Hero 125: ಇನ್ನೊಂದು 125cc ಬೈಕ್ ಲಾಂಚ್ ಮಾಡಿದ ಹೀರೋ, ಕಡಿಮೆ ಬೆಲೆ 70 ಕಿಲೋಮೀಟರ್ ಮೈಲೇಜ್.

ಅತ್ಯಾಧುನಿಕ ಫೀಚರ್ ಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ Hero Passion Pro.

Hero Passion Pro 125: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ Bike ಗಳು ಲಗ್ಗೆ ಇಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಬೈಕ್ ಗಳು ಬಿಡುಗಡೆಗೊಳ್ಳುತ್ತಿದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ Hero ಕಂಪನಿಯ ಸಾಕಷ್ಟು ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಹೆಚ್ಚಿನ ಮೈಲೇಜ್ ನೀಡುವ ಬೈಕ್ ಅನ್ನು ಹೀರೋ ಕಂಪನಿ ಬಿಡುಗಡೆ ಮಾಡಿದೆ.

ಹೀರೋ ಬೈಕ್ ಗಳ ಮೇಲೆ ಕಂಪನಿ ವಿವಿಧ ರೀತಿಯ ಹಣಕಾಸಿನ ಯೋಜನೆಗಳನ್ನು ನೀಡುತ್ತಿದೆ. ಇದೀಗ ಹೀರೋ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಹೆಚ್ಚಿನ ಮೈಲೇಜ್ ನೀಡುವ ಬೈಕ್ ಅನ್ನು ಹೀರೋ ಕಂಪನಿ ಬಿಡುಗಡೆ ಮಾಡಿದೆ.

Hero Passion Pro 125
Image Source: Mint

HERO ಹೊಚ್ಚ ಹೊಸ ಬೈಕ್ ಲಾಂಚ್
ಇನ್ನು ಮಾರುಕಟ್ಟೆಯಲ್ಲಿ HERO ಕಂಪನಿ ಅತಿ ಹೆಚ್ಚು ಜನಪ್ರಿಯತೆ ಪಡೆದಿದೆ ಎಂದರೆ ತಪ್ಪಾಗಲಾರದು. Hero ಯುವಕರ ನೆಚ್ಚಿನ ಅನೇಕ ಮಾದರಿಯ ಸ್ಪೋರ್ಟ್ಸ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಸ್ಪೋರ್ಟ್ ಬೈಕ್ ಆಯ್ಕೆಗೆ ಯಾವುದೇ ಕೊರತೆ ಇಲ್ಲ. ಇದೀಗ Hero ತನ್ನ Passion Pro 125 Bike ಬಿಡುಗಡೆ ಸಿದ್ಧತೆ ನಡೆಸಿದೆ. ವಿಭಿನ್ನ ನೋಟವಿರುವ Hero Passion Pro 125 ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುದರಲ್ಲಿ ಯಾವುದೇ ಸಂದೇಹವಿಲ್ಲ.

Hero Passion Pro 125 ನ ಬೆಲೆ ವೈಶಿಷ್ಟ್ಯಗಳು
Hero Passion Pro 125 ನಲ್ಲಿ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. Digital Speedometer, Digital Odometer, Digital Tripmeter, Digital Tachometer, AVS System, Fuel Gauge, USB Mobile Charger, Stand indicator ನಂತಹ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇನ್ನು ನಿಮಗೆ Hero Passion Pro 125 ಮಾದರಿಯ ಖರೀದಿಗೆ ಮನಸ್ಸಾಗಿದ್ದರೆ ಇದಕ್ಕಾಗಿ ನೀವು 94000 ರೂ. ಗಳನ್ನೂ ನೀಡಬೇಕಾಗುತ್ತದೆ.

Hero Passion Pro 125
Image Source: Bikewale

Hero ಪ್ಯಾಶನ್ ಪ್ರೊ 125 ಎಂಜಿನ್
ಹೀರೋ ಪ್ಯಾಶನ್ ಪ್ರೊ 125 ಬೈಕ್‌ನಲ್ಲಿ 125 ಸಿಸಿ ಎಂಜಿನ್ ಅನ್ನು ನೀಡಿದ್ದು, 10.5 ಪಿಎಸ್ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ವಾಹನ ಸವಾರರ ಸುರಕ್ಷತೆಗಾಗಿ ಬೈಕ್‌ನ ಮುಂಭಾಗದ ಟೈರ್‌ ನಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಈ ಬೈಕ್‌ ನಲ್ಲಿ 5 ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಕಾಣಬಹುದು. ಇನ್ನು ಈ ಬೈಕ್ ನಲ್ಲಿ 9 ಲೀಟರ್ ಇಂಧನ ಟ್ಯಾಂಕ್ ಅನ್ನು ನೀಡಲಾಗಿದ್ದು, ಪ್ರತಿ ಲೀಟರ್ ಗೆ ಸರಿಸುಮಾರು 65 ರಿಂದ 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group