HDFC UPI: HDFC ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಇನ್ನೊಂದು ಗುಡ್ ನ್ಯೂಸ್, ಈಗ ಫೋನ್ ಮಾಡಿ UPI ಮಾಡಿ.

HDFC ಬ್ಯಾಂಕ್ ಖಾತೆ ಇದ್ದವರಿಗೆ UPI ನಲ್ಲಿ ಇನ್ನೊಂದು ಬಿಗ್ ಅಪ್ಡೇಟ್.

HDFC Bank UPI Payment Facility: ಸದ್ಯ ದೇಶದಲ್ಲಿ UPI Payment ಜನಸ್ನೇಹಿಯಾಗಿದೆ. ಪ್ರತಿಯೊಬ್ಬರೂ ಕೂಡ ನಗದು ಹಣದ ವಹಿವಾಟಿನ ಬದಲಾಗಿ ಇದೀಗ UPI ವಹಿವಾಟನ್ನು ಬಳಸಲು ಪ್ರಾರಂಭಿಸಿದ್ದಾರೆ. ಇನ್ನು ಬಳಕೆದಾರರಿಗಾಗಿ ಸಾಕಷ್ಟು ವಿಭಿನ್ನ ರೀತಿಯ UPI Application ಗಳು ಲಭ್ಯವಾಗುತ್ತದೆ. ಬಳಕೆದಾರರು ತಮ್ಮ ಇಚ್ಛೆಗೆ ಅನುಗುಣವಾಗಿ UPI Application ನ ಮೂಲಕ ಪಾವತಿ ಮಾಡಬಹುದಾಗಿದೆ.

ಇತ್ತೀಚೆಗಂತೂ UPI ತನ್ನ ಸೇವೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳುತ್ತ ಜನರಿಗೆ ಹತ್ತಿರವಾಗುತ್ತಿದೆ. UPI ಹೊಸ ಹೊಸ ಸೇವೆಯನ್ನು ಪರಿಚಯಿಸುತ್ತಿದ್ದಂತೆ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಗ್ರಾಹಕರಿಗೆ ಹೊಸ ಸೇವೆಯನ್ನು ನೀಡಲು ಮುಂದಾಗುತ್ತವೆ. ಇನ್ನು ಬ್ಯಾಂಕುಗಳು ಈಗಾಗಲೇ ಗ್ರಾಹಕರಿಗೆ ಆನ್ಲೈನ್ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿದೆ. ಇದರ ಜೊತೆಗೆ UPI ಸೇವೆಯನ್ನು ಕೂಡ ನೀಡುತ್ತ ಗ್ರಾಹಕರಿಗೆ ಇನ್ನಷ್ಟು ಸಹಾಯವಾಗುತ್ತಿದೆ.

HDFC Bank UPI Payment Facility
Image Source: Money control

HDFC ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಇನ್ನೊಂದು ಗುಡ್ ನ್ಯೂಸ್
ಸದ್ಯ ದೇಶದಲ್ಲಿ UPI ಇಂಟೆರ್ ನೆಟ್ ಇಲ್ಲದೆ, ATM Card ಇಲ್ಲದೆ, ಬ್ಯಾಂಕ್ ನಲ್ಲಿ ಹಣ ಇಲ್ಲದೆ ಕೂಡ ಹಣದ ವಹಿವಾಟನ್ನು ನಡೆಸಲು ಬಳಕೆದಾರರಿಗೆ ಅವಕಾಶ ನೀಡುತ್ತಿದೆ. ಇದೀಗ UPI ಪರಿಚಯಿಸಿರುವ ಎಲ್ಲಾ ಸೌಲಭ್ಯವನ್ನು ಇದೀಗ ದೇಶದ ಜನಪ್ರಿಯ ಖಾಸಗಿ ವಲಯದ ಬ್ಯಾಂಕ್ ಆಗಿರುವ HDFC ತನ್ನ ಗ್ರಾಹಕರಿಗೆ ನೀಡಲು ನಿರ್ಧರಿಸಿದೆ. ನೀವು HDFC ಬ್ಯಾಂಕ್ ಗ್ರಾಹಕರಾಗಿದ್ದರೆ ಬ್ಯಾಂಕ್ ನೀಡುತ್ತಿರುವ ಈ UPI ಸೌಲಭ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.

*Phone Call ನ ಮೂಲಕ UPI ಸಾಧ್ಯ
ಇದೀಗ HDFC ಬ್ಯಾಂಕ್ ಗ್ರಾಹಕರಿಗಾಗಿ UPI 123Pay ಸೇವೆಯನ್ನು ಪರಿಚಯಿಸಿದೆ. ಇದರ ಮೂಲಕ ಯಾರಾದರೂ Internet ಅಥವಾ Smartphone ಇಲ್ಲದಿದ್ದರೂ ಸಹ ಕೇವಲ ಫೋನ್ ಕರೆ ಮಾಡುವ ಮೂಲಕ ಸುಲಭವಾಗಿ UPI ಪಾವತಿಗಳನ್ನು ಮಾಡಬಹುದು. Interactove Voice Response ಮೂಲಕ ಗ್ರಾಹಕರು ಸುಲಭವಾಗಿ ಬುಕ್ ಮಾಡಬಹುದು ಮತ್ತು ಸೇವೆಗಳಿಗೆ ಪಾವತಿಸಬಹುದು ಅಂದರೆ.

HDFC Bank UPI Payment Facility
Image Source: India Today

*UPI Plug In
ವ್ಯಾಪಾರಿ ವಹಿವಾಟುಗಳಿಗಾಗಿ UPI ಪ್ಲಗ್-ಇನ್ ಸೇವೆ ಲಭ್ಯವಾಗಲಿದೆ. UPI ಪ್ಲಗ್-ಇನ್ ಸೇವೆಯು UPI ಮೂಲಕ ಪಾವತಿಗಳನ್ನು ಮಾಡಲು ಸುಲಭಗೊಳಿಸುತ್ತದೆ. ಶಾಪಿಂಗ್ ಮಾಡುವಾಗ ನೀವು ವಿವಿಧ ಅಪ್ಲಿಕೇಶನ್‌ಗಳ ನಡುವೆ ಬದಲಾಯಿಸುವ ಅಗತ್ಯವಿಲ್ಲ.

Join Nadunudi News WhatsApp Group

*AutoPay on QR codes
QR ನಲ್ಲಿ ಸ್ವಯಂ ಪಾವತಿಯು UPI QR ಕೋಡ್‌ ಗಳನ್ನು ಬಳಸಿಕೊಂಡು ಸ್ವಯಂಚಾಲಿತ ಪಾವತಿಗಳನ್ನು ಸುಲಭವಾಗಿ ಹೊಂದಿಸಲು ನಿಮಗೆ ಅನುಮತಿಸುತ್ತದೆ. ಸ್ಟ್ರೀಮಿಂಗ್ ಸೇವೆಗಳು, ಚಂದಾದಾರಿಕೆಗಳು ಇತ್ಯಾದಿಗಳಿಗೆ ಸ್ವಯಂಚಾಲಿತ ಪಾವತಿಗಳನ್ನು ಮಾಡಲು ಇದು ಉಪಯುಕ್ತವಾಗಿದೆ.

Join Nadunudi News WhatsApp Group