High Court: ಹೆಂಡತಿ ಈ ರೀತಿ ವರ್ತಿಸಿದರೆ ಗಂಡ ಆಕೆಗೆ ವಿಚ್ಛೇಧನ ನೀಡಬಹುದು, ಹೈಕೋರ್ಟ್ ಇನ್ನೊಂದು ತೀರ್ಪು

ವಿಚ್ಛೇಧನಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್ ಮಹತ್ವದ ಆದೇಶ.

High Court Verdict On Divorce: ಸದ್ಯ ಭಾರತೀಯ ಕಾನೂನಿನಲ್ಲಿ ಮದುವೆಗೆ ಸಂಬಂಧಿಸಿದಂತೆ ಅನೇಕ ತಿದ್ದುಪಡಿಗಳಿವೆ. ಮದುವೆಯಾಗಲಿ, ಮದುವೆಯ ವಿಚ್ಛೇಧನವಾಗಲಿ ಕಾನೂನಿನ ಪ್ರಕಾರವೇ ನಡೆಯಬೇಕಾಗುತ್ತದೆ.

ಕಾನೂನಿನ ನಿಯಮವನ್ನು ಉಲ್ಲಂಘನೆಯಾದರೆ ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಸದ್ಯ ಹೈಕೋರ್ಟ್ ಮದುವೆಯ ವಿಚ್ಛೇಧನಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಯಾವ ಸಂದರ್ಭದಲ್ಲಿ ವಿಚ್ಛೇಧನ ನೀಡಬಹುದು ಎನ್ನುವ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದೆ.

High Court New Order
Image Credit: Indialegallive

ಹೆಂಡತಿಯ ಈ ರೀತಿಯ ವರ್ತನೆಗೆ ವಿಚ್ಛೇದನ ನೀಡಬಹುದು
ಪತ್ನಿಯ ಹೊಂದಾಣಿಕೆಯಾಗದ ವರ್ತನೆಯಿಂದ ಮಾನಸಿಕ ಕ್ರೌರ್ಯಕ್ಕೆ ಒಳಗಾದ ವ್ಯಕ್ತಿಯೊರವರು ವಿಚ್ಛೇಧನ ನೀಡಲು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಸುರೇಶ ಕುಮಾರ್ ಕೈಟ್ ನೇತೃತ್ವದ ನ್ಯಾಯಪೀಠ ಮಂಗಳವಾರ ನೀಡಿದ ತೀರ್ಪಿನಲ್ಲಿ ಪತಿಯ ಮಾನವೀಯ ಮೇರೆಗೆ ವಿಚ್ಛೇಧನವನ್ನು ನಿರಾಕರಿಸಿದ ಕುಟುಂಬ ನ್ಯಾಯಾಲಯ ಆದೇಶವನ್ನು ತಿರಸ್ಕರಿಸಿದೆ.

ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯ ಮಹತ್ವದ ಆದೇಶವನ್ನು ಹೊರಡಿಸಿದೆ.ಪತಿಯ ಮೇಲ್ಮನವಿಗೆ ಅನುಮತಿ ನೀಡಿದ ನ್ಯಾಯಾಲಯ “ಸಂಗಾತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅನುಚಿತ ಮತ್ತು ಮಾನಹಾನಿಕರ ನಡವಳಿಕೆಯು ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

High Court Verdict On Divorce
Image Credit: Vgsfamilylawyers

ಹೈಕೋರ್ಟ್ ಮಹತ್ವದ ಆದೇಶ
ತನ್ನ ಪತಿ ತನ್ನ ಸಹದ್ಯೋಗಿಗಳು ಮತ್ತು ಮಹಿಳಾ ಸ್ನೇಹಿತರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎನ್ನುವ ಪತ್ನಿಯ ಆಧಾರರಹಿತ ಆರೋಪವು ಗಂಡನ ಮನಸ್ಸನ್ನು ಹಾನಿಗೊಳಿಸುತ್ತದೆ ಮತ್ತು ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಹೈಕೋರ್ಟ್ ಹೇಳಿದೆ.

Join Nadunudi News WhatsApp Group

ಹಾಗಾಗಿ ಅರ್ಜಿದಾರರು ವೈವಾಹಿಕ ಜೀವನದಲ್ಲಿ ಮಾನಸಿಕ ಕ್ರೌರ್ಯಕ್ಕೆ ಬಲಿಯಾಗಿದ್ದು, ಪ್ರಕರಣವನ್ನು ಎಳೆದುಕೊಂಡು ಹೋಗುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರುತ್ತೇವೆ. ಆದ್ದರಿಂದ, ನಾವು ಈ ತೀರ್ಪನ್ನು ತಳ್ಳಿಹಾಕುತ್ತೇವೆ ಮತ್ತು 1955 ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 (1) (IA) ಅಡಿಯಲ್ಲಿ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನವನ್ನು ನೀಡುತ್ತೇವೆ ಎಂದು ಹೈಕೋರ್ಟ್ ಹೇಳಿದೆ.

Join Nadunudi News WhatsApp Group