Honda Activa 2024: ಇನ್ಮುಂದೆ ಕಾರುಗಳ ಈ ಫೀಚರ್ ಆಕ್ಟಿವಾ ಸ್ಕೂಟರ್ ನಲ್ಲಿ, ಬಂತು ಹೊಸ ಆಕ್ಟಿವಾ ಸ್ಕೂಟರ್.

ಕಾರ್ ನ ಈ ಫೀಚರ್ ಹೊಸ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ

Honda Activa 2024 Smart Key Feature: ಈಗ ಭಾರತದಲ್ಲಿ ಸ್ಕೂಟರ್‌ ಗಳಿಗೆ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ ಮತ್ತು ಜನರು ಅವುಗಳನ್ನು ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಈಗಂತೂ ಹಲವು ಟಾಪ್ ಬ್ರಾಂಡೆಡ್ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್ ಕಂಪನಿಗಳು ಅತ್ಯಾಧುನಿಕ ಫೀಚರ್ ನ ಸ್ಕೂಟರ್ ಗಳನ್ನೂ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿವೆ. ಇನ್ನು ಅದೆಷ್ಟೇ ಹೈಟೆಕ್ ಫೀಚರ್ ಇರುವ ಸ್ಕೂಟರ್ ಗಳು ಮಾರುಕಟ್ಟೆಯನ್ನು ಪ್ರವೇಶಿಸಿದರು ಕೂಡ ಮಾರುಕಟ್ಟೆಯಲ್ಲಿ HONDA Scooter ನ ಬೇಡಿಕೆ ಕಡಿಮೆ ಆಗುವುದಿಲ್ಲ ಎನ್ನಬಹುದು.

ಕಂಪನಿಯು ತನ್ನ Activa ಮಾದರಿಯನ್ನು ಅನೇಕ ಫೀಚರ್ ಗಳನ್ನೂ ಆಡ್ ಮಾಡುತ್ತ ಗ್ರಾಹಕರಿಗೆ ಪರಿಚಯಿಸುತ್ತಿದೆ. ಸದ್ಯ ಕಂಪನಿಯು 2024 ರ ಆಕ್ಟಿವಾ ಸ್ಕೂಟರ್ ನಲ್ಲಿ ಈ ವಿಶೇಷ ಫೀಚರ್ ಅನ್ನು ನೀಡಲು ಮುಂದಾಗಿದೆ. ಈಗ ನೀವು ಕಾರ್ ನಲ್ಲಿರುವ ಫೀಚರ್ ಅನ್ನು ಹೋಂಡಾ ಸ್ಕೂಟರ್ ನಲ್ಲಿ ನೋಡಬಹುದು.

Honda Activa 2024 Smart Key Feature
Image Credit: Bikewale

ಇನ್ಮುಂದೆ ಕಾರುಗಳ ಈ ಫೀಚರ್ ಆಕ್ಟಿವಾ ಸ್ಕೂಟರ್ ನಲ್ಲಿ
ಇನ್ನು 2024 ಆಕ್ಟಿವಾದಲ್ಲಿನ ಒಂದು ವೈಶಿಷ್ಟ್ಯವು ಎಲ್ಲರ ಗಮನವನ್ನು ಸೆಳೆಯುತ್ತಿದೆ, ಇದು ಈ ಸ್ಕೂಟರ್‌ ನ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗಿದೆ. ಹೌದು, ಹೋಂಡಾ ಸ್ಕೂಟರ್ 125 ಸಿಸಿ ಫುಲ್ ಇಂಜಿನ್ ಹೊಂದಿದ್ದರೂ, ಈ ಸ್ಕೂಟರ್ ಸುಮಾರು 50 ಮೀ ಮೈಲೇಜ್ ನೀಡುತ್ತದೆ. ಮೈಲೇಜ್ ಗಿಂತಲೂ ವಿಶೇಷ ಫೀಚರ್ ಅನ್ನು ನೀವು ಆಕ್ಟಿವಾದಲ್ಲಿ ನೋಡಬಹುದು. ಹೊಸ ಆಕ್ಟಿವಾ ಟಾಪ್ ಮಾದರಿಯಲ್ಲಿ ನೀವು ಸ್ಮಾರ್ಟ್ ಕೀ ಆಯ್ಕೆಯನ್ನು ಪಡೆಯುತ್ತೀರಿ.

2024 ಹೋಂಡಾ ಆಕ್ಟಿವಾ ರೂಪಾಂತರದಲ್ಲಿ ನೀವು ಸ್ಮಾರ್ಟ್ ಫೈಟರ್ ಮತ್ತು ಸ್ಮಾರ್ಟ್ ಕೀಯಂತಹ ಸ್ಮಾರ್ಟ್ ಅನ್‌ ಲಾಕ್ ವೈಶಿಷ್ಟ್ಯಗಳನ್ನು ಕಾಣಬಹುದು. ಇದು ಈ ಸ್ಕೂಟರ್‌ ನ ಸವಾರಿಯ ಅನುಭವವನ್ನು ಇನ್ನಷ್ಟು ಆಹ್ಲಾದಕರವಾಗಿಸುತ್ತದೆ. ಇದರ ಸಹಾಯದಿಂದ ನೀವು ಸ್ಕೂಟರ್ ಅನ್ನು ನಿಲ್ಲಿಸಿದ್ದರೆ, ನೀವು ಸುಮಾರು 20 ಮೀಟರ್ ದೂರದಿಂದ ಸ್ಕೂಟರ್ ಅನ್ನು ಕಂಡುಕೊಳ್ಳಬಹುದು. ನಿಮ್ಮಿಂದ ದೂರ ಇರುವ ಈ ಸ್ಕೂಟರ್ 20 ಮೀಟರ್ ದೂರ ಇದ್ದರು ಸ್ಮಾರ್ಟ್ ಕಿ ಫೀಚರ್ ನ ಮೂಲಕ ಬ್ಲಿಂಕ್ ಆಗುವ ಮೂಲಕ ನಿಮಗೆ ಕಾಣಿಸುತ್ತದೆ.

Honda Activa Smart Key Feature
Image Credit: Financial Express

ಬಂತು ಹೊಸ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್
HONDA ಇದೀಗ Electric ವಿಭಾಗದಲ್ಲಿ ಸಂಚಲನ ಮೂಡಿಸಲು ತನ್ನ ಹೊಚ್ಚ ಹೊಸ Activa Electric ಮಾದರಿಯನ್ನು ಪರಿಚಯಿಸಲು ನಿರ್ಧರಿಸಿದೆ. ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್‌ ಅತಿ ಹೆಚ್ಚು ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಗಳ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ. ಈ ಸ್ಕೂಟರ್ ಅನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 100-130 ಕಿಲೋಮೀಟರ್ ವರೆಗೆ ಮೈಲೇಜ್ ಅನ್ನು ಪಡೆಯಬಹುದು. ಇನ್ನು ಆಕ್ಟಿವಾ ಎಲೆಕ್ಟ್ರಿಕ್‌ ನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಕಂಪನಿಯು ಅನೇಕ ಅದ್ಭುತ ವೈಶಿಷ್ಟ್ಯಗಳನ್ನು ವೈಶಿಷ್ಟ್ಯಗಳನ್ನು ಅಳವಡಿಸಿದೆ.

Join Nadunudi News WhatsApp Group

ಈ ಸ್ಕೂಟರ್ ನಲ್ಲಿ ಡಿಜಿಟಲ್ ಸ್ಪೀಡೋಮೀಟರ್, ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್, ಡಿಜಿಟಲ್ ಡಿಸ್ಪ್ಲೇ, ಕಡಿಮೆ ಬ್ಯಾಟರಿ ಇಂಡಿಕೇಟರ್, ಡಿಜಿಟಲ್ ಓಡೋಮೀಟರ್, ಸೈಡ್ ಸ್ಟ್ಯಾಂಡ್ ಸೆನ್ಸರ್, ಮಾನಿಟರ್, ಹೆಡ್‌ಲೈಟ್, ರೇಂಜ್ ಪೋರ್ಟ್ ಸೇರಿದಂತೆ ಅನೇಕ ಆಧುನಿಕ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇನ್ನು ಶೀಘ್ರದಲ್ಲೇ ಬಿಡುಗಡೆ ಆಗಲಿರುವ ಆಕ್ಟಿವಾ ಎಲೆಕ್ಟ್ರಿಕ್‌ ನ ಬೆಲೆಯ ಬಗ್ಗೆ ಕೂಡ ಅಧಿಕೃತ ಮಾಹಿತಿ ಇಲ್ಲವಾದರೂ 60,000 ರಿಂದ 90,000 ರೂ. ಗಳ ಬೆಲೆಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಅಂದಾಜಿಸಲಾಗಿದೆ.

Honda Activa 2024
Image credit: Live Mint

Join Nadunudi News WhatsApp Group