HDFC Merge: ವಿಲೀನವಾಗಲಿದೆ HDFC ಬ್ಯಾಂಕ್, ಬದಲಾಗಲಿದೆ ಸಾಲಗಳ ಮತ್ತು ಹಣ ಇಟ್ಟರವ ಬಡ್ಡಿದರ.

HDFC ಬ್ಯಾಂಕ್ ಜೊತೆ HDFC ವಿಲೀನವಾದರೆ ಬದಲಾಗಲಿದೆ ಬ್ಯಾಂಕಿನ ಬಡ್ಡಿದರ.

HDFC Bank Merge: ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗು ಎಚ್ ಡಿ ಎಫ್ ಸಿ ಬ್ಯಾಂಕ್ (HDFC  Bank) ವಿಲೀನ ಪ್ರಕ್ರಿಯೆ ಪೂರ್ಣವಾಗಲು ಇನ್ನು ಕೆಲವೇ ಕೆಲವು ತಿಂಗಳುಗಳಿವೆ. ಜೂನ್ ವೇಳೆಗೆ ಎರಡು ಪ್ರಮುಖ ಹಣಕಾಸು ಸಂಸ್ಥೆಗಳ ವಿಲೀನ ಪ್ರಕ್ರಿಯೆ ಪೂರ್ಣವಾಗುವ ಸಾಧ್ಯತೆ ಇದೆ.

ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕ್, ಹಣಕಾಸು ಸಂಸ್ಥೆಯ ವಿಲೀನದಿಂದಾಗಿ ಗ್ರಾಹಕರ ಸಾಲ ಪಾಡೆಯುವವರ ಹಣ ಹೂಡಿಕೆದಾರರ ಮೇಲೆ ಭಾರಿ ಪ್ರಭಾವ ಉಂಟು ಮಾಡಲಿದೆ.

HDFC Bank Merge
Image Credit: google

ಎಚ್ ಡಿ ಎಫ್ ಸಿ ವಿಲೀನ ಪ್ರಕ್ರಿಯೆ
ಜೂನ್ ವೇಳೆಗೆ ಈ ವಿಲೀನ ಪ್ರಕ್ರಿಯೆ ಪೂರ್ಣವಾಗುವ ಸಾಧ್ಯತೆಯಿದೆ ಎಂದು ಎಚ್ ಡಿ ಎಫ್ ಸಿ ವೆಬ್ ಸೈಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಈ ವೀಲಿನ ಪ್ರಕ್ರಿಯೆಯು 21 ಲಕ್ಷ ಹೂಡಿಕೆದಾರರ ಖಾತೆಯ ಮೇಲೆ ಪ್ರಭಾವ ಉಂಟು ಮಾಡುತ್ತದೆ.

ಎಚ್ ಡಿ ಎಫ್ ಸಿ ಯಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರು ಪ್ರಮುಖವಾಗಿ ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗು ಎಚ್ ಡಿ ಎಫ್ ಸಿ ವಿಲೀನವಾದ ಬಳಿಕ ಉಂಟಾಗುವ ಪ್ರಭಾವವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಎಚ್ ಡಿ ಎಫ್ ಸಿ ಬ್ಯಾಂಕ್ ಬಡ್ಡಿ ದರದಲ್ಲಿ ಬದಲಾವಣೆ
ಇದರಿಂದ ಪ್ರಮುಖವಾಗಿ ಬಡ್ಡಿದರದಲ್ಲಿ ಬದಲಾವಣೆಯಾಗುತ್ತದೆ. ಎರಡು ಹಣಕಾಸು ಸಂಸ್ಥೆಗಳಲ್ಲಿ ಬಡ್ಡಿದರ ವಿಭಿನ್ನವಾಗಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಹೋಲಿಕೆ ಮಾಡಿದಾಗ ಎಚ್ ಡಿ ಎಫ್ ಸಿ ಯಲ್ಲಿ ಫಿಕ್ಸಡ್ ಡೆಪಾಸಿಟ್ ಮೇಲೆ ಅಧಿಕ ಬಡ್ಡಿದರವನ್ನು ನೀಡಲಾಗುತ್ತದೆ.

Join Nadunudi News WhatsApp Group

HDFC Bank merger but there is a possibility of changes in interest rates of banks.
Image Credit: livemint

ನೀವು ಎಚ್ ಡಿ ಎಫ್ ಸಿಯಲ್ಲಿ 66 ತಿಂಗಳುಗಳ ಅವಧಿಯ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್ ಡಿ ಹೂಡಿಕೆ ಮಾಡಿದ್ದೀರಿ ಎಂದುಕೊಳ್ಳಿ. ಎಚ್ ಡಿ ಎಫ್ ಸಿ ಯಲ್ಲಿ ವಾರ್ಷಿಕವಾಗಿ ಶೇಕಡಾ 7.45 ರಷ್ಟು ಬಡ್ಡಿದರವಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಇದೆ ಅವಧಿಯ ಎಫ್ ಡಿ ಮೇಲೆ ಶೇಕಡಾ 7 ರಷ್ಟು ಬಡ್ಡಿದರ ನೀಡಲಾಗುತ್ತದೆ.

Join Nadunudi News WhatsApp Group