜೀವನಕ್ಕೆ ಕಾಲಿಟ್ಟ ಹರಿಪ್ರಿಯಾ- ವಸಿಷ್ಠ ಸಿಂಹ
ಇನ್ನು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅರಶಿನ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಈ ಜೋಡಿ ನಿನ್ನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ (Ganapathy Sachchidananda Ashrama) ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮದುವೆ ಸಾಂಪ್ರದಾಯಿಕವಾಗಿ ನೆರವೇರಿದೆ.

Many actors and actresses from Kannada film industry appeared in the wedding of Haripriya and Vasishtha Simha
Image Credit: news18

ಸಚ್ಚಿದಾನಂದ ಆಶ್ರಮದಲ್ಲಿ ನೆರವೇರಿದ ಹರಿಪ್ರಿಯಾ- ವಸಿಷ್ಠ ಸಿಂಹ ಮದುವೆ
ಇದೀಗ ಈ ಇಬ್ಬರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಲವು ವರ್ಷಗಳ ಪ್ರೀತಿಗೆ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಮದುವೆಯ ಮುದ್ರೆ ಒತ್ತಿದ್ದಾರೆ.

Join Nadunudi News WhatsApp Group

ಇನ್ನು ಸಚ್ಚಿದಾನಂದ ಆಶ್ರಮದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆ ಸರಳವಾಗಿ ನಡೆದಿದೆ. ಸಿನಿಮಾ ರಂಗದ ಸ್ನೇಹಿತರು ಮತ್ತು ಗಣ್ಯರಿಗೆ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಗಿದೆ.

Haripriya and Vasishtha Simha who got married simply
Image Credit: filmibeat

ನವ ಜೋಡಿಯ ಮದುವೆಗೆ ಸಾಕ್ಷಿಯಾದ ಸೆಲೆಬ್ರಿಟಿಗಳು
ಈ ನವ ಜೋಡಿಗೆ ಚಿತ್ರರಂಗದ ಅನೇಕ ಕಲಾವಿದರು, ಆಪ್ತರು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಇನ್ನು ಸಿಂಹ ಪ್ರಿಯ ಜೋಡಿಯ ಮದುವೆಗೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ (Shivaraj Kumar), ವಸಿಷ್ಠ ಸಿಂಹ ಕುಚಿಕು ಗೆಳೆಯ ಧನಂಜಯ್ (Dhananjay), ನಟಿ ಅಮೃತಾ (Amrutha), ರಾಜಕೀಯ ರಂಗದಿಂದ ಎಸ್. ಟಿ ಸೋಮಶೇಖರ್ (S.T Somashekar) , ರಾಮ್ ದಾಸ್ (Ram Das) ಹಾಗೂ ಪ್ರತಾಪ್ ಸಿಂಹ (Pratap Simha) ಮದುವೆಗೆ ಬಂದು ಶುಭಕೋರಿದ್ದರು.

Join Nadunudi News WhatsApp Group